ಬೆಂಗಳೂರು:ರಾಜಧಾನಿಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ತೀವ್ರ ರೀತಿಯಲ್ಲಿ ಹೆಚ್ಚಳವಾಗುತ್ತಿದ್ದು, ಈವರೆಗೆ 648 ಸೋಂಕಿತರು ಕಂಡುಬಂದಿದ್ದಾರೆ. ಪ್ರತಿಯೊಂದು ಗಲ್ಲಿಗೂ ಸೋಂಕಿತರು ಕಂಡು ಬರುತ್ತಿದ್ದು, ಕಂಟೇನ್ಮೆಂಟ್ ಸಂಖ್ಯೆ 116ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಬೇರೆ ಜಿಲ್ಲೆಗಳಲ್ಲಿ ಹೊರ ರಾಜ್ಯಗಳಿಂದ ಬಂದ ವಲಸಿಗರಲ್ಲೇ ಸೋಂಕು ಹೆಚ್ಚಾಗಿ ಕಂಡುಬರುತ್ತಿದೆ. ಆದರೆ, ಬೆಂಗಳೂರಿನಲ್ಲಿ ವಲಸಿಗರಿಗಿಂತ ಹೆಚ್ಚಾಗಿ ಕೆಮ್ಮು, ನೆಗಡಿ, ಶೀತಜ್ವರ ಹಾಗೂ ಉಸಿರಾಟ ತೊಂದರೆ ಇರುವವರೇ ಹೆಚ್ಚಾಗಿ ಸೋಂಕಿಗೆ ಒಳಗಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಮಕ್ಕಳು, ವೃದ್ಧರು, ಗರ್ಭಿಣಿಯರು ಹಾಗೂ ವಿವಿಧ ಕಾಯಿಲೆಗಳಿಂದ ಬಳಲುವವರು ಮನೆಯಿಂದ ಹೊರಗೆ ಬರುವುದು ಅಪಾಯಕಾರಿಯಾಗಿ ಪರಿಣಮಿಸಿದೆ.
ರಾಜಧಾನಿಯಲ್ಲಿ ಶೇ.45ಕ್ಕಿಂತ ಹೆಚ್ಚು ವೃದ್ಧರಿಗೆ ಸೋಂಕು ಕಂಡುಬರುತ್ತಿದ್ದು, ಈವರೆಗೆ 29 ಜನರು ಮೃಪಟ್ಟಿದ್ದು, ಇದರಲ್ಲಿ ಶೇ.85 ಮಂದಿ 60 ವರ್ಷ ಮೇಲ್ಪಟ್ಟವರಾಗಿದ್ದಾರೆ.
ಶೇ.90 ಪೂರ್ಣಗೊಂಡಿದೆ ಮನೆ ಮನೆ ಸಮೀಕ್ಷೆ
ನಗರದ ಬಿಬಿಎಂಪಿ ವ್ಯಾಪ್ತಿಯ ಕೆಂದ್ರ ಭಾಗದಲ್ಲಿ 38 ಲಕ್ಷ ಮನೆಗಳಲ್ಲಿ ಪ್ರತಿ ಮನೆಗೂ ಭೇಟಿ ಮಾಡಿ, ವಿವಿಧ ಅನಾರೋಗ್ಯ ಸಮಸ್ಯೆ ಉಳ್ಳವರನ್ನು ಪತ್ತೆ ಮಾಡಲಾಗುತ್ತಿತ್ತು. ಈಗಾಗಲೇ ಶೇ.90 ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ಅದರಲ್ಲಿ 2,695 ಜನರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿದ್ದು, ಅವರ ಗಂಟಲು ದ್ರವ ಪರೀಕ್ಷೆ ಮಾಡಲಾಗುತ್ತಿದೆ. ಬೆಂಗಳೂರು ಹೊರವಲಯದಲ್ಲಿ ಸುಮಾರು 17 ಲಕ್ಷ ಮನೆಗಳಲ್ಲಿ ಆರೋಗ್ಯ ಸಮೀಕ್ಷೆಯನ್ನು 2 ಬಾರಿ ಮಾಡಲಾಗಿದ್ದು, ಸೋಂಕಿನ ಲಕ್ಷಣಗಳಿದ್ದಲ್ಲಿ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ. ಆದರೆ ಪ್ರತಿನಿತ್ಯ ಸೋಂಕಿತರು ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ.
ಕಂಟೇನ್ಮೆಂಟ್ ವಿಳಂಬ
ಕರೊನಾ ಪಾಸಿಟಿವ್ ಕಂಡುಬಂದ ವ್ಯಕ್ತಿಯ ಗಂಟಲು ದ್ರವ ಪರೀಕ್ಷಾ ವರದಿ ಬರುವುದು ವಿಳಂಬವಾಗುತ್ತಿರುವುದು ಒಂದು ಕಡೆಯಾದರೆ, ಸೋಂಕಿತರ ಸಂಪರ್ಕದವರನ್ನು ಕ್ವಾರಂಟೈನ್ ಮಾಡುವ ಹಾಗೂ ಅವರ ವಾಸದ ಮನೆಗಳ ಬಳಿ ಕಂಟೇನ್ಮೆಂಟ್ ಮಾಡುವ ಕಾರ್ಯ ವಿಳಂಬವಾಗುತ್ತಿದೆ. ಇದಕ್ಕೆ ವರದಿ ವಿಳಂಬ ಹಾಗೂ ಸೋಂಕಿತ ವ್ಯಕ್ತಿಗಳು ಸರಿಯಾದ ಮಾಹಿತಿ ಕೊಡದ ಹಿನ್ನೆಲೆಯಲ್ಲಿ ಈ ರೀತಿ ವಿಳಂಬವಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.
ಹಲಸೂರು ಮಾರುಕಟ್ಟೆಯಲ್ಲಿ ಸೋಂಕಿತರು
ಹಲಸೂರಿನ ಮಾರುಕಟ್ಟೆಯ ಮೂರು ಮಳಿಗೆಯಲ್ಲಿ ವ್ಯಾಪಾರ ಮಾಡಿಕೊಂಡಿದ್ದವರಲ್ಲಿ ಮೂರು ಜನರಿಗೆ ಕರೊನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಲಾಗಿದ್ದು, ಅವರ ಸಂಪರ್ಕದ 10 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಚಾಮರಾಜಪೇಟೆಯ 4ನೇ ಕ್ರಾಸ್​ನಲ್ಲಿ ತಮಿಳುನಾಡಿಗೆ ಹೋಗಿಬಂದಿದ್ದ, ಹೇರ್ ಕಟಿಂಗ್ ಶಾಪ್​ನ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಅವರ ಸಂಪರ್ಕದಲ್ಲಿದ್ದ 7 ಜನರನ್ನು ಕ್ವಾರಂಟೈನ್​ಗೆ ಶನಿವಾರ ಕರೆದೊಯ್ಯಲಾಯಿತು. ಚಿಕ್ಕಪೇಟೆಯಲ್ಲಿ ವೈದ್ಯರೊಬ್ಬರಿಗೆ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಅವರಿಂದ ಚಿಕಿತ್ಸೆ ಪಡೆದ ಹಾಗೂ ಕುಂಟುಂಬದವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ.
ಹನ್ನೊಂದು ವಾರ್ಡ್​ನಲ್ಲಿ 3ಕ್ಕಿಂತ ಹೆಚ್ಚು ಪ್ರಕರಣ
ನಗರಲ್ಲಿ 116 ಪ್ರದೇಶಗಳಲ್ಲಿ ಕಂಟೇನ್ಮೆಂಟ್ ವಿಧಿಸಲಾಗಿದ್ದು, ಈವರೆಗೆ 96 ವಾರ್ಡ್ ಗಳಲ್ಲಿ ಸೋಂಕಿತರು ಕಂಡುಬಂದಿದ್ದಾರೆ. ಇದರಲ್ಲಿ ಸಿದ್ದಾಪುರ, ಅಗರ, ವಿಶ್ವೇಶ್ವರಪುರ, ಸಿಂಗಸಂದ್ರ, ಚಲವಾದಿಪಾಳ್ಯ, ರಾಯಪುರ, ಹೂಡಿ, ಗುರಪ್ಪನಪಾಳ್ಯ, ಬೆಳ್ಳಂದೂರು, ಚಾಮರಾಜಪೇಟೆ ಹಾಗೂ ಧರ್ಮರಾಯಸ್ವಾಮಿ ದೇವಾಲಯ ವಾರ್ಡ್​ಗಳಲ್ಲಿ ತಲಾ 3 ಪ್ರದೇಶಗಳಲ್ಲಿ ಕಂಟೇನ್ಮೆಂಟ್ ವಿಧಿಸಲಾಗಿದೆ.
ಎಸ್.ಕೆ. ಗಾರ್ಡನ್​ನ ಕೊಳೆಗೇರಿಯಲ್ಲಿ ಒಟ್ಟು 6 ಪ್ರದೇಶಗಳಲ್ಲಿ ಕಂಟೇನ್ಮೆಂಟ್ ವಿಧಿಸಲಾಗಿದೆ. ಪಾದರಾಯನಪುರದಲ್ಲಿ ವಾರ್ಡ್​ನಲ್ಲಿ ಈವರೆಗೆ 70 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇಡೀ ವಾರ್ಡ್​ನಲ್ಲಿ ಕ್ಲಸ್ಟರ್ ಕಂಟೇನ್ಮೆಂಟ್ ಮುಂದುವರಿಸಲಾಗಿದೆ.
VIDEO| ಸಿಲಿಕಾನ್​ ಸಿಟಿಗೆ ಕಾದಿದೆಯಾ ಮಹಾ ಗಂಡಾಂತರ…?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 12 =
Remember me
