ರೋಣ:ಕರೊನಾ ಹಾವಳಿಯಂತಹ ಕಷ್ಟ ಕಾಲದಲ್ಲೂ ಎಂತೆಂತಹ ಘಟನೆಗಳು ನಡೆಯುತ್ತವೆ ನೋಡಿ. ‘ಮಾಸ್ಕ್ ಹಾಕಿಕೊಳ್ಳಿ’ ಎಂದು ಹೇಳಿದ ಆಶಾ ಕಾರ್ಯಕರ್ತೆಯರಿಗೇ ಕೆಲವು ಪಡ್ಡೆ ಹುಡುಗರು ‘ನಿಮ್ಮ ಸೀರೆಗಳನ್ನು ಬಿಚ್ಚಿ ಮಾಸ್ಕ್ ಮಾಡಿಕೊಡಿ, ಹಾಕ್ಕೋತೀವಿ’ ಎಂದು ಉತ್ತರ ಕೊಟ್ಟು ದುಷ್ಟತನ ಮೆರೆದಿದ್ದಾರೆ!
ಸ್ಥಳೀಯ ಟಾಸ್ಕ್ ೆರ್ಸ್ ಸಮಿತಿಯ ಬುಧವಾರದ ಸಭೆಯಲ್ಲಿ ಈ ವಿಷಯವನ್ನು ಹಿರೇಹಾಳ ಗ್ರಾಮದ ಆಶಾ ಕಾರ್ಯಕರ್ತೆಯರು ಕಣ್ಣೀರಿಡುತ್ತಲೇ ಅರುಹಿದ್ದಾರೆ.
ಕರೊನಾ ವೈರಸ್ ನಿಯಂತ್ರಣಕ್ಕೆ ಅವಿರತವಾಗಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆ ಕೊಟ್ರಮ್ಮ ವಿರಕ್ತಮಠ ಹಾಗೂ ಸರ್ಕಾರಿ ಆಸ್ಪತ್ರೆಯ ನರ್ಸ್ ರಾಜಲಕ್ಷ್ಮೀ ಅವರು ಹಿರೇಹಾಳ ಗ್ರಾಮದಲ್ಲಿ ಕರ್ತವ್ಯದಲ್ಲಿದ್ದರು. ಅಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ತಿರುಗಾಡುತ್ತಿದ್ದ ಯುವಕರಿಗೆ ‘ಮಾಸ್ಕ್ ಧರಿಸಿಕೊಳ್ಳಿ’ ಎಂದು ಹೇಳಿದರು. ಆಗ ಆ ಯುವಕರು, ‘ನಿಮ್ಮ ಸೀರೆ ಬಿಚ್ಚಿ ಮಾಸ್ಕ್ ಮಾಡಿಕೊಡಿ’ ಎಂದು ಛೇಡಿಸಿದರು.
ಈ ವಿಷಯವನ್ನು ಆಶಾ ಕಾರ್ಯಕರ್ತೆಯರು ವಿವರಿಸುತ್ತಿದ್ದಂತೆಯೇ ಸಭೆಯಲ್ಲಿದ್ದ ಗ್ರಾಪಂ ಸದಸ್ಯರೊಬ್ಬರು, ‘ನೀವು ಹೆದರಬೇಡಿ. ನಿಮ್ಮ ಜೊತೆ ನಾನಿರುತ್ತೇನೆ. ಆ ರೀತಿ ಮಾತನಾಡುವ ಯುವಕರು ಎಂತಹ ಪ್ರಭಾವಿಯಾಗಿದ್ದರೂ ನಿಮ್ಮ ಕಾಲಲ್ಲಿರುವ ಎಕ್ಕಡ ತೆಗೆದು ಚೆನ್ನಾಗಿ ಬಾರಿಸಿ. ಮುಂದೆ ಬಂದಿದ್ದನ್ನು ನಾನು ನೋಡಿಕೊಳ್ಳುತ್ತೇನೆ’ ಎಂದು ಅಭಯ ನೀಡಿದರು. ಅಲ್ಲಿದ್ದ ಗ್ರಾಪಂ ಸದಸ್ಯರೆಲ್ಲರೂ ಅವರ ಮಾತಿಗೆ ಬೆಂಬಲ ಸೂಚಿಸಿದರು.
ಈ ವೇಳೆ ಹಿರೇಹಾಳ ಗ್ರಾಪಂ ವಿಸ್ತೀರ್ಣಾಧಿಕಾರಿ ಬಿ.ಎಸ್. ದಳವಾಯಿ ಮಾತನಾಡಿ, ‘ನಾಳೆಯಿಂದ ನಿಮ್ಮ ಕೈಯಲ್ಲಿ ಲಾಠಿ ಕೊಡುತ್ತೇವೆ. ಲಾಠಿ ಹಿಡಿದುಕೊಂಡು ಕೆಲಸ ಮಾಡಿ. ಯಾರಾದರೂ ನಿಮ್ಮ ತಂಟೆಗೆ ಬಂದರೆ ಅವರ ವಿರುದ್ಧ ಎಫ್‌ಐಆರ್ ಮಾಡಲು ನಮಗೆ ಅವಕಾಶವಿದೆ’ ಎಂದು ಆಶಾ ಕಾರ್ಯಕರ್ತೆಯರಿಗೆ ಹಾಗೂ ನರ್ಸ್‌ಗಳಿಗೆ ಧೈರ್ಯ ತುಂಬಿದರು.
ಕರೊನಾ ಭೀತಿಯ ನಡುವೆಯೇ ಬಾಹ್ಯಾಕಾಶ ಸಂಪನ್ಮೂಲ ಖರೀದಿಗೆ ಆದೇಶ ಹೊರಡಿಸಿದವರು ಯಾರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 13 =
Remember me
