ಬೆಂಗಳೂರು:ಅಬಕಾರಿ ಮೂಲದ ಆದಾಯ ಸಂಗ್ರಹ ಹಾಗೂ ಗುರಿ ಮೀರಿದ ಸಾಧನೆ ಸಲೀಸು. ಆದರೆ, ಕರೊನಾ ಸಂಕಷ್ಟ ಕಾಲದಲ್ಲಿ ಅನುಮತಿ ನೀಡುವುದು ಕಠಿಣ ಸವಾಲು. ಹೀಗಾಗಿ ಈ ಆದಾಯದೆಡೆ ಸರ್ಕಾರ ಎಚ್ಚರಿಕೆ ನಡೆಯಿಟ್ಟಿದ್ದು, ಸಾರ್ವಜನಿಕ ಅಭಿಪ್ರಾಯ ರೂಪಿಸುವ ತಂತ್ರಕ್ಕೆ ಮೊರೆ ಹೋಗಿದೆ.
ಎಂಎಸ್​ಐಎಲ್ ಮಳಿಗೆಗಳಲ್ಲಿ ಮದ್ಯ ಮಾರಾಟ ಪುನಾರಂಭಕ್ಕೆ ಅನುಮತಿ ನೀಡಬೇಕು. ದೈಹಿಕ ಸಾಮಾಜಿಕ ಅಂತರ ಕಾಪಾಡುವುದು ಸೇರಿ ಮುನ್ನೆಚ್ಚರಿಕೆ ದೃಷ್ಟಿಯಿಂದ ಪಾರ್ಸೆಲ್​ಗೆ ಮಾತ್ರ ಅವಕಾಶ ನೀಡಬೇಕೆಂಬ ಸಲಹೆಯಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಎಂಎಸ್​ಐಎಲ್ ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಬೇಕೆಂಬ ವಿಷಯದ ಬಗ್ಗೆ ಚರ್ಚೆಯಾಗಿದೆ ಎಂದಷ್ಟೇ ಹೇಳುವ ಮೂಲಕ ವಿಷಯ ಸಾರ್ವಜನಿಕರ ಚರ್ಚೆಗೆ ಬಿಟ್ಟಿದ್ದಾರೆ. ಜತೆಗೆ ಬಹುತೇಕರ ಒಲವು ಪರವಾಗಿ ವ್ಯಕ್ತವಾದರೆ, ಮದ್ಯ ವಹಿವಾಟು ಪುನಾರಂಭದ ರೀತಿ-ರಿವಾಜು ನಿರ್ಧರಿಸುವುದಕ್ಕೆ ಕಾಲಾವಕಾಶ ಸಿಕ್ಕಂತಾಗುತ್ತದೆ.
ಗಂಭೀರ ಚರ್ಚೆ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆ ಯಲ್ಲಿ ನಡೆದ ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಗಂಭೀರ ಚರ್ಚೆಯಾಗಿದೆ. ಹಲವು ಪ್ರಮುಖ ಆದಾಯ ಮೂಲಗಳಲ್ಲಿ ಅಬಕಾರಿ ಒಂದಾಗಿದೆ. ಕೇವಲ ಬೊಕ್ಕಸಕ್ಕೆ ತುಂಬಿಕೊಳ್ಳುವುದಷ್ಟೇ ಅಲ್ಲ, ಬೇರೆ ಅಂಶಗಳನ್ನು ಪರಿಗಣಿಸಿ ಸೂಕ್ತ ತೀರ್ವನಕ್ಕೆ ಬರಬೇಕೆಂಬ ಸಲಹೆ ಪ್ರಸ್ತಾಪವಾಗಿದೆ.
ಮುಖ್ಯವಾಗಿ ಅನೇಕರ ಮೇಲೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಮತ್ತು ಕೆಲವು ಮದ್ಯ ವಂಚಿತರು ಆತ್ಮಹತ್ಯೆ ಮಾಡಿಕೊಂಡದ್ದು, ನೆರೆ-ಹೊರೆ ರಾಜ್ಯಗಳ ನಿರ್ಧಾರದ ಬಗ್ಗೆಯೂ ಅವಲೋಕಿಸಬೇಕು ಎಂಬ ಚಿಂತನೆ ವ್ಯಕ್ತವಾಗಿದೆ. ಮದ್ಯ ಮಾರಾಟ ಸಂಘದವರು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಮುಂದಿಟ್ಟು ಮದ್ಯ ವಹಿವಾಟು ಪುನಾರಂಭಿಸಬೇಕೆಂಬ ಮನವಿಯೂ ಸಭೆಯಲ್ಲಿ ಚರ್ಚೆಯಾಗಿದೆ. ಎಂಎಸ್​ಐಎಲ್ ಗೆ ಮಾತ್ರ ಪರವಾನಗಿ ನೀಡುವುದರಿಂದ ಉಂಟಾಗುವ ಸಾಧಕ-ಬಾಧಕಗಳ ಬಗ್ಗೆ ಸರ್ಕಾರ ಯೋಚಿಸುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕೆಲ ಕೈಗಾರಿಕೆಗಳಿಗೆ ರಿಲ್ಯಾಕ್ಸ್ ಸಂಭವ
ಬೆಂಗಳೂರು: ಕರೊನಾ ಲಾಕ್​ಡೌನ್ ಕಾರಣಕ್ಕೆ ಜರ್ಜರಿತವಾಗಿ ಹೋಗಿರುವ ಕೈಗಾರಿಕೋದ್ಯಮ, ರಿಲ್ಯಾಕ್ಸ್ ಆಗುವ ಮೂಡ್​ನಲ್ಲಿ ಹತ್ತು ಹಲವು ನಿರೀಕ್ಷೆ ಇಟ್ಟುಕೊಂಡಿದೆ. ದೇಶ ಮತ್ತು ನಾಡಿನ ಪ್ರಗತಿಗೆ ಕೈಗಾರಿಕೋದ್ಯಮ ಪಾತ್ರ ಬಹುಮುಖ್ಯವಾದದ್ದು. ಈ ನಿಟ್ಟಿನಲ್ಲಿ ಬೃಹತ್ ವಹಿವಾಟು ನಡೆಸುವ ಕೈಗಾರಿಕೆಗಳು ತನ್ನ ಉತ್ಪಾದನೆಗಳನ್ನು ಸ್ಥಗಿತಗೊಳಿಸಿದ್ದರಿಂದ ಬಹುದೊಡ್ಡ ನಷ್ಟವಾಗಿದೆ. ಮೊದಲ ಹಂತದಲ್ಲಿ ನೌಕರರು, ಕಾರ್ವಿುಕರ ಶೇ.50 ಹಾಜರಾತಿಗೆ ಅವಕಾಶ ಮಾಡಿಕೊಟ್ಟರೂ ಸಾಕು, ನಮ್ಮ ಕೈಗಾರಿಕೆಗಳನ್ನು ಪುನಾರಂಭ ಮಾಡಲು ಸಾಧ್ಯವಿದೆ. ಹಂತ ಹಂತವಾಗಿ ಇನ್ನುಳಿದ ಸಿಬ್ಬಂದಿ ಮತ್ತು ಕಾರ್ವಿುಕರ ಹಾಜರಾತಿಗೆ ಅವಕಾಶ ಮಾಡಿಕೊಡಬಹುದು ಎನ್ನುವುದು ಕೈಗಾರಿಕಾ ಕ್ಷೇತ್ರ ನಿರೀಕ್ಷೆ.
ಮಂಡ್ಯದಲ್ಲಿ 8ಕ್ಕೆ ಏರಿದ ಸೋಂಕಿತರು
ಮಂಡ್ಯ: ಜಿಲ್ಲೆಯಲ್ಲಿ ಮತ್ತೆ ಮೂವರಿಗೆ ಮಾರಕ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 8ಕ್ಕೆ ಏರಿದೆ. ಮಳವಳ್ಳಿ ಪಟ್ಟಣದ ಪಿ.179 ರೋಗಿಯ ತಾಯಿ, ಮಗಳು ಮತ್ತು ಸಹೋದರಿ ಪುತ್ರನಿಗೆ ಸೋಂಕಿರುವುದು ಖಚಿತವಾಗಿದ್ದು, ಒಟ್ಟಾರೆ ಜಿಲ್ಲೆಯ 8 ಪ್ರಕರಣಗಳ ಪೈಕಿ ಮಳವಳ್ಳಿ ಪಟ್ಟಣದಲ್ಲೇ 7 ಪ್ರಕರಣಗಳು ದಾಖಲಾಗಿವೆ.
ಮತ್ತೊಬ್ಬ ಕಾರ್ವಿುಕ ಡಿಸ್ಚಾರ್ಜ್: ಮೈಸೂರು: ಜಿಲ್ಲೆಯಲ್ಲಿ ಜುಬಿಲೆಂಟ್ ಕಾರ್ಖಾನೆಯ ಮತ್ತೊಬ್ಬ ಕಾರ್ವಿುಕ ಕೋವಿಡ್-19 ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಸೋಮವಾರ ಬಿಡುಗಡೆ ಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 38ಕ್ಕೆ ಇಳಿದಿದೆ. ಭಾನುವಾರವೂ ಗುಣಮುಖ ರಾಗಿದ್ದ ಜುಬಿಲೆಂಟ್ ಕಾರ್ಖಾನೆಗೆ ಸಂಬಂಧಪಟ್ಟ ಆರು ಜನ ಹಾಗೂ ವಿದೇಶ ದಿಂದ ಬಂದವರೊಬ್ಬರು ಬಿಡುಗಡೆಯಾಗಿದ್ದರು. ಸೋಮವಾರ ಯಾವುದೇ ಹೊಸ ಸೋಂಕಿತರ ಪ್ರಕರಣ ಪತ್ತೆಯಾಗಿಲ್ಲ.
ಧಾರವಾಡದಲ್ಲಿ 32 ಶಂಕಿತರು ಪತ್ತೆ
ಧಾರವಾಡ: ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ 4 ಪ್ರಕರಣಗಳಲ್ಲಿ ಕರೊನಾ ಸೋಂಕು ದೃಢಪಟ್ಟಿರುವ ಬೆನ್ನಲ್ಲೇ, 32 ಸೋಂಕು ಶಂಕಿತ ವ್ಯಕ್ತಿಗಳು ಪತ್ತೆಯಾಗಿರುವುದು ಮತ್ತಷ್ಟು ಆತಂಕಕ್ಕೀಡು ಮಾಡಿದೆ. ಶಂಕಿತರ ಜತೆಗೆ ನಿಗಾ ವಹಿಸಲಾಗಿರುವವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಭಾನುವಾರ ಇದ್ದ 424ಶಂಕಿತರ ಸಂಖ್ಯೆ ಸೋಮವಾರ 456ಕ್ಕೆ ಏರಿಕೆಯಾಗಿದ್ದರೆ, ನಿಗಾ ವಹಿಸಿದವರ ಸಂಖ್ಯೆ 932ರಿಂದ 964ಕ್ಕೆ ಏರಿಕೆಯಾಗಿದೆ.
ಬೆಳಗಾವಿಯಲ್ಲಿ ಮೂವರಲ್ಲಿ ಸೋಂಕು
ಬೆಳಗಾವಿ: ಜಿಲ್ಲೆಯಲ್ಲಿ ಕರೊನಾ ವೈರಸ್ ಅಟ್ಟಹಾಸ ಮುಂದುವರಿದಿದ್ದು, ಸೋಮವಾರ ಮತ್ತೆ ಮೂರು ವ್ಯಕ್ತಿಗಳಲ್ಲಿ ಕರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಆ ಮೂಲಕ ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಸೋಂಕು ದೃಢಪಟ್ಟ ಮೂವರೂ ರಾಯಬಾಗ ತಾಲೂಕಿನವರು. 20 ವರ್ಷದ ಯುವಕ (ಪಿ-243), 14 ವರ್ಷದ ಬಾಲಕ (ಪಿ-244) ಹಾಗೂ 45 ವರ್ಷದ ವ್ಯಕ್ತಿಗೆ (ಪಿ-245) ಸೋಂಕು ಇರುವುದು ದೃಢವಾಗಿದೆ. ಸೋಂಕಿತನಾಗಿ ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಿ-149ರ ಸಂಪರ್ಕದಿಂದ ಇವರಿಗೆ ಸೋಂಕು ತಗುಲಿದೆ.
ವೃದ್ಧೆ ಸಾವು: ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿ ಕರೊನಾ ವೈರಸ್ ಸೋಂಕಿತ ವ್ಯಕ್ತಿ (ಪಿ-224)ಯ ಜತೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 80 ವರ್ಷದ ವೃದ್ಧೆಯೊಬ್ಬರು ಸೋಮವಾರ ಬೆಳಗ್ಗೆ 10.30ಕ್ಕೆ ಮೃತಪಟ್ಟಿದ್ದಾರೆ. ಅವರ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ.
ಆತಂಕ ಹುಟ್ಟಿಸಿದ ಮಹಿಳೆ ಸಾವು
ರಾಣೆಬೆನ್ನೂರ: ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ತಾಲೂಕಿನ ಕುದರಿಹಾಳ ಗ್ರಾಮದ 35 ವರ್ಷದ ಮಹಿಳೆ ಏಕಾಏಕಿ ಮೃತಪಟ್ಟಿದ್ದು, ಗ್ರಾಮದಲ್ಲೀಗ ಭಾರಿ ಆತಂಕ ಸೃಷ್ಟಿಸಿದೆ. ಮಹಿಳೆಗೆ ಹೃದಯ ಸಂಬಂಧಿ ಕಾಯಿಲೆ ಇತ್ತು ಎನ್ನಲಾಗಿದ್ದು, ಕೊಂಚ ಜ್ವರ ಕಾಣಿಸಿಕೊಂಡಿದ್ದರಿಂದ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಆದರೂ ಗ್ರಾಮದಲ್ಲಿ ಆತಂಕ ಆವರಿಸಿದೆ.
ದೊಡ್ಡಬಳ್ಳಾಪುರದಲ್ಲಿ ಮೊದಲ ಪ್ರಕರಣ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಮೊದಲ ಕರೊನಾ ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿದೆ. ಮಧುರೆ ಹೋಬಳಿ ಕೋಡಿಪಾಳ್ಯ ಗ್ರಾಮದ 39 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಸೋಂಕಿತ ಮಾ.14 ರಿಂದ 18ರವರೆಗೆ ದೆಹಲಿಗೆ ಪ್ರಯಾಣ ಮಾಡಿದ್ದ. ಮಾ.19ರಂದು ಹಿಂದಿರುಗುವಾಗ ನಿಜಾಮುದ್ದೀನ್ ರೈಲಿನಲ್ಲಿ ಕರೊನಾ ಸೋಂಕಿತ ಸಹ ಪ್ರಯಾಣಕನೊಂದಿಗೆ ಇದ್ದ ಎನ್ನಲಾಗಿದೆ.
ಸೋಂಕಿತರ ಸಂಖ್ಯೆ ಒಂಬತ್ತಕ್ಕೆ ಏರಿಕೆ
ಬಾಗಲಕೋಟೆ: ಬಿಡುವು ನೀಡಿತು ಎನ್ನುವಷ್ಟರಲ್ಲಿ ಜಿಲ್ಲೆಯಲ್ಲಿ ಮತ್ತೆ ಕರೊನಾ ಮಹಾಮಾರಿ ಅಟ್ಟಹಾಸ ಮುಂದುವರಿಸಿದೆ. ಸೋಮವಾರ ಹೊಸದಾಗಿ ಮತ್ತೊಂದು ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಂಬತ್ತಕ್ಕೇರಿದೆ.
VIDEO| ನಾಯಿಯ ಮುಂದೆ ಸತ್ತಂತೆ ನಟಿಸಿ ಎಸ್ಕೇಪ್​ ಆದ ಬಾತುಕೋಳಿ: ಈ ವೈರಲ್​ ವಿಡಿಯೋ ಮಿಸ್​ ಮಾಡ್ಕೋಬೇಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 16 =
Remember me
