ಹೆಮ್ಮಾರಿ ಕರೊನಾಮತ್ತೆ ತನ್ನ ಕರಾಳರೂಪ ಪ್ರದರ್ಶನ ಮಾಡೋಕೆ ವೇದಿಕೆ ಸಜ್ಜುಗೊಳಿಸ್ತಿದೆ. ಪಕ್ಕದ ಕೇರಳದಲ್ಲಿ ಈಗಾಗಲೇ ಆರ್ಭಟ ಶುರು ಮಾಡಿರೋ ಕಿಲ್ಲರ್ ವೈರಸ್, ಕರ್ನಾಟಕಕ್ಕೂ ದೂರವೇನಿಲ್ಲ. ಅದಕ್ಕೆ ಸಾಕ್ಷಿ ರಾಜಧಾನಿಯಲ್ಲಿ ಬರ್ತಿರೋ ಹೊಸ ಪ್ರಕರಣಗಳು. ಅಲ್ಲಿಗೆ ಅಕ್ಟೋಬರ್​ಗೆ ಬರ್ಬೇಕಿದ್ದ 3ನೇ ಅಲೆ ಈಗಾಗಲೇ ಬಂದ್ಬಿಡ್ತಾ? ಈ ಮೂಲಕ ಮತ್ತೆ ಮಹಾಮಾರಿ ತನ್ನ ಆಟ ತೋರಿಸೋಕೆ ಶುರು ಮಾಡೇ ಬಿಡ್ತಾ ಅನ್ನೋ ಪ್ರಶ್ನೆ ಕಾಡಲಾರಂಭಿಸಿದೆ. ಅದಕ್ಕೆ ಕಾರಣ ನಿಧಾನವಾಗಿ ಹೆಚ್ತಿರೋ ಕೇಸ್.
ಕರೊನಾ ಅನ್ನೋ ಮೋಸ್ಟ್ ಡೇಂಜರಸ್ ಡೆಡ್ಲಿ ವೈರಸ್ ನಮ್ಮನ್ನು ಬಿಟ್ಟು ಹೋಗುವ ಯಾವ ಲಕ್ಷಣವೂ ಕಾಣಿಸುತ್ತಲೇ ಇಲ್ಲ. ಹೇಗೆ ಮೊದಲ ಅಲೆಯ ಬಳಿಕ ಚೂರು ಗ್ಯಾಪ್ ಕೊಟ್ಟು ಎರಡನೇ ಅಲೆ ಬಂತೋ, ಹಾಗೆಯೇ ಎರಡನೇ ಅಲೆಯಿಂದ ಉಸಿರಾಡೋಕು ಸಮಯ ಕೊಡದೆ ಮೂರನೇ ಅಲೆ ಬಂದೇ ಬಿಡ್ತಾ ಅನ್ನೋ ಅನುಮಾನ ಹುಟ್ಟುವಂತೆ ಮಾಡಿದೆ. ಈ ಮೂಲಕ ಹೆಮ್ಮಾರಿ ಅಟ್ಟಹಾಸ ಯಾವ ಪರಿಯಲ್ಲಿದೆ? ಯಾವ ಲೆವೆಲ್​​ನಲ್ಲಿ ಆರ್ಭಿಟುಸುತ್ತಿದೆ ಅಂದ್ರೆ ಅಕ್ಷರ ಅಕ್ಷರಶಃ ಸಹ ಹೊಸ ಕೇಸ್​ಗಳು ದಂಗು ಒಡೆಯುವಂತೆ ಮಾಡ್ತಿದೆ. ಅದಕ್ಕೇ ಸಾಕ್ಷಿಯೇ ನಮ್ಮ ಪಕ್ಕದ ರಾಜ್ಯ ಕೇರಳ.
ಮೂರನೇ ಅಲೆಗೆ ನಾಂದಿ ಹಾಡುತ್ತಾ ಹೊಸ ಪ್ರಕರಣ?ಮೊದಲ ಅಲೆ, ಎರಡನೇ ಅಲೆ.. ಆ ರೂಪಾಂತರ.. ಈ ರೂಪಾಂತರ ಅಂತ ಕಾಡಿದ್ದ ಕ್ರೂರಿ ಕರೊನಾ ವೈರಸ್ ಈಗ ಮತ್ತೆ ಮೂರನೇ ಅಲೆಯಾಗಿ ಅಪ್ಪಳಿಸೋಕೆ ಕಾಲು ಕೆರೆದುಕೊಂಡು ನಿಂತಂತೆ ಕಾಣ್ತಿದೆ. ಅದ್ರಲ್ಲೂ ಈಗೊಂದು ವಾರದಿಂದ ಏರಿಕೆ ಆಗುತ್ತಿರುವ ಕೇಸ್ ನೋಡಿದ್ರೆ ಮತ್ತೆ ಅದೇ ಕರಾಳ ದಿನಗಳು ಎದುರಾಗುತ್ತಾ ಅನ್ನೋ ಭಯ ಕಾಡುವಂತೆ ಮಾಡಿದೆ. ಅದ್ರಲ್ಲೂ ಒಂದು ಕಡೆ ಇಡೀ ದೇಶದ ಪ್ರಕರಣ ಒಂದು ಕಡೆ ಆದ್ರೆ, ಮತ್ತೊಂದು ಕಡೆ ನಮ್ಮ ಪಕ್ಕದ ರಾಜ್ಯ ಕೇರಳ ಇದ್ರಲ್ಲಿ ಅರ್ಧ ಪಾಲು ತನ್ನದಾಗಿಸಿರಿಕೊಂಡಿರುವುದು.
ಇಷ್ಟುದಿನ ಇಳಿಕೆ ಆಗ್ತಿದೆ ಅಂದುಕೊಂಡಿದ್ದ ಹೊಸ ಕರೊನಾ ಪ್ರಕರಣಗಳು ಇಳಿಕೆಯಾಗುವಂತೆ ಕಾಣಿಸುತ್ತಿಲ್ಲ. ಒಂದೆಡೆ ಪಾಸಿಟಿವಿಟಿ ದರ ಹೆಚ್ಚುತ್ತಿದ್ದರೆ, ದಿನದಿಂದ ದಿನಕ್ಕೆ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ಇದರ ನಡುವೆ ರಾಜ್ಯದಲ್ಲಿ ನೀಡಲಾದ ಕರೊನಾ ಲಸಿಕೆ ಡೋಸ್‌ಗಳ ಸಂಖ್ಯೆ 3 ಕೋಟಿ ದಾಟಿದ್ರು ಕೂಡ ಈ ಪ್ರಮಾಣದಲ್ಲಿ ಸೋಂಕು ಹೆಚ್ಚಳ ಆಗ್ತಿದ್ರೆ, ಮೂರನೇ ಇನ್ನೊಂದು ವಾರದೊಳಗೆ ಬಂದ್ರು ಅಚ್ಚರಿಯಿಲ್ಲ, ಅಲ್ಲಿಗೆ ಅಕ್ಟೋಬರ್​ಗೆ ಬರ್ಬೇಕಿದ್ದ 3ನೇ ಅಲೆ ಆಗಸ್ಟ್ ಮೊದಲ ವಾರದಲ್ಲೇ ವಕ್ಕರಿಸಬಹುದು.
ಊರೂರು ಸುತ್ತಿ ಬಂದವ್ರೇ ಈಗ ರಾಜ್ಯಕ್ಕೆ ಡೇಂಜರ್!ಕರ್ನಾಟಕದಲ್ಲಿ ಕರೊನಾ ವೈರಸ್ ಆರ್ಭಟ ಹೆಚ್ಚುತ್ತಿದ್ದು, ಕೋವಿಡ್ ಪ್ರಕರಣಗಳ ಸಂಖ್ಯೆ ನಿಯಂತ್ರಣಕ್ಕೆ ಬರುವಂತೆ ಕಾಣುತ್ತಿಲ್ಲ. ಕರೊನಾ ಮೂರನೇ ಅಲೆ ಭೀತಿಯ ನಡುವೆ ಕೇರಳ, ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿ ಕರೊನಾ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು, ಇದ್ರ ಪರಿಣಾಮ ರಾಜ್ಯದಲ್ಲಿಯೂ ನಿಧಾನವಾಗಿ ಈಗ ಪಾಸಿಟಿವ್ ಸಂಖ್ಯೆ ಏರಿಕೆ ಆಗುತ್ತಾ ಸಾಗುತ್ತಿದೆ. ಪರಿಣಾಮ ಸಾವಿನ ಸಂಖ್ಯೆಯೂ ಏರುತ್ತಿದೆ. ಅದ್ರಲ್ಲೂ ಈಗ ರಾಜಧಾನಿ ಬೆಂಗಳೂರೇ ಕರೊನಾ ಟಾರ್ಗೆಟ್ ಪಾಯಿಂಟ್ ಆದಂತಿದೆ.
ಬೆಂಗಳೂರಲ್ಲಿ ಮತ್ತೆ ಮೊದಲೆರಡು ಅಲೆಯಂತೆ, ಈಗ ಮೂರನೇ ಅಲೆ ಮುನ್ಸೂಚನೆ ನಡುವೆ ಕೇಸ್​ಗಳ ಸ್ಫೋಟವೇ ಆಗ್ತಿದೆ. ಶನಿವಾರ ಮಹದೇವಪುರದ ಬಳಿಕ ಪಶ್ಚಿಮ ವಲಯದಲ್ಲೂ ಅಪಾರ್ಟ್ಮೆಂಟ್ ನಲ್ಲಿ ಕರೊನಾ ಕೇಸ್ ಪತ್ತೆಯಾಗಿದೆ. ಈ ಅಪಾರ್ಟ್​ಮೆಂಟ್​ನಲ್ಲಿ ಬರೋಬ್ಬರಿ 16 ಕೇಸ್ ಪತ್ತೆಯಾಗಿದ್ದು 72 ಮನೆಗಳಮ್ಮ ಸೀಲ್​ಡೌನ್ ಮಾಡಲಾಗಿದೆ. ಇದ್ರಲ್ಲಿ 12 ಜನ್ರು ಡಬಲ್ ಡೋಸ್ ಲಸಿಕೆ ಪಡೆದಿದ್ದಾರೆ. ಇನ್ನೊಂದು ಕಡೆ ಬಿನ್ನಿಪೇಟೆ ಬಳಿಯ ಅಪಾರ್ಟ್​ಮೆಂಟ್​ನಲ್ಲಿ 6 ಕೇಸ್ ಪತ್ತೆಯಾಗಿದ್ದು.. ಒಂದೇ ಕುಟುಂಬದ 6 ಜನರಿಗೆ ಪಾಸಿಟಿವ್ ಬಂದಿದೆ. ಇವ್ರೆಲ್ಲರದ್ದು ಕೂಡ ಟ್ರಾವೆಲ್ಟ್ ಹಿಸ್ಟರಿಯೇ ಡೇಂಜರ್ ಆಗಿದೆ.
ನೆರೆ ರಾಜ್ಯಗಳಿಂದ ಕರ್ನಾಟಕಕ್ಕೆ ಹೆಚ್ಚಾಗ್ತಿದೆ ಅಪಾಯ!ಒಂದು ಕಾಲದಲ್ಲಿ ಇಡೀ ದೇಶವೇ ಮಾದರಿ ಅಂತ ಪರಿಗಣಿಸಿದ್ದ ದೇವರನಾಡು ಕೇರಳದಲ್ಲಿ ನಿತ್ಯವೂ ಕರೊನಾ ಕೇಸ್ ಹೆಚ್ಚಳ ಆಗುತ್ತಲೇ ಇದೆ. ಅದು ಕೂಡ ಯಾವ ಲೆವೆಲ್​ನಲ್ಲಿ ಅಂದ್ರೆ ದಿನಕ್ಕೆ ಮಿನಿಮಮ್ ಟು ಮಿನಿಮಮ್ 20 ಸಾವಿರ. ಹೌದು.. ಹೆಚ್ಚೂ ಕಡಿಮೆ ದಿನಕ್ಕೆ 20 ಸಾವಿರಕ್ಕೂ ಹೆಚ್ಚು ಕೇಸ್ ಕೇರಳದಿಂದನೇ ರಿಪೋರ್ಟ್ ಆಗ್ತಿದ್ರೆ, ಮತ್ತೊಂದು ಕಡೆ ದೇಶದಲ್ಲಿ 40 ಸಾವಿರಕ್ಕೂ ಹೆಚ್ಚು ಕೇಸ್ ನಿತ್ಯವೂ ವರದಿ ಆಗುತ್ತಲೇ ಇದೆ. ಇನ್ನೊಂದು ಆತಂಕಕಾರಿ ವಿಚಾರ ಅಂದ್ರೆ ಈಗ ಬರ್ತಿರೋದು 2 ಡೋಸ್ ವ್ಯಾಕ್ಸಿನ್ ಪಡೆದವ್ರಿಗೂ ಕರೊನಾ ಅಟ್ಕಾಯಿಸಿಕೊಳ್ತಿರುವುದು.
ಅಟ್ ದಿ ಸೇಮ್ ಟೈಮ್ ಒಂದು ಕಡೆ ಕರೊನಾ ಮೂರನೇ ಅಲೆಯ ಭಯ ಜನ್ರಲ್ಲಿ ಹೆಚ್ಚಾಗಿ ಕಾಡುತ್ತಿದ್ರೆ, ಮತ್ತೊಂದು ಕಡೆ ಡೆಲ್ಟಾ ರೂಪಾಂತರಿಯ ಉಗ್ರಾವತರ ಬೆಚ್ಚಿಬೀಳಿಸುವಂತಿದೆ. ಅದ್ರಲ್ಲೂ ಈಗಾಗಲೇ ಡೆಲ್ಟಾ ವೈರಸ್ ಹಲವು ದೇಶದಲ್ಲಿ ದಾಳಿ ಮಾಡಿದೆ ಇದು ಚಿಕನ್​ಪಾಕ್ಸ್​ನಂತೆ ವೇಗವಾಗಿ ಹರಡಬಲ್ಲದು ಅಂತಲೂ ಹೇಳಿದ್ದು, ಜೊತೆಗೆ ಡೆಲ್ಟಾ ಮುಂದೆ ಯಾವ ವ್ಯಾಕ್ಸಿನ್ ಪಡೆದ್ರೂ ವಕ್ರ ದೃಷ್ಟಿ ಬೀಳದೆ ಇರಲು ಚಾನ್ಸೇ ಇಲ್ಲ ಅನ್ನೋದು ಕೂಡ ಯುಎಸ್ ತಜ್ಞರು ಬಿಚ್ಚಿಟ್ಟುರುವ ಕರಾಳ ಸತ್ಯ.
ಇದೆಲ್ಲದರ ನಡುವೆ ಇನ್ನೊಂದು ಶಾಕಿಂಗ್ ಸಂಗತಿ ಏನು ಅಂದ್ರೆ ಒಂದು ಕಡೆ ಕೇರಳ.. ಮತ್ತೊಂದು ಕಡೆ ಮಹಾರಾಷ್ಟ್ರ.. ಇನ್ನೊಂದು ಕಡೆ ತಮಿಳುನಾಡು ಹೀಗೆ ಮೂರು ರಾಜ್ಯಗಳಿಂದಲೂ ಹೆಚ್ಚು ಅಪಾಯ ಇರೋದು ಅಂದ್ರೆ ಅದು ಕರ್ನಾಟಕಕ್ಕೆ. ಯಾಕಂದ್ರೆ ಈ ಹಿಂದೆ ಆಗಿದ್ದು ಕೂಡ ಇದೇ ರಾಜ್ಯಗಳಿಂದ ಹೆಚ್ಚು ಅಪಾಯ ಮತ್ತು ಆಘಾತ. ಹೀಗಾಗಿಯೇ ಈಗ ಇದೇ ರಾಜ್ಯಗಳ ಮೇಲೆ ಹೆಚ್ಚು ಎಚ್ಚರಿಕೆ ಅಗತ್ಯವಹಿಸುವ ಅಗತ್ಯ ಇರೋದು ಸತ್ಯ. ಇದೇ ಕಾರಣದಿಂದ ಈಗ ಹದ್ದಿನ ಕಣ್ಣಿಟ್ಟು ಗಡಿಯಲ್ಲಿ ನೋಡುವಂತೆ ಸೂಚನೆ ಕೊಡಲಾಗಿದೆ. ಆರ್​ಟಿಪಿಸಿಆರ್ ನೆಗೆಟಿವ್ ರಿಪೊರ್ಟ್ ಇಲ್ಲಾಂದ್ರೆ ರಾಜ್ಯಕ್ಕೆ ನೋ ಎಂಟ್ರಿ.
ಕರ್ನಾಟಕದ ಮೇಲೆ ಕರೊನಾ ಕರಿನೆರಳು ಜೋರಾಗಿಯೇ ಇದೆ. 3ನೇ ಅಲೆ ನಿರೀಕ್ಷೆಗೂ ಮೊದಲೇ ಎಂಟ್ರಿಯಾಗೋ ಚಾನ್ಸ್ ಇದ್ದು, ಸೋ ನೆರೆ ರಾಜ್ಯಗಳಿಂದ ಹೆಚ್ಚು ಕರೊನಾ ಆಪತ್ತಿದೆ. ಅದಕ್ಕೆ ಕಾರಣ ಕೇಂದ್ರ ಅದೊಂದು ಅಲರ್ಟ್. ಮತ್ತೆ ಕರ್ನಾಟಕ ಸೇರಿ ಹತ್ತು ರಾಜ್ಯಗಳಲ್ಲಿ ಕರೊನಾ ಕೇಸ್ ಏರಿಕೆಯಾಗ್ತಿದೆ ಅಂತ ಕೇಂದ್ರ ಸರ್ಕಾರ ವಾರ್ನಿಂಗ್ ಕೊಟ್ಟಿದೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಅಸ್ಸಾಂ, ಒಡಿಶಾ, ಮಿಜೋರಾಂ, ಮೇಘಾಲಯ, ಮಣಿಪುರ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಹೊಸ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಅಥವಾ ಪಾಸಿಟಿವಿಟಿ ದರದಲ್ಲಿ ಹೆಚ್ಚಳ ಆಗ್ತಿದೆ. 46 ಜಿಲ್ಲೆಗಳಲ್ಲಿ ಶೇ 10ಕ್ಕಿಂತಲೂ ಅಧಿಕ ಪಾಸಿಟಿವಿಟಿ ದರ ದಾಖಲಾಗುತ್ತಿದೆ. 53 ಜಿಲ್ಲೆಗಳಲ್ಲಿ ಶೇ 5-10ರವರೆಗೆ ಪಾಸಿಟಿವಿಟಿ ದರವಿದ್ದು, ಶೇ 10ಕ್ಕಿಂತಲೂ ಅಧಿಕ ಪಾಸಿಟಿವಿಟಿ ದರ ಕಂಡುಬರುತ್ತಿರುವ ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧಗಳನ್ನು ಜಾರಿಗೆ ತರುವ ಅಗತ್ಯವಿದೆ ಎಂದು ಅದು ಒತ್ತಿ ಹೇಳಿದೆ.
ಮೆಜೆಸ್ಟಿಕ್​ನಲ್ಲಿ ಮಾತ್ರ ರೂಲ್ಸ್​ಗೆ ಡೋಂಟ್​ಕೇರ್!ರಾಜ್ಯದಲ್ಲಿ ಕೆಲವು ದಿನಗಳಿಂದ ಕೋವಿಡ್ 19 ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವ ಹಾಗೂ ಮೂರನೇ ಅಲೆ ಸೋಂಕು ಹರಡುವ ಭೀತಿ ಎದುರಾಗಿರುವ ನಡುವೆ, ನೆರೆಯ ಕೇರಳ ಹಾಗೂ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಜನರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಿ ಕರ್ನಾಟಕ ಆದೇಶ ಹೊರಡಿಸಿದೆ. ಕೇರಳಕ್ಕೆ ಅಂಟಿಕೊಂಡಿರುವ ಮಂಗಳೂರಿಗೆ ಹೆಚ್ಚು ಕರೊನಾ ಆತಂಕ ಇದ್ದು, ಮಂಗಳೂರು-ಕಾಸರಗೋಡು ನಡುವೆ ಬಸ್ ಸಂಚಾರ ಸ್ಥಗಿತ ಮಾಡಿದ್ದಾರೆ. ಅಲ್ಲದೆ ಇಲ್ಲಿನ ಗಡಿಯಲ್ಲಿ ತಪಾಸಣೆ ಹೆಚ್ಚು ಮಾಡಲಾಗಿದೆ. ಇನ್ನು ಕೇರಳದಿಂದ ಬರೋರ ತಪಾಸಣೆ ನಡೆಯುತ್ತಿದ್ದು, ಆರ್​​ಟಿಪಿಸಿಆರ್ ನೆಗೆಟಿವ್ ವರದಿ ಇಲ್ಲಂದ್ರೆ ನೋ ಎಂಟ್ರಿ ಅನ್ತಿದ್ದಾರೆ.
ಕೇರಳದಲ್ಲಿ ಕರೊನಾ ಪ್ರಕರಣ ಏರಿಕೆ ಹಿನ್ನೆಲೆಯಲ್ಲಿ ಕೊಡಗು- ಕೇರಳ ಗಡಿಭಾಗದಲ್ಲಿ ತೀವ್ರ ನಿಗಾವಹಿಸಲಾಗಿದೆ. 3 ಚೆಕ್ ಪೋಸ್ಟ್​​ಗಳಲ್ಲಿ ತೀವ್ರ ತಪಾಸಣೆ ಮಾಡ್ತಿದ್ದು, ಮಾಕುಟ್ಟ, ಕುಟ್ಟಾ, ಕರಿಕೆಯಲ್ಲಿ ನೆಗೆಟಿವ್ ರಿಪೋರ್ಟ್‌ ಇದ್ದರಷ್ಟೇ ಎಂಟ್ರಿಗೆ ಅವಕಾಶ ಕೊಡ್ತಿದ್ದಾರೆ. ಇದೇ ರೀತಿ ಚಾಮರಾಜನಗರದಲ್ಲೂ ಪರಿಸ್ಥಿತಿ ಇದೆ. ಆದರೆ, ತಮಿಳುನಾಡಿನಿಂದ ಬರೋರು ಮಾತ್ರ ಬಿಂದಾಸ್ ಆಗಿ ಆನೆಕಲ್ ಮೂಲಕ ರಾಜ್ಯಕ್ಕೆ ಪ್ರವೇಶ ಮಾಡ್ತಿದ್ದು, ಅಪಾಯದ ಮುನ್ಸೂಚನೆ ಆಗಿದೆ. ಮಹರಾಷ್ಟ್ರದೊಂದಿಗೆ ಹಲವು ಜಿಲ್ಲೆಗಳು ಸಂಪರ್ಕ ಹೊಂದಿದ್ದು, ಅದ್ರಲ್ಲಿ ಪ್ರಮುಖ ಬೆಳಗಾವಿ. ಪ್ರಕರಣಗಳು ಹೆಚ್ಚಿತ್ತಿದ್ದರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳುತ್ತಿಲ್ಲ ಅನ್ನೋದು ಸ್ಪಷ್ಟವಾಗ್ತಿದೆ. ಕಾಕತಿ ತಪಾಸಣೆ ಕೇಂದ್ರ ಖಾಲಿ ಖಾಲಿಯಾಗಿದ್ರೆ, ಬಾಚಿ ಚೆಕ್‌ಪೋಸ್ಟ್ ಬಳಿ ಕಟ್ಟುನಿಟ್ಟಿನ ತಪಾಸಣೆಯಾಗ್ತಿದೆ. ಇನ್ನೂ ಕೆಲವು ಕಡೆ ಹೆಸರಿಗಷ್ಟೇ ಆಗ್ತಿದೆ.
ಇನ್ನು ಕಲಬುರಗಿ ಜಿಲ್ಲೆಯ ಗಡಿ ಭಾಗದಲ್ಲಿ ಹೈ ಅಲರ್ಟ್ ಮಾಡಲಾಗಿದ್ದು, ಆಳಂದ, ಅಫಜಲಪುರ ತಾಲೂಕಿನ 6 ಕಡೆ ಚೆಕ್​ಪೋಸ್ಟ್ ಮಾಡಿದ್ದು, 72 ಗಂಟೆಯೊಳಗಿನ RTPCR ವರದಿ ಇದ್ದರೆ ಮಾತ್ರ ಎಂಟ್ರಿ ಕೊಡ್ತಿದ್ದಾರೆ. ಬೀದರ್​ನಲ್ಲಿಯೂ ಅಲ್ಲೊಂದು ಇಲ್ಲೊಂದು ಕಡೆ ಟೆಸ್ಟಿಂಗ್ ಆಗ್ತಿದ್ದು, ಅಷ್ಟು ಸೀರಿಯಸ್ ಆಗಿ ತಪಾಸಣೆ ಮಾಡ್ತಿಲ್ಲ. ಮಹಾರಾಷ್ಟ್ರದ ಜತೆ ನಿಕಟ ಸಂಪರ್ಕ ಹೊಂದಿರುವ ರಾಯಚೂರಿನ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ತಪಾಸಣೆ ಮಾಡಿ ಬಿಡ್ತಿದ್ದಾರೆ. ಕಳೆದ ಒಂದು ತಿಂಗಳಿಂದ ಮಹಾರಾಷ್ಟ್ರ ಭಾಗದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸಿದೆ ಜಿಲ್ಲಾಡಳಿತ. ಹೀಗೆ ಪ್ರತಿ ಜಿಲ್ಲೆಯಲ್ಲೂ ಆಗಬೇಕಿದೆ.
ಕರೊನಾ ದಿನದಿಂದ ದಿನಕ್ಕೆ ಪ್ರಭಾವ ಕಡ್ಮೆ ಆಗುತ್ತಂತ ಅನ್ಕೊಂಡ್ರೆ.. ಇದು ದಿನದಿಂದ ದಿನಕ್ಕೆ ತೀವ್ರವಾಗ್ತಿದೆ. ಪರಿಣಾಮ 2 ಡೋಸ್ ಲಸಿಕೆ ಪಡೆದಿದ್ರು ಲೆಕ್ಕಕ್ಕಿಲ್ಲದಂತಾಗಿದೆ.. ಅದರ ಜೊತೆ ಚೀನಾ ಮತ್ತೆ ಕರೊನಾ ಕೂಪದಲ್ಲಿ ಮುಳುಗಿದೆ. ಕೋವಿಡ್‌ ಎರಡೂ ಡೋಸ್‌ ಲಸಿಕೆ ಪಡೆದಿದ್ದಾಯ್ತು. ಇನ್ನೇನು ನಮಗೂ ಸೋಂಕು ಬರದು, ನಮ್ಮಿಂದ ಇನ್ನೊಬ್ಬರಿಗೂ ಸೋಂಕು ಹರಡದು ಅಂತ ಮೈಮರೆತಿರುವ ಹೊತ್ತಲ್ಲೇ, ಅಮೆರಿಕದಿಂದ ಬಂದಿರುವ ಅಧ್ಯಯನ ವರದಿಯೊಂದು ಭಾರೀ ಆತಂಕಕಾರಿ ಸುದ್ದಿಯನ್ನು ಹೊರಹಾಕಿದೆ. ಲಸಿಕೆ ಪಡೆಯದೇ ಇದ್ದ ವ್ಯಕ್ತಿಗಳಲ್ಲಿ ಇರುವಷ್ಟೇ ಪ್ರಮಾಣದ ‘ಕರೊನಾ ವೈರಸ್‌ ಲೋಡ್‌’, ಲಸಿಕೆ ಪಡೆದುಕೊಂಡವರಲ್ಲೂ ಪತ್ತೆಯಾಗುತ್ತಿದೆ.
ವೈರಸ್ ನಾಡು ಚೀನಾದ ಕೆಲವು ಕಡೆಗಳಲ್ಲಿ ಮತ್ತು ಆಸ್ಟ್ರೇಲಿಯಾದಲ್ಲಿ ಕರೊನಾ ವೈರಸ್‌ನ ಡೆಲ್ಟಾ ರೂಪಾಂತರದಿಂದ ತತ್ತರಿಸುತ್ತಿದೆ. ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಎರಡೂ ದೇಶಗಳು ಕಠಿಣ ನಿರ್ಬಂಧಗಳನ್ನು ವಿಧಿಸಲು ಮುಂದಾಗಿವೆ. ಚೀನಾದ ಫುಜಿಯಾನ್‌ ಮತ್ತು ಚಾಂಗ್‌ಕ್ವಿಂಗ್‌ನಲ್ಲಿ ಸೋಂಕು ಹರಡುವಿಕೆ ಹೆಚ್ಚಾಗಿದ್ದು, ಲಾಕ್​ಡೌನ್ ಹೇರಿದ್ದಾರೆ. ಹಾಗೆಯೇ ಇನ್ನುಳಿದ ದೇಶಗಳಲ್ಲೂ ಈಗ ಕರೊನಾ ಆತಂಕ ಮತ್ತೆ ಹೆಚ್ಚಳ ಆಗುತ್ತಿದ್ದು, ಅದಕ್ಕೆ ಪ್ರಮುಖ ಕಾರಣ ಅಂದ್ರೆ ಅದುವೇ ಡೆಲ್ಟಾ ಸ್ಟ್ರೈನ್ ಅನ್ನೋದರಲ್ಲಿ ಅನುಮಾನವೇ ಇಲ್ಲ. ಡೆಲ್ಟಾ ರೂಪಾಂತರದಿಂದಾಗಿ ವಿಶ್ವದಾದ್ಯಂತ ಕಳೆದ ನಾಲ್ಕು ವಾರಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದ್ದು, 132ಕ್ಕೂ ಹೆಚ್ಚು ದೇಶಕ್ಕೆ ವ್ಯಾಪಿಸಿರೋದೇ ಇದಕ್ಕೆ ಉದಾಹರಣೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 + 16 =
Remember me
