ವಿಜಯಪುರ:ಕರೊನಾ ಕುರಿತು ಸಾಮಾಜಿಕ ಜಾಲತಾಣದಲ್ಲಿ ಇಲ್ಲ ಸಲ್ಲದ ಮಾಹಿತಿ ಅಪ್‌ಲೋಡ್ ಮಾಡಿದ ನಿಡಗುಂದಿ ಪಟ್ಟಣದ ಯುವಕನಿಗೆ ತಹಸೀಲ್ದಾರ್ ಹಾಗೂ ದಂಡಾಧಿಕಾರಿ ಶಿವಲಿಂಗಪ್ರಭು ವಾಲಿ ಒಂದು ವಾರ ಕಾಲ ಪಟ್ಟಣದ ಸ್ವಚ್ಛತಾ ಕಾರ್ಯಕ್ಕೆ ನಿಯೋಜಿಸಿ ಆದೇಶಿಸಿದ್ದಾರೆ.
ಪಟ್ಟಣದ ಪ್ರಕಾಶ ಹನುಮಂತ ಚಳ್ಳಮರದ (24) ದಂಡನೆಗೊಳಗಾದ ವ್ಯಕ್ತಿ. ಈತ ಕರೊನಾ ಬಗ್ಗೆ ಇಲ್ಲ ಸಲ್ಲದ ಸುದ್ದಿ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಾಮರಸ್ಯ ಹಾಗೂ ಶಾಂತಿ ಭಂಗ ಮಾಡುತ್ತಿದ್ದ. ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಟ್ಟಣದ ಪಿಎಸ್‌ಐ ಚಂದ್ರಶೇಖರ ಚಿಕ್ಕೋಡಿ ತಹಸೀಲ್ದಾರ್ ವಾಲಿ ಅವರಿಗೆ ಮನವಿ ಸಲ್ಲಿಸಿದ್ದರು.
ಮನವಿ ಆಲಿಸಿದ ತಹಸೀಲ್ದಾರ್ ವಾಲಿ ಅವರು ಪ್ರಕಾಶ ಚಳ್ಳಮರದನಿಗೆ ಏ. 30ರಿಂದ ಮೇ 5ರವರೆಗೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸ್ವಚ್ಛತಾ ಕೆಲಸಗಳನ್ನು ಮಾಡಿಸಲು ಪ.ಪಂ. ಮುಖ್ಯಾಧಿಕಾರಿಗೆ ಒಪ್ಪಿಸಿ ಆದೇಶಿಸಿದ್ದಾರೆ. ಮೇ 6ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲು ಆದೇಶಿಸಿದ್ದಾರೆ.
ದುಡಿದ ಹಣವನ್ನೆಲ್ಲ ದೇವಸ್ಥಾನಕ್ಕೆ ನೀಡುತ್ತಿದ್ದ ಈ ವ್ಯಕ್ತಿ ನೆರೆಮನೆ ದಂಪತಿಯ ಕೊಲೆ ಮಾಡುವಷ್ಟು ಕೆಟ್ಟವನಾಗಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 4 =
Remember me
