ಬೆಂಗಳೂರು:ಕರ್ನಾಟಕದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಗಂಟೆ ಗಂಟೆಗೂ ಹೆಚ್ಚುತ್ತಲೇ ಇದೆ. ಇಂದು ಬೆಳಗ್ಗೆ 8 ಗಂಟೆಯವರೆಗೆ 146 ಇದ್ದ ಸಂಖ್ಯೆ ಸಂಜೆ 5 ಗಂಟೆಯ ವೇಳೆಗೆ 151ಕ್ಕೆ ಏರಿದೆ.
ಕರೊನಾ ಸೋಂಕಿನಿಂದ ಇಲ್ಲಿಯವರೆಗೆ ನಾಲ್ವರು ಮೃತಪಟ್ಟಿದ್ದರೆ, 12 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಸೋಂಕಿತರ ಸಂಖ್ಯೆ ನಿನ್ನೆ ಸಂಜೆ 5 ಗಂಟೆಯ ವೇಳೆಗೆ 144 ಇತ್ತು.
ಓರ್ವ ಗರ್ಭಿಣಿ ಸೇರಿದಂತೆ 132 ಮಂದಿಯನ್ನು ಪ್ರತ್ಯೇಕ ವಾರ್ಡ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಸರ್ಕಾರ ಹೇಳಿದೆ. ಮೂವರನ್ನು ಐಸಿಯುನಲ್ಲಿ ಇರಿಸಲಾಗಿದೆ.
ಬೆಂಗಳೂರಿನಲ್ಲಿ ಇಲ್ಲಿಯವರೆಗಿನ ಸೋಂಕಿತರ ಸಂಖ್ಯೆ 57 ಇದ್ದರೆ, ಮೈಸೂರಿನಲ್ಲಿ 28, ದಕ್ಷಿಣ ಕನ್ನಡದಲ್ಲಿ 12, ಉತ್ತರ ಕನ್ನಡ ಜಿಲ್ಲೆಯಲ್ಲಿ 8, ಬೀದರ್‌ನಲ್ಲಿ 10, ಬೆಳಗಾವಿ ಮತ್ತು ಚಿಕ್ಕಬಳ್ಳಾಪುರ ತಲಾ 7, ಕಲಬುರ್ಗಿ 5, ಬಳ್ಳಾರಿ 6, ದಾವಣಗೆರೆ, ಉಡುಪಿಯಲ್ಲಿ ತಲಾ 3, ಧಾರವಾಡ, ಕೊಡಗು, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ತುಮಕೂರಿನಲ್ಲಿ ತಲಾ 1, ಸೋಂಕಿತರಿದ್ದಾರೆ.
ಕರೊನಾ ವೈರಸ್​ ಗಾಳಿಯಿಂದ ಹರಡುವುದಕ್ಕೆ ಆಧಾರಗಳಿಲ್ಲ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸ್ಪಷ್ಟನೆ

ಸೋಂಕಿತರಿಗೆ ಔಷಧ ಪೂರೈಸಲು ಬಂದಿದೆ ‘ಪೃಥ್ವಿ’: ದೂರದಿಂದಲೇ ನಿಯಂತ್ರಿಸಬಹುದಾದ ರೋಬಾಟ್‌ ಇದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 4 =
Remember me
