ಬೆಂಗಳೂರು:ಕಿಲ್ಲರ್​ ಕರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಮತ್ತೆ ಐದು ಹೊಸ ಪ್ರಕರಣಗಳು ಪತ್ತೆಯಾಗಿವೆ.
ಈ ಬಗ್ಗೆ ಟ್ವೀಟ್​ ಮಾಡಿರುವ ಆರೋಗ್ಯ ಸಚಿವ ಶ್ರೀರಾಮುಲು, ದಿನಾಂಕ 29/03/20ರ ಸಂಜೆ 5 ಗಂಟೆಯಿಂದ 30/03/20ರ ಬೆಳಗ್ಗೆ 8 ಗಂಟೆಯವರೆಗೆ 5 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 88ಕ್ಕೇರಿದೆ. ಪತ್ತೆಯಾದ 5 ಪ್ರಕರಣಗಳು ಮೈಸೂರು ಜಿಲ್ಲೆ ನಂಜನಗೂಡು ನಿವಾಸಿಗಳಾಗಿದ್ದಾರೆ ಎಂದು ತಿಳಿಸಿದ್ದಾರೆ.
ನಂಜನಗೂಡು ಶಾಸಕ ಹರ್ಷವರ್ಧನ್ ಮಾತನಾಡಿ, ನಂಜನಗೂಡಿನಲ್ಲಿ 4500 ಜನರಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. ಸೋಂಕಿತರ ಕುಟುಂಬಸ್ಥರನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಜುಬಿಲಿಯೆಂಟ್ ಜನರಿಕ್ ಕಾರ್ಖಾನೆಯ ಕೆಲ ಕಾರ್ಮಿಕರಲ್ಲೂ ಕರೊನಾ ಪಾಸಿಟಿವ್ ಆಗಿದೆ. 14 ಕುಟುಂಬಗಳನ್ನು ಪ್ರಾಥಮಿಕ ಸಂಪರ್ಕ ಎಂದು ಪರಿಗಣಿಸಿ, ಎಲ್ಲರನ್ನೂ ಈಗಾಗಲೇ ಪ್ರತ್ಯೇಕವಾಗಿ ಇಡಲಾಗಿದೆ ಎಂದು ತಿಳಿಸಿದ್ದಾರೆ.
5 new cases were detected since 29.03.2020, 5.00pm to 30.03.2020, 8.00am taking total number of confirmed#COVID19cases to 88. All new 5 cases are residents of Nanjanagud
— B Sriramulu (@sriramulubjp)March 30, 2020

VIDEO| ಮಹಾಮಾರಿ ಕರೊನಾ ವಿರುದ್ಧ ಹೋರಾಡಲು ಸ್ಯಾನಿಟೈಸರ್​ ಸುರಂಗ ನಿರ್ಮಾಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 12 =
Remember me
