ಬೆಂಗಳೂರು:ಮಹಾಮಾರಿ ಕರೊನಾ ವೈರಸ್​ ಜಾಗತಿಕವಾಗಿ ಅಟ್ಟಹಾಸ ಮೆರೆಯುತ್ತಿದ್ದು ಎಲ್ಲೆಡೆ ಜನರು ಭಯಭೀತಗೊಂಡಿದ್ದಾರೆ. ಆರೋಗ್ಯ ಬಿಕ್ಕಟ್ಟಿನಂತಹ ಸಂದಿಗ್ಧ ಸಮಯದಲ್ಲಿ ರಾಜ್ಯದ ಜನರಿಗೆ ಸಾಂಕ್ರಮಿಕ ರೋಗದ ಬಗ್ಗೆ ಅರಿವು ಮೂಡಿಸಲು ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ಫೋನ್​ಇನ್​ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ(ಸಾಂಕ್ರಾಮಿಕ ರೋಗಿಗಳ ವಿಭಾಗ) ಜಂಟಿ ನಿರ್ದೇಶಕ , ಕೋವಿಡ್​ 19 ನೋಡಲ್​ ಅಧಿಕಾರಿ ಡಾ.ಬಿ.ಜಿ. ಪ್ರಕಾಶ್​ ಕುಮಾರ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿ ಷರೀಫ್ ಅವರು​ ಭಾಗವಹಿಸಿ ಜನರ ಗೊಂದಲಗಳನ್ನು ಪರಿಹರಿಸಿದರು.
ಪಾಸಿಟಿವ್​ ಕೇಸ್​ ಬಂದ ಏರಿಯಾವನ್ನು ಕಂಟೈನ್ಮೆಂಟ್​ ಝೋನ್​ ಎಂದು ಘೋಷಿಸಿ ಸಂಪೂರ್ಣ ಲಾಕ್​ಡೌನ್​ ಮಾಡುತ್ತೇವೆ. ಅಲ್ಲಿ ಪ್ರವೇಶ ಮತ್ತು ನಿರ್ಗಮನ​ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ. ಪ್ರವೇಶ ದ್ವಾರದಲ್ಲಿ ಪೊಲೀಸ್​ ಮತ್ತು ಆರೋಗ್ಯ ಇಲಾಖೆಯವರು ಒಳಹೋಗುವವರನ್ನು ಪರೀಕ್ಷಿಸಿ, ಪರಿಶೀಲಿಸಿಯೇ ಒಳಬಿಡುತ್ತಾರೆ ಎನ್ನವ ಮೂಲಕ ಕರೆದಾರರೊಬ್ಬರ ಗೊಂದಲಕ್ಕೆ ಪ್ರಕಾಶ್​ ಕುಮಾರ್ ತೆರೆ ಎಳೆದರು. ಇದೇ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸಾರ್ವಜನಿಕರ ಜವಾಬ್ದಾರಿ ಎಂದರು.
ಹೀಗೆ ಸಾಕಷ್ಟು ಮಂದಿ ಫೋನ್ ಇನ್​ ಕಾರ್ಯಕ್ರಮಕ್ಕೆ ಕರೆ ಮಾಡಿ ತಮ್ಮ ಗೊಂದಲಗಳನ್ನು ಬಗೆಹರಿಸಿಕೊಂಡರು. ಇದರೊಂದಿಗೆ ರಾಜ್ಯದಲ್ಲಿ ಕರೊನಾ ಪರಿಸ್ಥಿತಿ ಹೇಗಿದೆ? ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಾ ಅಥವಾ ಕಡಿಮೆಯಾಗುತ್ತಾ? ಹಾಗೂ ಸೋಂಕು ನಿಂಯತ್ರಂಣಕ್ಕೆ ಆರೋಗ್ಯ ಇಲಾಖೆ ಯಾವೆಲ್ಲಾ ಕ್ರಮಕೈಗೊಂಡಿದೆ? ಜನರು ಏನೇನು ಮಾಡಬೇಕು? ಎಂಬುದರ ಬಗ್ಗೆ ಪ್ರಕಾಶ್​ ಕುಮಾರ್ ಅವರು ವಿವರಣೆ ನೀಡಿದ್ದು, ಈ ಎಲ್ಲಾ ಉಪಯುಕ್ತ ಮಾಹಿತಿ ನಾಳಿನ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಲಿದೆ.
https://www.facebook.com/VVani4U/videos/591676434771024/
ರಾಜ್ಯದಲ್ಲಿ 489ಕ್ಕೇರಿದ ಕರೊನಾ ಸೋಂಕಿತರ ಸಂಖ್ಯೆ: ಬೆಂಗಳೂರಿನಲ್ಲಿ, ಬೆಳಗಾವಿಯ ಹೀರೆಬಾಗೇವಾಡಿಯಲ್ಲಿ ತಲಾ 6 ಹೊಸ ಪ್ರಕರಣಗಳು ಪತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
