ಬೆಂಗಳೂರು:ಸೀನಿದ್ರೆ ಮಾತ್ರವಲ್ಲ ಕಣ್ಣೀರಿನಿಂದಲೂ ಮಹಾಮಾರಿ ಕರೊನಾ ವೈರಸ್​ ಸೋಂಕು ಹರಡುತ್ತದೆ ಎಂಬ ಮತ್ತೊಂದು ಆಘಾತಕಾರಿ ವರದಿ ಬಹಿರಂಗವಾಗಿದೆ.
ಕರೊನಾ ರೋಗಿಗಳ ಕಣ್ಣೀರಿನಿಂದಲೂ ವೈರಸ್​ ಹರಡುತ್ತದೆ ಎಂದು ಮಿಂಟೋ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯರು ಸಂಶೋಧನೆಯನ್ನು ನಡೆಸಿದ್ದಾರೆ. ದೇಶದಲ್ಲೇ ಇದು ಮೊದಲ ಅಧ್ಯಯನವಾಗಿದೆ. 45 ಕರೊನಾ ರೋಗಿಗಳನ್ನು ಸಂಶೋಧನೆಗೆ ಒಳಪಡಿಸಿ, ಅವರ ಕಣ್ಣಿನ ದ್ರವವನ್ನು ಸಂಗ್ರಹಿಸಿ ಪರೀಕ್ಷಿಸಿದಾಗ ಓರ್ವನ ಕಣ್ಣಿನ ದ್ರವದಲ್ಲಿ ವೈರಸ್​ಪತ್ತೆಯಾಗಿದೆ. ಆತನಿಗೆ ರೋಗದ ಯಾವುದೇ ಲಕ್ಷಣಗಳು ಇಲ್ಲ. ಆದರೆ, ವೈರಸ್​ ಮಾತ್ರ ಇನ್ನು ಇದೆ ಎಂದು ತಿಳಿದುಬಂದಿದೆ.ಇದನ್ನೂ ಓದಿ:VIDEO| ಶೂ ಧರಿಸಿಕೊಂಡು ಶಿವನ ವಿಗ್ರಹ ಪೀಠದ ಮೇಲೆ ಟಿಕ್​ಟಾಕ್​ ಮಾಡಿದ ನಾಲ್ವರ ಬಂಧನ
ಇಂತಹ ರೋಗಿಗಳು ಕಣ್ಣನ್ನು ಮುಟ್ಟಿ ನಂತರ ವಸ್ತುಗಳನ್ನು ಮುಟ್ಟಿದರೆ ವೈರಸ್​ ಹರಡಲಿದೆ. ಇಡೀ ದೇಹದಲ್ಲಿ ವೈರಸ್​ ಇದ್ದ ಮೇಲೆ ಕಣ್ಣಿನಲ್ಲಿ ಇರುವುದು ಹೊಸ ವಿಚಾರವೇನಲ್ಲ ಎಂದು ಅಲ್ಲಗೆಳೆಯುವಂತಿಲ್ಲ. ಕಣ್ಣಿನ ಉಪಯುಕ್ತತೆ ಅಧಿಕವಾಗಿರುವುದರಿಂದ ಸೋಂಕಿನ ತೊಂದರೆಯು ಅಧಿಕ ಎಂಬುವನ್ನು ಮರೆಯುವಂತಿಲ್ಲ.
ರೋಗಿಯೊಬ್ಬನ ಕಣ್ಣೀರಿನ ಹನಿಗಳು ಹೊರಗಡೆ ಬಿದ್ದರೂ ಸಹ ವೈರಸ್​ ವಿಸ್ತರಿಸುತ್ತದೆ. ಹೀಗಾಗಿ ಹೊರಗಡೆ ಓಡಾಡುವಾಗ ಕಣ್ಣಿಗೆ ಗ್ಲಾಸ್​ ಹಾಕಿಕೊಂಡು ಓಡಾಡುವುದು ಒಳ್ಳೆಯದು ಎಂದು ತಜ್ಞರು ಎಚ್ಚರಿಸಿದ್ದಾರೆ. ಕಣ್ಣಿನ ಬಗ್ಗೆ ಈಗಾಗಲೇ ಅಮೆರಿಕ ಸೇರಿದಂತೆ ಕೆಲವು ದೇಶಗಳಲ್ಲಿ ಅಧ್ಯಯನಗಳು ಬಂದಿವೆ. ಆದರೆ, ಕಣ್ಣಿನಲ್ಲಿ ವೈರಸ್​ ತುಂಬಾ ಕಡಿಮೆ ಪ್ರಮಾಣದಲ್ಲಿ ಇರುತ್ತದೆ ಎಂದು ವೈದ್ಯರೊಬ್ಬರು ಮಾಹಿತಿ ನೀಡಿದ್ದಾರೆ.(ದಿಗ್ವಿಜಯ ನ್ಯೂಸ್​)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 2 =
Remember me
