ಕೊಳ್ಳೇಗಾಲ:ಅಜ್ಜಿ ಸಾವಿನ ದುಃಖದಲ್ಲಿದ್ದ ವಿದ್ಯಾರ್ಥಿನಿ ಹಾಗೂ ಕರೊನಾ ಭೀತಿಯಲ್ಲಿದ್ದ ಇನ್ನಿಬ್ಬರು ವಿದ್ಯಾರ್ಥಿಗಳನ್ನು ಅಧಿಕಾರಿಗಳು ಮನವೊಲಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಬರೆಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ನಿವಾಸದಲ್ಲಿ ತಿಂಗಳ ಹಿಂದೆ ವಿದ್ಯಾರ್ಥಿನಿ ಪಾರ್ವತಿ ಅವರ ಅಜ್ಜಿ ಗೌರಮ್ಮ ನಿಧನರಾಗಿದ್ದರು. ಈ ದುಃಖದಲ್ಲಿದ್ದಲ್ಲಿ ಪಾವರ್ತಿ ಪರೀಕ್ಷೆ ಬರೆಯಲು ಹಿಂದೇಟು ಹಾಕಿದ್ದಳು.
ಇದನ್ನೂ ಓದಿ:ಕಿರುತೆರೆ ನಟಿ ಮನೆಗೆ ನುಗ್ಗಿ ಯುವಕರ ಗುಂಪಿನಿಂದ ಹಲ್ಲೆ: ಅಶ್ಲೀಲ ಪದಗಳಿಂದ ನಿಂದನೆ
ಇವರ ಚಿಕ್ಕಪ್ಪನ ಪುತ್ರಿಯರಾದ ಪ್ರೀತಿ ಮತ್ತು ಪುಷ್ಪ ಅವರು ಕರೊನಾ ಭೀತಿಯಿಂದ ಮನೆಯಲ್ಲಿ ಉಳಿದುಕೊಂಡು ಇಂದಿನ ಪರೀಕ್ಷೆಗೆ ಹಾಜರಾಗಿರಲಿಲ್ಲ.
ಈ‌ ಮಾಹಿತಿ ತಿಳಿದ ಬಿಇಒ ಚಂದ್ರಪಾಟೀಲ್, ಸಿಂಗಾನಲ್ಲೂರು ಗ್ರಾಮದ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಕ್ಕೆ ಬೆಳಗ್ಗೆ ಭೇಟಿ ನೀಡಿದ ಶಾಸಕ ಆರ್.ನರೇಂದ್ರ ಅವರಿಗೆ ವಿಷಯ ಮುಟ್ಟಿಸಿ, ತುರ್ತಾಗಿ ಆ ಮೂವರು ವಿದ್ಯಾರ್ಥಿನಿಯರನ್ನು ಮನವೊಲಿಸಿ ಪರೀಕ್ಷೆ ಬರೆಸಲು ನಿರ್ದೇಶಿತರಾದರು.
ಇದನ್ನೂ ಓದಿ:ಮೊಬೈಲ್​ನಲ್ಲಿ ಪರಿಚಯವಾದ ವ್ಯಕ್ತಿಯಿಂದ ಸ್ಟಾರ್​ ನಟಿಗೆ ದೋಖಾ: ಸ್ವಲ್ಪದರಲ್ಲೇ ತಪ್ಪಿತು ಅನಾಹುತ!
ತಕ್ಷಣ ಎಚ್ಚೆತ್ತ ಅಧಿಕಾರಿಗಳು ಮಧುವನಹಳ್ಳಿಗೆ ಬೈಕ್ ನಲ್ಲಿ ತೆರಳಿ ವಿದ್ಯಾರ್ಥಿಗಳನ್ನು ಸಿಂಗಾನಲ್ಲೂರು ಗ್ರಾಮದ ಪರೀಕ್ಷಾ ಕೇಂದ್ರಕ್ಕೆ ಕರೆ ತಂದು ಇಂಗ್ಲೀಷ್ ಪರೀಕ್ಷೆ ಬರೆಸುವಲ್ಲಿ ಯಶಸ್ವಿಯಾಗಿದ್ದಾರೆ.(ದಿಗ್ವಿಜಯ ನ್ಯೂಸ್​)
ಕರೊನಾ ರೋಗಲಕ್ಷಣ ಕಾಣಿಸಿಕೊಂಡ ಕೆಲವೇ ಗಂಟೆಗಳಲ್ಲಿ ಸಾಯುತ್ತಿರುವ ಜನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − fifteen =
Remember me
