ಬೆಂಗಳೂರು:ಕರೊನಾ ಸೋಂಕಿನಿಂದ ಲಾಕ್​​ಡೌನ್​ ಆಗಿರುವ ಹಿನ್ನಲೆಯಲ್ಲಿ ನೀರಿನ ಬಿಲ್ ಪಾವತಿಯಲ್ಲಿ ಯಾವುದೇ ರಿಯಾಯಿತಿ ಇಲ್ಲ, ಬಿಲ್ ಪಾವತಿ ಮಾಡದ ಮನೆ ಸಂಪರ್ಕವನ್ನು ಕಡಿಯುವುದಿಲ್ಲ ಎಂದು ಜಲಮಂಡಳಿ ಶನಿವಾರ ಸ್ಪಷ್ಟನೆ ನೀಡಿದೆ.
ಪ್ರತಿ ತಿಂಗಳಿಗೊಮ್ಮೆ ಬರುವ ನೀರಿನ ಬಿಲ್ ಪಾವತಿಸಲು ಮಂಡಳಿಯಿಂದ ಯಾವುದೇ ರಿಯಾಯಿತಿ ನೀಡಲು ಸಾಧ್ಯವಿಲ್ಲ. ಡಿಜಿಟಲ್ ಪೇಮೆಂಟ್ ಮೂಲಕ ಹಾಗೂ ಆಲ್ ಲೈನ್ ಮೂಲಕ ಬಿಲ್ ಪಾವತಿಸಬಹುದಾಗಿದೆ. ಈಗಾಗಲೇ ನಗರ ಬಿಟ್ಟು ಅನೇಕರು ತಮ್ಮ ಊರಿಗೆ ಹೋಗಿದ್ದಾರೆ. 21 ದಿನ ಲಾಕ್ ಡೌನ್ ಹಿನ್ನಲೆ ಹಲವರಿಗೆ ಸಮಸ್ಯೆಯುಂಟಾಗಿದೆ. ಹೀಗಾಗಿ ಬಿಲ್ ಪಾವತಿಸದವರ ಮನೆ ನೀರಿನ ಸಂಪರ್ಕವನ್ನು 2 ತಿಂಗಳ ಮಟ್ಟಿಗೆ ಕಡಿತಗೊಳಿಸಲ್ಲ ಎಂದು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ವಿಜಯವಾಣಿಗೆ ತಿಳಿಸಿದ್ದಾರೆ.
ಸ್ಟೇ ಅಟ್ ಹೋಮ್ಎಲ್ಲರೂ ಮನೆಯಲ್ಲೇ ಸುರಕ್ಷಿತವಾಗಿರಿ, ನಾವು ನಿಮ್ಮ ಸೇವೆಗೆ ಸದಾ ಸಿದ್ದರಾಗಿದ್ದೇವೆ. ನಾವು ಮನೆಯಲ್ಲಿ ಇರಲು ಸಾಧ್ಯವಿಲ್ಲವೆಂದು ಬೆಂಗಳೂರು ಜಲಮಂಡಳಿ ಸಾರ್ವಜನಿಕರಿಗೆ ಮನವಿ ಮಾಡಿದೆ. ಉತ್ತಮ ಮತ್ತು ಆರೋಗ್ಯಕರ ವಾತಾವರಣ ನಿರ್ಮಾಣದ ಹಾದಿಯಲ್ಲಿ ನಿಮಗಾಗಿ ಸೇವೆ ಸಲ್ಲಿಸಲು ನಾವು ಸಿದ್ಧರಾಗಿದ್ದೇವೆ. ನಮಗಾಗಿ ನೀವು ಮನೆಯಲ್ಲಿದ್ದು, ಉತ್ತಮ ಸ್ವಾಸ್ಥ್ಯಕ್ಕಾಗಿ ಸಹಕರಿಸಿ ಎಂದು ಮಂಡಳಿ ಕೋರಿದೆ. ಮಂಡಳಿಯು ಸಾಮಾಜಿಕ ಜಾಲತಾಣಗಳಲ್ಲಿ ಹೀಗೆ ಕೋರುವ ಮೂಲಕ ಅರಿವು ಮೂಡಿಸುತ್ತಿದೆ.
24/7 ಸಹಾಯವಾಣಿ ಲಭ್ಯ :ಸಾರ್ವಜನಿಕರ ದೂರುಗಳನ್ನು ಆಲಿಸಲು ಮಂಡಳಿಯ 080-22238888 ಸಹಾಯವಾಣಿ ಲಭ್ಯವಿದೆ. ಆದರೆ ಸಹಾಯವಾಣಿ ಇಲ್ಲ ಎಂಬ ದೂರು ಕೇಳಿಬಂದಿದೆ. ಈ ಸಹಾಯವಾಣಿ 24*7 ಕಾರ್ಯನಿರ್ವಹಿಸುತ್ತಿದೆ. ಜತೆಗೆ ಟೋಲ್ ಫ್ರೀ ಸಂಖ್ಯೆ 1916 ಹಾಗೂ ವಾಟ್ಸ್‍ಆಪ್ 8762228888 ಲಭ್ಯವಿದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.
ಅಗತ್ಯ ವಸ್ತು ಖರೀದಿಗೆ ಹೋಗ್ತೀರಾದರೆ ಈ ಬಗ್ಗೆ ಗಮನಿಸಿ…

2019ರಲ್ಲಿ ಈ ಬಾಲಕ ಹೇಳಿದ್ದ ಭವಿಷ್ಯ ನಿಜವಾಯಿತೇ? ಅಭಿಗ್ಯನ ಊಹೆಯೇ ಸತ್ಯವಾಗುವುದಾದರೆ ಕರೊನಾದಿಂದ ಮುಕ್ತಿ ಪಡೆಯಲು ಮೇ 29ರವರೆಗೆ ಕಾಯಲೇಬೇಕು… !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + ten =
Remember me
