ದೇಶಾದ್ಯಂತಲಾಕ್​ಡೌನ್ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿದ್ದರೆ, ಪರೀಕ್ಷೆಗಳನ್ನು ಮುಂದೂಡಲಾಗಿದೆ. ಅದರಂತೆ, ಯುಪಿಎಸ್​ಸಿ ಸೇರಿ ಪ್ರಮುಖ ನೇಮಕಾತಿ ಆಯೋಗಗಳೆಲ್ಲ ಪರೀಕ್ಷೆ ದಿನಾಂಕ ಹಾಗೂ ಅಧಿಸೂಚನೆ ಹೊರಡಿಸುವುದನ್ನು ಮುಂದೂಡಿವೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಿವೆ.
ಅಂತೆಯೇ, ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್​ಸಿ) ಮಾರ್ಚ್​ 9ರಿಂದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 1,279 ಕಿರಿಯ ಸಹಾಯಕ ಹಾಗೂ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಏಪ್ರಿಲ್​ 9 ಕೊನೆಯ ದಿನಾಂಕವಾಗಿದೆ. ಶುಲ್ಕಪಾವತಿಗೆ ಏಪ್ರಿಲ್​ 13ರವರೆಗೆ ಅವಕಾಶ ನೀಡಿದೆ.
ಈಗಾಗಲೇ ಕೆಪಿಎಸ್​ಸಿ ಕೆಲ ಪರೀಕ್ಷೆ ಹಾಗೂ ದಾಖಲಾತಿ ಪರಿಶೀಲನೆ ಸಂದರ್ಶನ ಪ್ರಕ್ರಿಯೆಯನ್ನು ಮುಂದೂಡಿದೆ. ಆದರೆ, ಎಸ್​ಡಿಎ ಆಕಾಂಕ್ಷಿಗಳಿಗೆ ಅರ್ಜಿ ಸಲ್ಲಿಸಲು ಇನ್ನಷ್ಟು ಕಾಲಾವಕಾಶ ಕಲ್ಪಿಸಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆಯಾಗದಿದ್ದಲ್ಲಿ ಸಾವಿರಾರು ಆಕಾಂಕ್ಷಿಗಳಿಗೆ ನಿರಾಶೆಯಾಗುವುದಂತೂ ಖಾತ್ರಿ. ಏಕೆಂದರೆ ಏರಡೂ ದಿನಾಂಕಗಳು ಲಾಕ್​ಡೌನ್​ ಅವಧಿಯೊಳಗೆ ಇವೆ.
ಇದರ ಹೊರತಾಗಿಯೂ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಲು ಅವಕಾಶ ಇರುವವರು ಕೊನೆಯ ದಿನಾಂಕಕ್ಕೂ ಮುನ್ನವೇ ಅರ್ಜಿ ಸಲ್ಲಿಸುವುದು ಒಳಿತು.
ಯಾರೆಲ್ಲ ಅರ್ಜಿ ಸಲ್ಲಿಸಬಹುದು?ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆ ಪಾಸಾದವರು ಅರ್ಜಿ ಸಲ್ಲಿಸಬಹುದು. ಕನಿಷ್ಠ 18 ವರ್ಷ ಹಾಗೂ ಗರಿಷ್ಠ ವಯೋಮಿತಿ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ, ಪ್ರವರ್ಗ2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ -38 ವರ್ಷ, ಎಸ್‌ಸಿ, ಎಸ್‌ಟಿ ಹಾಗೂ ಪ್ರವರ್ಗ-1 ರ ಅಭ್ಯರ್ಥಿಗಳಿಗೆ 40 ವರ್ಷ.ವೇತನ ಶ್ರೇಣಿ: 21,400 ರೂ. ದಿಂದ 42,000 ರೂ. ಇರುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆ ಸ್ವರೂಪ:ಪತ್ರಿಕೆ 1-ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಾಗಿದೆ. ಇದು ವಿವರಣಾತ್ಮಕವಾಗಿದ್ದು, 150 ಅಂಕಗಳದ್ದಾಗಿರುತ್ತದೆ. ಪತ್ರಿಕೆ 2-ಸಾಮಾನ್ಯ ಕನ್ನಡ/ಸಾಮಾನ್ಯ ಇಂಗ್ಲಿಷ್ ವಸ್ತುನಿಷ್ಠ ಬಹುಆಯ್ಕೆ ಮಾದರಿಯದ್ದಾಗಿದ್ದು, 100 ಅಂಕಗಳದ್ದಾಗಿರುತ್ತದೆ. ಪತ್ರಿಕೆ 3 ಸಾಮಾನ್ಯ ಜ್ಞಾನ, ವಸ್ತುನಿಷ್ಠ ಬಹು ಆಯ್ಕೆ ಮಾದರಿಯ 100 ಅಂಕಗಳ ಪತ್ರಿಕೆಯಾಗಿದೆ. ಪ್ರತಿ ಪತ್ರಿಕೆಗೂ ಪರೀಕ್ಷಾ ಅವಧಿ ಪ್ರತ್ಯೇಕ 1 ಗಂಟೆ 30 ನಿಮಿಷ.
ಪರೀಕ್ಷಾ ದಿನಾಂಕ:ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ- ಜೂನ್ 6ಸ್ಪರ್ಧಾತ್ಮಕ ಪರೀಕ್ಷೆ:ಜೂನ್ 7ವಿವರಗಳಿಗೆ :http://kpsc.kar.nic.in/ಸಂಪರ್ಕಿಸಬಹುದು.
ಇಎಂಐ ಪಾವತಿ ಗೊಂದಲ ಬೇಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 9 =
Remember me
