ಇಡೀ ವಿಶ್ವವನ್ನೇ ಇನ್ನಿಲ್ಲದಂತೆ ಕಾಡುತ್ತಿರುವ ಕರೊನಾ ರಾಜ್ಯದಲ್ಲೂ ತನ್ನ ಕರಾಳ ಛಾಯೆ ಮೂಡಿಸಿದೆ. ಅನ್ಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ, ಬೇರೆ ದೇಶಗಳಿಗಿಂತ ಭಾರತ ಮುಂಜಾಗ್ರತಾ ಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ. ಆದರೂ, ಕರೊನಾತಂಕ ಇನ್ನೂ ದೂರವಾಗಿಲ್ಲ. ಸೋಂಕು ತಗುಲಿ ಭೀತಿಗೊಳಗಾದವರಿಗಿಂತ ವೈರಸ್​ಗೆ ಭಯಪಟ್ಟವರೇ ಅಧಿಕ. ಆದಾಗ್ಯೂ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಜತೆಗೆ ವಾಹನಗಳನ್ನು ಬೀದಿಗಿಳಿಸಿ ಅಡ್ಡಾಡುವವರಿಗೇನು ಕಮ್ಮಿ ಇಲ್ಲ. ಸೋಂಕು ನಿಯಂತ್ರಣಕ್ಕಾಗಿ ದೇಶಾದ್ಯಂತ ಘೋಷಣೆಗೊಂಡ ಲಾಕ್​ಡೌನ್ ಬರೋಬ್ಬರಿ 16 ದಿನಗಳನ್ನು ಪೂರೈಸಿ ಮುನ್ನಡೆದಿದೆ. ಇನ್ನಷ್ಟು ದಿನ ವಿಸ್ತರಣೆಯಾಗೋ ಸಾಧ್ಯತೆ ನಿಚ್ಚಳವಾಗಿದೆ. ಈ ಅವಧಿಯಲ್ಲಿ ಅಗತ್ಯ ವಸ್ತುಗಳಿಗೆ ಯಾವುದೇ ತೊಂದರೆ ಉಂಟಾಗದಿದ್ದರೂ, ಕೂಲಿ-ಕಾರ್ವಿುಕರು ಹಾಗೂ ವಲಸಿಗರ ಬವಣೆ ಹೇಳ ತೀರದು. ವ್ಯಾಪಾರ-ವಹಿವಾಟು ಸಂಪೂರ್ಣ ಸ್ತಬ್ಧವಾಗಿದ್ದು, ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿಲ್ಲ. ಆದರೆ, ಬೆಳೆದ ಬೆಳೆಗೆ ಬೆಲೆ ಇಲ್ಲದೆ ರೈತ ಸಮೂಹ ಕಂಗಾಲಾಗಿದೆ. ಈ ಕುರಿತುವಿಜಯವಾಣಿನಡೆಸಿದ ಜಿಲ್ಲಾವಾರು ಸ್ಥಿತಿಗತಿಯಪ್ರತ್ಯಕ್ಷ ವರದಿಇಲ್ಲಿದೆ.
ಜಿಲ್ಲೆಯಲ್ಲಿ ಜನಜೀವನ ಅಯೋಮಯವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಕೂಲಿ ಕಾರ್ವಿುಕರ ಸ್ಥಿತಿ ಚಿಂತಾಜನಕ. ಈಗಾಗಲೇ ವೃದ್ದ ಬಲಿಯಾಗಿದ್ದು, 7 ಸೋಂಕಿತರಲ್ಲಿ 3 ಮಕ್ಕಳಿರುವುದು ಆತಂಕಕ್ಕೆಡೆ ಮಾಡಿಕೊಟ್ಟಿದೆ. ಬಾದಾಮಿ ಶಾಸಕ ಸಿದ್ದರಾಮಯ್ಯ ಅಧಿಕಾರಿಗಳ ಜತೆ ಫೋನ್ ಸಂಪರ್ಕದಲ್ಲಿದ್ದಾರೆ.
ತಬ್ಲಿಘಿಗಳು:ದೆಹಲಿಗೆ ಹೋಗಿ ಬಂದಿದ್ದವರು 25 ಮಂದಿ. ಬಹುತೇಕರದು ನೆಗೆಟಿವ್ ಇದ್ದು, ಇಬ್ಬರ ವರದಿ ಬರಬೇಕಿದೆ. ಎಲ್ಲರೂ ಕ್ವಾರಂಟೈನ್​ನಲ್ಲಿದ್ದಾರೆ
ಜಿಲ್ಲೆಯಲ್ಲಿ ದ್ರಾಕ್ಷಿ, ನಿಂಬೆ ಇನ್ನಿತರ ತೋಟಗಾರಿಕೆ ಬೆಳೆಗಾರರು ಮಾರುಕಟ್ಟೆ ವ್ಯವಸ್ಥೆ ಇಲ್ಲ. ಮಹಾರಾಷ್ಟ್ರ- ಗೋವಾದಿಂದ 35 ಸಾವಿರಕ್ಕೂ ಅಧಿಕ ಜನರು ವಾಪಸ್ ಆಗಿದ್ದಾರೆ.
ತಬ್ಲಿಘಿಗಳು:ದೆಹಲಿಗೆ ಹೋಗಿಬಂದ 29 ಮಂದಿಯಲ್ಲೂ ನೆಗೆಟಿವ್ ಇದೆ. ಒಟ್ಟು 63 ಜನರಲ್ಲಿ 61 ನೆಗೆಟಿವ್ ಬಂದಿವೆ.
ಜಿಲ್ಲೆಯಲ್ಲಿ ಜನ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ವಿವಿಧ ಬೆಳೆಗಳ ಸಾಗಣೆ ಸಾಧ್ಯವಾಗದೆ ತೊಂದರೆಯಾಗಿದೆ. ಕೆಲವೆಡೆ ಬೆಳೆಗಳು ಜಮೀನುಗಳಲ್ಲಿಯೇ ಕೊಳೆತು ಹೋಗಿದೆ. ವಿರ್ವಿಡೆಯಿಂದ ಆಗಮಿಸಿದ್ದ 2500ಕ್ಕೂ ಹೆಚ್ಚು ವಲಸೆ ಕಾರ್ವಿುಕರು ಊರಿಗೆ ತೆರಳಲು ಸಾಧ್ಯವಾಗದೆ ಬೆಳಗಾವಿ ನಗರದಲ್ಲಿ ವಾಸ್ತವ್ಯ ಹೂಡಿದ್ದಾರೆ.
ತಬ್ಲಿಘಿಗಳು:ದೆಹಲಿಗೆ 96 ಜನ ಹೋಗಿದ್ದು, 80 ಜನರ ಪತ್ತೆ ಮಾಡಲಾಗಿದೆ. 16 ಜನ ಬೇರೆ ರಾಜ್ಯ ಗಳಲ್ಲಿದ್ದಾರೆ.
* ಕ್ವಾರಂಟೈನ್- 1410 (ಆಸ್ಪತ್ರೆ-19, ಮನೆ-1391)
ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಕಂಡು ಬಾರದಿದ್ದರೂ ಬಾಗಲಕೋಟೆ, ತೆಲಂಗಾಣದ ಗದ್ವಾಲ್, ಆಂಧ್ರದ ಕರ್ನಲ್​ನಲ್ಲಿ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೃಷಿ ಚಟುವಟಿಕೆಗೆ ಕಾರ್ವಿುಕರು ಸಿಗುತ್ತಿಲ್ಲ. ತೋಟಗಾರಿಕೆ ಬೆಳೆಗಳಿಗೆ ಮಾರುಕಟ್ಟೆ ದೊರೆಯುತ್ತಿಲ್ಲ. ವಾಣಿಜ್ಯ ಚಟುವಟಿಕೆಗಳ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಹಮಾಲು, ಕಾರ್ವಿುಕರು ಉಪಜೀವನಕ್ಕಾಗಿ ಸಂಕಷ್ಟ ಎದುರಿಸುತ್ತಿದ್ದಾರೆ.
ತಬ್ಲಿಘಿಗಳು:ದೆಹಲಿಗೆ ಹೋಗಿದ್ದ 30 ಜನರೂ ಪತ್ತೆಯಾಗಿದ್ದು, ಯಾರಲ್ಲೂ ಪಾಸಿಟಿವ್ ಇಲ್ಲ.
ಜಿಲ್ಲೆಯಲ್ಲಿ ಲಾಕ್​ಡೌನ್ ಇನ್ನೂ 15 ದಿನ ಮುಂದುವರಿಯುವ ಸಾಧ್ಯತೆ ಇದೆ. ಬಹುತೇಕ ರಸ್ತೆಗಳು ಬಂದ್ ಮಾಡಲಾಗಿದ್ದು, ಜನರ ಓಡಾಟವೂ ಕಮ್ಮಿಯಾಗಿದೆ. ಕೆಲಸವಿಲ್ಲದ ಕಾರ್ವಿುಕರು ಗೊಳೋ ಎನ್ನುತ್ತಿದ್ದಾರೆ. ಕಲ್ಲಂಗಡಿ, ಪಪ್ಪಾಯಿ, ತೊಗರಿ ಮಾರಾಟಕ್ಕೆ ಸಮಸ್ಯೆಯಾಗಿದೆ. ಆರ್ಥಿಕ ವಹಿವಾಟಿಗೆ ಕಡಿವಾಣ ಬಿದ್ದಿದ್ದು, ಕಾರ್ಖಾನೆಗಳು ಬಂದ್ ಆಗಿವೆ. ಪರಿಸ್ಥಿತಿ ಇನ್ನೂ ಬಿಗಡಾಯಿಸುವ ಸಂಭವ ಇದೆ. ಜಿಲ್ಲಾಡಳಿತ ಸೋಂಕು ತಡೆಗೆ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ.
ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಲ್ಲಂಗಡಿ, ದ್ರಾಕ್ಷಿ, ಟೊಮ್ಯಾಟೋ ಬೆಳೆಗಾರರಿಗೆ ಅಪಾರ ಹಾನ್ದಿ, ಕೃಷಿಗೂ ಗರ ಬಡಿದಿದೆ. ಕೊಳಾರ್, ಹುಮನಾಬಾದ್ ಕೈಗಾರಿಕಾ ವಸಾಹತು ಪ್ರದೇಶದ 250ಕ್ಕೂ ಹೆಚ್ಚು ಸಣ್ಣ, ಮಧ್ಯಮ ಕೈಗಾರಿಗಳು ಬಂದ್ ಆಗಿವೆ. ಸರ್ಕಾರ, ವಿವಿಧ ಸಂಘ ಸಂಸ್ಥೆಗಳ ನೆರವು ದುಡಿಯುವ ವರ್ಗದವರಲ್ಲಿ ಒಂದಿಷ್ಟು ನೆಮ್ಮದಿ ನೀಡಿದೆ.
ತಬ್ಲಿಘಿಗಳು:ದೆಹಲಿಗೆ ಹೋಗಿದ್ದ 26 ಜನರಲ್ಲಿ 10 ಜನರಿಗೆ ಸೋಂಕು ದೃಢ.
ಜಿಲ್ಲೆಯಲ್ಲಿ ಲಾಕ್​ಡೌನ್ ಶೇ.80 ಪಾಲನೆಯಾಗುತ್ತಿದೆ. ಸಾರ್ವಜನಿಕರಿಗೆ ಪೆಟ್ರೋಲ್ ನೀಡಿಕೆ ಬಂದ್ ಮಾಡಿದ್ದರಿಂದ ಪಟ್ಟಣಗಳಲ್ಲೂ ಜನಸಂಚಾರ ಕಡಿಮೆ ಇದೆ. ಮನೆ ಮನೆಗೆ ಆಹಾರ ಧಾನ್ಯ, ತರಕಾರಿ, ಹಣ್ಣು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಲೆ ಕುಸಿತದಿಂದ ರೈತರಿಗೆ ತೊಂದರೆ ಉಂಟಾಗಿದೆ. ಪೊಲೀಸ್ ಸರ್ಪಗಾವಲಿನಿಂದ ಅಪರಾಧ ಪ್ರಕರಣ ಕಡಿಮೆಯಾಗಿವೆ.
ತಬ್ಲಿಘಿಗಳು:ದೆಹಲಿಗೆ ತೆರಳಿದ 21 ಜನರಲ್ಲಿ 8 ಮಂದಿ ಆಗಮಿಸಿದ್ದು, ಯಾರಲ್ಲೂ ಸೋಂಕಿಲ್ಲ.
ಜಿಲ್ಲೆಯಲ್ಲಿ ಆತಂಕವಿಲ್ಲ. ಪಕ್ಕದ ಜಿಲ್ಲೆಗಳಲ್ಲಿ ಕರೊನಾ ಕಾಣಿಸಿಕೊಂಡಿರುವುದು ಆತಂಕದ ಛಾಯೆ ಮುಂದುವರಿದಿದೆ. ಗ್ರಾಮೀಣ್ದ, ನಗರ ಪ್ರದೇಶಗಳಲ್ಲಿ ಮನೆ ಮನೆಗೆ ಪಡಿತರ ಹಾಗೂ ಮೈಕ್ರೋ ಎಟಿಎಂ ಮೂಲಕ ಜನಧನ್​ಖಾತೆಗೆ ಬಂದ ಹಣವನ್ನು ಮನೆ ಮನೆಗೆ ತಲುಪಿಸಲಾಗುತ್ತಿದೆ.
ತಬ್ಲಿಘಿಗಳು:ದೆಹಲಿಗೆ ಹೋಗಿದ್ದ 33 ಜನರೂ ಪತ್ತೆಯಾಗಿದ್ದು, ಯಾರಲ್ಲೂ ಸೋಂಕು ಕಂಡುಬಂದಿಲ್ಲ.
ಜಿಲ್ಲೆಯಲ್ಲಿ ಲಾಕ್​ಡೌನ್​ಗೆ ಜನರಿಂದ ಉತ್ತಮ ಸಹಕಾರ ಸಿಕ್ಕಿದೆ. ಅಗತ್ಯ ವಸ್ತುಗಳ ಖರೀದಿ ವೇಳೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಅಗತ್ಯ ವಸ್ತುಗಳಿಗೆ ಕೊರತೆ ಇಲ್ಲ. ವಲಸಿಗರು, ನಿರಾಶ್ರಿತರಿಗೆ ಅಲ್ಲಲ್ಲಿ ಆಶ್ರಯ ಕೇಂದ್ರಗಳನ್ನು ಆರಂಭಿಸಲಾಗಿದೆ. ಜಿಲ್ಲಾಡಳಿತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
ತಬ್ಲಿಘಿಗಳು:ದೆಹಲಿಗೆ ಹೋಗಿದ್ದ 93 ಜನರ ಪೈಕಿ 68 ಮಂದಿ ಪತ್ತೆ. ಒಬ್ಬರಿಗೆ ಮಾತ್ರ ಸೋಂಕು ದೃಢ. 25 ಜನ ಬೇರೆ ರಾಜ್ಯಗಳಲ್ಲಿದ್ದಾರೆ.
ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಲಾಕ್​ಡೌನ್​ಗೆ ಉತ್ತಮ ಸಹಕಾರವಿದೆ. ಆದರೆ, ಹುಬ್ಬಳ್ಳಿ – ಧಾರವಾಡ ಅವಳಿ ನಗರದಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಎಪಿಎಂಸಿ ಮಾರುಕಟ್ಟೆ, ನಗರದ ಪ್ರಮುಖ ಸ್ಥಳಗಳಲ್ಲಿ ಜನರ ಓಡಾಟಕ್ಕೆ ಕಡಿವಾಣ ಬಿದ್ದಿಲ್ಲ. ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ. ರೈತರು ಜೋಳ, ಗೋಧಿ, ಹತ್ತಿ ಮಾರಲಾಗುತ್ತಿಲ್ಲ. ವಲಸಿಗರು, ನಿರ್ಗತಿಕರಿಗೆ ಆಶ್ರಯ ನೀಡಲಾಗಿದೆ.
ತಬ್ಲಿಘಿಗಳು:ದೆಹಲಿ ಸಮಾವೇಶಕ್ಕೆ ಹೋಗಿದ್ದ 34 ಜನರಲ್ಲಿ ಎಲ್ಲರ ವೈದ್ಯಕೀಯ ವರದಿ ನೆಗೆಟಿವ್
ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಹಿನ್ನಡೆಯಾಗಿದೆ. ತರಕಾರಿ, ಹಣ್ಣು ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ರೈತರು ಸಿಕ್ಕ ಬೆಲೆಗೆ ಮಾರುವಂತಾಗಿದೆ. ಅಗತ್ಯ ವಸ್ತುಗಳ ಕೊರತೆ ಕಂಡುಬಂದಿಲ್ಲ. ವಲಸಿಗರಿಗೆ ಊಟ, ವಸತಿ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ.
ತಬ್ಲಿಘಿಗಳು:ಸಮಾವೇಶಕ್ಕೆ ಹೋಗಿ ಬಂದ 15 ಜನರನ್ನು ಗುರುತಿಸಿದ್ದು, ಯಾರಲ್ಲೂ ಸೋಂಕು ಕಂಡುಬಂದಿಲ್ಲ.
ಜಿಲ್ಲೆಯಲ್ಲಿ ಸೋಂಕಿತೆ ವೃದ್ಧೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಗೋವಾ ಮತ್ತು ಮಂಗಳೂರಿಗೆ ದುಡಿಯಲು ತೆರಳಿದ್ದ ಅನೇಕ ಜನರು ಸ್ವಗ್ರಾಮಕ್ಕೆ ಆಗಮಿಸಿದ್ದು ಅವರೆಲ್ಲರ ಮೇಲೆ ನಿಗಾ ಇರಿಸಲಾಗಿದೆ. ಕಳ್ಳಭಟ್ಟಿ ಸರಾಯಿ ಮಾರಾಟ ಕೊಂಚ ಜೋರಾಗಿದ್ದು, 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ತಬ್ಲಿಘಿಗಳು:ದೆಹಲಿಗೆ ಹೋಗಿದ್ದ 13 ಜನರ ವರದಿ ನೆಗೆಟಿವ್ ಬಂದಿದೆ. ಸದ್ಯ ಎಲ್ಲರೂ ಕ್ವಾರೆಂಟೈನ್​ನಲ್ಲಿ ಇದ್ದಾರೆ.
ತೆಲಂಗಾಣ ಗಡಿಭಾಗದ ಗಡಿ ಜಿಲ್ಲೆ ಯಾದಗಿರಿ ಸಂಪೂರ್ಣ ಸ್ತಬ್ಧಗೊಂಡಿದೆ. ಲಾಕ್​ಡೌನ್ ಘೊಷಿಸಿದ ಬಳಿಕ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಈ ಸೋಂಕಿಗೆ ಹೆದರಿ ಬೆಂಗಳೂರು, ಪುಣೆ, ಹೈದರಾಬಾದ್, ಗೋವಾ ಮಹಾನಗರಗಳಿಗೆ ಗುಳೆ ಹೋದ ಸುಮಾರು 1 ಲಕ್ಷ ಜನ ಮರಳಿ ತಮ್ಮೂರಿಗೆ ಬಂದಿದ್ದು, ಇವರಿಗೆ ಮುಂದಿನ 2 ತಿಂಗಳು ಜೀವನ ಕಟ್ಟಿಕೊಳ್ಳುವುದೇ ದೊಡ್ಡ ಸವಾಲಾಗಿದೆ.
ಜಿಲ್ಲೆಯಲ್ಲಿ ಬೆಳಗ್ಗೆ ಮಾತ್ರ ಭಾರಿ ಸಂಖ್ಯೆಯಲ್ಲಿ ಜನ ಹೊರ ಬರುತ್ತಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ವಾಹನಗಳ ಸಂಚಾರವೂ ತುಸು ಹೆಚ್ಚಿದೆ. ಕೃಷಿ ಚಟುವಟಿಕೆಗೆ ಅಲ್ಲಲ್ಲಿ ಧಕ್ಕೆಯಾಗಿದೆ. ಅನಾನಸ್, ಬಾಳೆ, ಕಲ್ಲಂಗಡಿ ಬೆಳೆಗಾರರು ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಕಂಗೆಟ್ಟಿದ್ದಾರೆ. ವಲಸಿಗರು, ನಿರಾಶ್ರಿತರಿಗೆ ಆಶ್ರಯ ಕೇಂದ್ರ ಆರಂಭಿಸಲಾಗಿದೆ. ಜಿಲ್ಲಾಡಳಿತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
ತಬ್ಲಿಘಿಗಳು:ದೆಹಲಿಗೆ ಹೋಗಿದ್ದ 11 ಮಂದಿ ಪತ್ತೆ. ಎಲ್ಲರಲ್ಲೂ ನೆಗೆಟಿವ್ ಬಂದಿದೆ.
ಜಿಲ್ಲೆಯಲ್ಲಿ ಲಾಕ್​ಡೌನ್​ಗೆ ಜನ ಸ್ಪಂದನೆ ಇದ್ದರೂ ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರವಿಲ್ಲ. ನೀರು, ವಿದ್ಯುತ್, ಮೇವು, ಬರದ ಬವಣೆ ತಕ್ಷಣಕ್ಕಿಲ್ಲ. ಹಣ್ಣು, ತರಕಾರಿ, ಹೂವಿಗೆ ಮಾರುಕಟ್ಟೆ ಇಲ್ಲ. ಜಿಲ್ಲಾಡಳಿತ ಆಕ್ಟಿವ್ ಆಗಿದೆ. ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಸ್ವತಃ ಕಾರು ಚಾಲನೆ ಮಾಡಿಕೊಂಡು ಕ್ಷೇತ್ರ ಸುತ್ತುತ್ತಿ್ತ್ದಾರೆ. ಉಳಿದ ಶಾಸಕರೂ ಮೇಲುಸ್ತುವಾರಿ ವಹಿಸುತ್ತಿದ್ದಾರೆ.
ತಬ್ಲಿಘಿಗಳು:ಮೂವರ ಪೈಕಿ ಇಬ್ಬರ ವರದಿ ನೆಗೆಟಿವ್ ಬಂದಿದೆ. ಮತ್ತೊಬ್ಬರು ಹೊಸದಿಲ್ಲಿಯಲ್ಲಿದ್ದಾರೆ. ಮತ್ತೊಬ್ಬರು ಮೈಸೂರಲ್ಲಿದ್ದಾರೆ.
ಜಿಲ್ಲೆಯಲ್ಲಿ 3 ದಿನದಿಂದ ನೆಮ್ಮದಿ ಹಾಳಾಗಿದೆ. ಸಾಮಾಜಿಕ ಅಂತರದ ಬಗ್ಗೆ ಎಷ್ಟೇ ಬಡಿದುಕೊಂಡರು ಜನತೆ ಕ್ಯಾರೆ ಅನ್ನುತ್ತಿಲ್ಲ. ವಲಸಿಗರನ್ನು ಗುರುತಿಸಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕೃಷಿ ಚಟುವಟಿಕೆ ನಡೆಯುತ್ತಿದೆ. ಇನ್ನೂ ಕಬ್ಬು ಕಟಾವು ಆಗಿಲ್ಲ. ತೋಟಗಾರಿಕೆ ಬೆಳೆಗಾರರು ಬೆಳೆಗಳನ್ನು ಮಾರಾಟ ಮಾಡಲು ಪರದಾಟ ನಿಂತಿಲ್ಲ. ಜಾನುವಾರು, ಮೇವು, ನೀರು, ವಿದ್ಯುತ್, ಬರದ ಹೊರೆ ಸದ್ಯಕ್ಕೆ ಕಾಣುತ್ತಿಲ್ಲ.
ತಬ್ಲಿಘಿಗಳು:ನಿಖರ ಸಂಖ್ಯೆ ಇಲ್ಲ
* ಕ್ವಾರಂಟೈನ್-97
ಜಿಲ್ಲೆಯಲ್ಲಿ ಕೂಲಿ ಕಾರ್ವಿುಕರು, ನಿರ್ಗತಿಕರು, ಭಿಕ್ಷುಕರು ಸಂಕಷ್ಟಕ್ಕೆ ತುತ್ತಾಗದಂತೆ ಜಿಲ್ಲಾಡಳಿತ ಊಟದ ವ್ಯವಸ್ಥೆ ಮಾಡಿದೆ. ವಲಸೆ ಕಾರ್ವಿುಕರಿಗೆ 60 ಕಡೆ ಕೇಂದ್ರ ಆರಂಭಿಸಿ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ತರಕಾರಿ, ತೋಟಗಾರಿಕೆ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ. ಏ.5ರ ನಂತರ ಮಳೆ ಆರಂಭವಾಗಿದ್ದು, ಕೃಷಿ ಚಟುವಟಿಕೆಗೆ ರಿಯಾಯಿತಿ ನೀಡಲಾಗಿದೆ.
ತಬ್ಲಿಘಿಗಳು:ದೆಹಲಿಗೆ ತೆರಳಿದ್ದ 19 ಮಂದಿಯ ವರದಿ ನೆಗಟಿವ್ ಬಂದಿದ್ದು, ಐಸೋಲೇಷನ್​ನಲ್ಲಿ ಇರಿಸಲಾಗಿದೆ. ಮೃತನ ಪುತ್ರ ಚೇತರಿಕೆ ಹಾದಿಯಲ್ಲಿದ್ದಾನೆ.
ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆಗಳು ಸ್ಥಗಿತವಾಗಿದ್ದು ಜನಜೀವನದ ಮೇಲೆ ನೇರ ಪರಿಣಾಮ ಬೀರಿದೆ. ಹೂವಿನ ಬೆಳೆಗಳಿಗೆ ಬೇಡಿಕೆ ಇಲ್ಲ. ಬಾಳೆ ಬೆಳೆ ಕಟಾವಿಗೆ ಬಂದಿದ್ದು ಸುಗಮ ಮಾರಾಟಕ್ಕೆ ವ್ಯವಸ್ಥೆ ಆಗಬೇಕಿದೆ. ರೈಸ್​ವಿುಲ್, ದಾಲ್ ಮಿಲ್, ಆಹಾರ ಪದಾರ್ಥ ತಯಾರಿಕಾ ಘಟಕಗಳು ಆರಂಭವಾಗಿವೆ. ಜಿಲ್ಲಾಡಳಿತ ಕ್ರಿಯಾಶೀಲವಾಗಿದೆ. ಅಪರಾಧ ಪ್ರಕರಣಗಳು ತಗ್ಗಿವೆ. ಕುಡಿಯುವ ನೀರಿನ ಅಭಾವ ಇಲ್ಲ. ಜಾನುವಾರುಗಳಿಗೆ ಮೇವಿನ ಲಭ್ಯತೆ ಇದೆ.
ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಕಲ್ಲಂಗಡಿ, ಟೊಮ್ಯಾಟೋ, ಬಾಳೆ ಇನ್ನಿತರ ತೋಟಗಾರಿಕಾ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲದೆ ಕೃಷಿಕರು ನಷ್ಟ ಅನುಭವಿಸುತ್ತಿದ್ದಾರೆ. ಪ್ರಮುಖ ವಾಣಿಜ್ಯ ಮಾರುಕಟ್ಟೆ ಕಾಫಿ ವಹಿವಾಟು ಸ್ಥಗಿತಗೊಂಡಿದೆ. ವಲಸಿಗರು, ನಿರಾಶ್ರಿತರಿಗೆ ಅಲ್ಲಲ್ಲಿ ಆಶ್ರಯ ಕೇಂದ್ರಗಳನ್ನು ಆರಂಭಿಸಲಾಗಿದೆ. ಜಿಲ್ಲಾಡಳಿತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
ಜಿಲ್ಲೆಯಲ್ಲಿ ಲಾಕ್​ಡೌನ್ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಜನಜೀವನ ಸಾಮಾನ್ಯವಾಗಿದೆ. ಮಾವು, ರೇಷ್ಮೆ, ಬಾಳೆಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾಗಡಿಯ 12 ಹಳ್ಳಿಗಳಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಸದ್ಯಕ್ಕೆ ಆಹಾರ ಕೊರತೆ ಕಂಡು ಬಂದಿಲ್ಲ.
ತಬ್ಲಿಘಿಗಳು:ದೆಹಲಿಗೆ ತೆರಳಿದ್ದರು ಎನ್ನಲಾದ 16 ಮಂದಿಯಲ್ಲಿ ಇಬ್ಬರ ಹೊರತು ಉಳಿದವರು ರಾಮನಗರಕ್ಕೆ ಬಂದಿಲ್ಲ. ಇವರ ನಿಗಾ ಅವಧಿ ಪೂರೈಸಿದ್ದಾರೆ.
ಜಿಲ್ಲೆಯಲ್ಲಿ ಕೃಷಿ, ಕೈಗಾರಿಕೆ, ಮೀನುಗಾರಿಕೆ, ಹೋಟೆಲ್, ಪ್ರವಾಸೋದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ. ಬೆಳೆದ ಬೆಳೆ ಮಾರಾಟಕ್ಕೆ ರೈತರು ಕಷ್ಟಪಡುತ್ತಿದ್ದಾರೆ. ಹೊರಜಿಲ್ಲೆಯ ವಲಸೆ ಕಾರ್ವಿುಕರಿಗೆ ಶಾಲೆ, ಹಾಸ್ಟೆಲ್​ಗಳಲ್ಲಿ ವಸತಿ ಕಲ್ಪಿಸಲಾಗಿದೆ. ಜಿಲ್ಲಾಡಳಿತ ಉತ್ತಮವಾಗಿ ಕೆಲಸ ಮಾಡುತ್ತಿದೆ. ಜನಪ್ರತಿನಿಧಿಗಳು ಕ್ರಿಯಾಶೀಲರಾಗಿದ್ದಾರೆ.
ತಬ್ಲಿಘಿಗಳು:ದೆಹಲಿಗೆ ಹೋಗಿದ್ದ 16 ಮಂದಿಯಲ್ಲಿ ಕೆಲವರು ಕ್ವಾರಂಟೈನ್​ನಲ್ಲಿದ್ದರೆ, ಕೆಲವರು ಬೇರೆ ಜಿಲ್ಲೆಗಳಲ್ಲಿದ್ದಾರೆ.
ಜಿಲ್ಲೆಯಲ್ಲಿ ಸಂಪೂರ್ಣ ಸ್ತಬ್ಧಗೊಂಡಿದೆ. ವಲಸೆ ಕಾರ್ವಿುಕರಿಗೆ ಜಿಲ್ಲಾಡಳಿತ ಆಹಾರ ಪದಾರ್ಥ ವಿತರಿಸಿ ಜೀವನ ನಿರ್ವಹಣೆಗೆ ಅನುವು ಮಾಡಿಕೊಟ್ಟಿದೆ. ಎಪಿಎಂಸಿಗಳಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿಕೊಟ್ಟರೂ ಜಿಲ್ಲೆಯ ರೈತರು ಬೆಳೆದ ತರಕಾರಿಗಳನ್ನು ಖರೀದಿಸುತ್ತಿದ್ದ ಹೊರ ರಾಜ್ಯಗಳ ವ್ಯಾಪಾರಿಗಳ ಸಂಖ್ಯೆ ಕ್ಷೀಣಿಸಿದೆ. ಬೆಳೆ ಸಾಗಣೆ ಮಾಡಲಾಗದೆ ರೈತರು ಕಂಗಾಲಾಗಿದ್ದಾರೆ.
ತಬ್ಲಿಘಿಗಳು:85 ಜನ. 22 ಜನರ ವರದಿ ನೆಗೆಟಿವ್. 62 ಜನರ ಕಫ, ರಕ್ತದ ಮಾದರಿ ಪರೀಕ್ಷೆಗೆ.
ಲಾಕ್​ಡೌನ್ ಬಳಿಕ ಸೋಂಕು ನಿಯಂತ್ರಣಕ್ಕೆ ಬಂದಂತೆ ಕಂಡುಬಂದಿತ್ತಾದರೂ ದೆಹಲಿಯ ತಬ್ಲಿಘಿ ಸಮಾವೇಶದಲ್ಲಿ ಪಾಲ್ಗೊಂಡು ಬಂದವರಿಂದ ಆತಂಕ ಮತ್ತಷ್ಟು ಹೆಚ್ಚಿದ್ದು, ಸೋಂಕಿತರ ಪ್ರಮಾಣವು ಏರಿಕೆಯಾಗುತ್ತಿರುವುದು ಆತಂಕ ಸೃಷ್ಟಿಸಿದೆ. ಬಿಬಿಎಂಪಿ ವತಿಯಿಂದ 31 ಫೀವರ್ ಕ್ಲಿನಿಕ್​ಗಳನ್ನು ಪ್ರಾರಂಭಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ದಿನಸಿ ಅಂಗಡಿಗಳನ್ನು ಹೊರತುಪಡಿಸಿ ವ್ಯಾಪಾರ ವಹಿವಾಟು ಬಹುತೇಕ ಸ್ಥಗಿತವಾಗಿದೆ.
ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಉತ್ಪನ್ನಗಳ ಸಾಗಣೆಗೆ ಅವಕಾಶವಿದ್ದರೂ ಬೇಡಿಕೆ ಕುಸಿತದಿಂದ ರೈತರು, ವರ್ತಕರು ನಷ್ಟ ಅನುಭವಿಸುತ್ತಿದ್ದಾರೆ. ಹೂವಿನ ಬೆಳೆಗಳು ಹಾಳಾಗುತ್ತಿವೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥನಾರಾಯಣ್ 6 ತಿಂಗಳಲ್ಲಿ ಒಮ್ಮೆ ಮಾತ್ರ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಸಚಿವ ಕೆ.ಸುಧಾಕರ್ ಕೂಡ ಜಿಲ್ಲೆ ಕಡೆಗಣಿಸಿದ್ದಾರೆ!
ತಬ್ಲಿಘಿ:ಜಮಾತ್​ಗೆ ಹೋಗಿ ಬಂದಿದ್ದ 61 ಮಂದಿ ಪೈಕಿ 57 ಜನರಿಗೆ ನೆಗಟಿವ್ ಬಂದಿದೆ.
ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಅನುಮತಿ ನೀಡಿದ ಬಳಿಕ ಜನ ಹೊಂದಿಕೊಂಡಿದ್ದಾರೆ. ಪ್ರಮುಖ ಬೆಳೆಗಳಾದ ಅಡಕೆ, ತೆಂಗು, ಕೊಕ್ಕೊ, ಕಾಳುಮೆಣಸು ಹಾಗೂ ರಬ್ಬರ್ ಬೆಲೆ ಕುಸಿತದ ಭೀತಿಯಲ್ಲಿವೆ. ವ್ಯಾಪಾರ-ವಹಿವಾಟಿಗೆ ಹೊಡೆತ ಬಿದ್ದಿದ್ದು, ಅಂದಾಜು 4000 ಕೋಟಿ ರೂ. ನಷ್ಟ ಸಂಭವಿಸಿದೆ. ಮೀನುಗಾರಿಕೆಯೂ (-ಠಿ;200 ಕೋಟಿ) ನಷ್ಟದಲ್ಲಿದೆ.
ತಬ್ಲಿಘಿಗಳು:ದೆಹಲಿಗೆ ಹೋಗಿದ್ದ 44 ಜನರ ಪೈಕಿ ಇಬ್ಬರಲ್ಲಿ ಸೋಂಕು ದೃಢ.
ಜಿಲ್ಲೆಯಲ್ಲಿ ಸದ್ಯದ ಮಟ್ಟಿಗೆ ಕರೊನಾ ಮುಕ್ತ ಜಿಲ್ಲೆಗಳ ಪಟ್ಟಿಗೆ ಸೇರ್ಪಡೆಗೊಂಡಿದೆ. ಹಸಿಮೆಣಸು, ಬಾಳೆ ಬೆಳೆದ ಬೆಳೆಗಾರರು ಮಾರಾಟ ಮಾಡಲು ಸಾಧ್ಯವಾಗದೆ ನಷ್ಟಕ್ಕೆ ತುತ್ತಾಗಿದ್ದಾರೆ. ಕಾಫಿ ಮಾರಾಟ ಮಾಡಲು ಬೆಳೆಗಾರರಿಗೆ ಸಮಸ್ಯೆಯಾಗಿದೆ.
ತಬ್ಲಿಘಿಗಳು:24 ಜನ. 14 ಜನ ಹೋಂ ಕ್ವಾರಂಟೈನ್. 5 ಜನ ದೆಹಲಿ, 5 ಜನ ಹೊರ ಜಿಲ್ಲೆಗಳಲ್ಲಿ. ಗುಜರಾತ್ ಮೂಲದ 9 ಸೂರ ತಬ್ಲಿಘಿಗಳು ಜಿಲ್ಲಾ ಕ್ವಾರಂಟೈನ್​ನಲ್ಲಿ ಬಂಧಿ.
ಜಿಲ್ಲೆಯಲ್ಲಿ ಕಾರ್ಖಾನೆಗಳನ್ನು ಮುಚ್ಚಲಾಗಿದ್ದು, ನಷ್ಟ ಅನುಭವಿಸುತ್ತಿವೆ. ಕೆಲಸವಿಲ್ಲದೆ ಕಾರ್ವಿುಕರು ಅತಂತ್ರವಾಗಿದ್ದು, ಊಟ, ದಿನಸಿಗಾಗಿ ಅನ್ಯರ ಕೈ ನೋಡುವಂತಾಗಿದೆ. ಜಿಲ್ಲಾಡಳಿತವು ವಿವಿಧ ತಂಡವನ್ನು ಕಟ್ಟಿಕೊಂಡು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ತಬ್ಲಿಘಿಗಳು:43 ಜನ. ಹೋಂ ಕ್ವಾರಂಟೈನ್​ನಲ್ಲಿ 30 ಜನ. ಉಳಿದವರು ದೆಹಲಿಯಲ್ಲಿ.
ಜಿಲ್ಲೆಯಲ್ಲಿ ಲಾಕ್​ಡೌನ್ ಪರಿಣಾಮಕಾರಿಯಾಗಿ ಜಾರಿಯಾಗಿದೆ. ಏಪ್ರಿಲ್ 3ನೇ ವಾರದಿಂದ ಬಿತ್ತನೆ ಕಾರ್ಯ ಕೈಗೊಳ್ಳಬೇಕಿರುವುದರಿಂದ ರೈತರು ಸಿದ್ಧತೆಯಲ್ಲಿ ತೊಡಗಿದ್ದಾರೆ. ಹಳ್ಳಿಗಳಿಂದ ರೈತರು ಎಪಿಎಂಸಿಗೆ ಸಾಮಗ್ರಿ ತರುತ್ತಿದ್ದು ಸೂಕ್ತ ಬೆಲೆ ಸಿಗುತ್ತಿಲ್ಲ. ಬೆಂಗಳೂರಿನ ಮಾರುಕಟ್ಟೆಗೂ ಹಾಸನದಿಂದ ತರಕಾರಿ ರವಾನೆಯಾಗುತ್ತಿದೆ.
ತಬ್ಲಿಘಿಗಳು:15 ಜನ. ಈ ಪೈಕಿ ಜಿಲ್ಲೆಗೆ ವಾಪಸ್ ಬಂದ 9 ಜನ ಹೋಂ ಕ್ವಾರಂಟೈನ್​ನಲ್ಲಿ. ಮೂವರು ದೆಹಲಿಯ ಕ್ವಾರಂಟೈನ್​ನಲ್ಲಿದ್ದಾರೆ.
ಜಿಲ್ಲೆಯಲ್ಲಿ ಲಾಕ್​ಡೌನ್​ಗೆ ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ನಗರದಲ್ಲಿ ವಾಹನಗಳ ಓಡಾಟಕ್ಕೆ ಬ್ರೇಕ್ ಬಿದ್ದಿಲ್ಲ. ಟೊಮ್ಯಾಟೊ, ಕ್ಯಾಪ್ಸಿಕಂ ಮಾರುಕಟ್ಟೆಗೆ ಸಾಗಿಸಲಾಗದೆ ರೈತರು ಬೆಳೆ ಸಹಿತ ಉಳುಮೆ ಮಾಡಿದ್ದಾರೆ. ಕೆಲ ಜನಪ್ರತಿನಿಧಿಗಳು ಬೆಳೆ ಖರೀದಿಸಿ ಉಚಿತವಾಗಿ ಹಂಚುತ್ತಿದ್ದಾರೆ. ಗೋದಾಮಿನಿಂದ ಲಿಫ್ಟ್ ಮಾಡುವ ಪಡಿತರ ತೂಕದಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂಬ ದೂರು ಕೇಳಿ ಬರುತ್ತಿದೆ.
ತಬ್ಲಿಘಿಗಳು:ದೆಹಲಿ ಸಮಾವೇಶಕ್ಕೆ ಯಾರೂ ಹೋಗಿಲ್ಲ
ಜಿಲ್ಲೆಯಲ್ಲಿ ಹಳ್ಳಿಗಳಲ್ಲಿ ಲಾಕ್​ಡೌನ್ ಬಿಗಿಯಾಗಿಲ್ಲ. ವಲಸಿಗರಿಗೆ ಸೇವಾಕೇಂದ್ರ ತೆರೆಯಲಾಗಿದೆ. ಮನೆಬಾಗಿಲಿಗೆ ಉಪಹಾರ, ಪಡಿತರ ವಿತರಣೆ ಕಲ್ಪಿಸಲಾಗಿದೆ. ಬೆಲೆ ಸಿಗದೆ ತೋಟಗಳಲ್ಲೇ ದ್ರಾಕ್ಷಿ ನಾಶಪಡಿಸಲಾಗುತ್ತಿದೆ. ಜಿಲ್ಲಾಡಳಿತ ಸಕ್ರಿಯವಾಗಿದೆ.
ತಬ್ಲಿಘಿಗಳು:ತಬ್ಲಿಘಿ ಸಮಾವೇಶಕ್ಕೆ 12 ಮಂದಿ ಹೋಗಿ ಬಂದಿದ್ದು, ಇಬ್ಬರಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರು ಹೋಮ್ ಕ್ವಾರಂಟೈನ್​ನಲ್ಲಿದ್ದಾರೆ, * ಕ್ವಾರಂಟೈನ್-86
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
