ಮಂಡ್ಯ:ಕರೊನಾ ಸೋಂಕಿತ ಬಾಲಕಿಯಿಂದಾಗಿ ಜೆಡಿಎಸ್​ ಶಾಸಕ ಹಾಗೂ ಮಾಜಿ ಸಚಿವ ಸಿ.ಎಸ್​. ಪುಟ್ಟರಾಜು ಅವರ ಸ್ವಗ್ರಾಮವನ್ನು ಸಂಪೂರ್ಣ ಸೀಲ್​ ಡೌನ್​ ಮಾಡಲಾಗಿದೆ.
ಇದನ್ನೂ ಓದಿ:ದೋಸೆ ತವಾದಿಂದ ಹೊಡೆದು ಪ್ರಿಯತಮೆಯನ್ನು ಕೊಂದು ಪೊಲೀಸರಿಗೆ ಶರಣಾದ ಪ್ರಿಯಕರ
ರಾಣೆಬೆನ್ನೂರಿನಿಂದ ಬಂದಿದ್ದ 11 ವರ್ಷದ ಬಾಲಕಿಗೆ ಕರೊನಾ ಹಿನ್ನೆಲೆಯಲ್ಲಿ ಪುಟ್ಟರಾಜು ಅವರ ಸ್ವಗ್ರಾಮ ಪಾಂಡವಪುರ ತಾಲೂಕಿನ ಚಿನಕುರುಳಿಗೆ ದಿಗ್ಬಂಧನ ವಿಧಿಸಲಾಗಿದೆ.
ಲಾಕ್​​​ಡೌನ್ ಸಡಿಲಿಕೆ ಬಳಿಕ ಕುಟುಂಬದೊಂದಿಗೆ ಬಾಲಕಿ ಗ್ರಾಮಕ್ಕೆ ಬಂದಿದ್ದಳು. ಗಂಟಲು ದ್ರವದ ಪರೀಕ್ಷೆಯಲ್ಲಿ ಬಾಲಕಿಗೆ ಸೋಂಕು ಇರುವುದು ದೃಢವಾಗಿತ್ತು. ಇದೀಗ ಚಿನಕುರಳಿಯಲ್ಲಿ ಆತಂಕ ಮನೆ ಮಾಡಿದ್ದು, ಅಧಿಕಾರಿಗಳು ಚಿನಕುರುಳಿ ರಸ್ತೆಗಳನ್ನು ಬಂದ್ ಮಾಡಿಸಿದ್ದಾರೆ.
ಇದನ್ನೂ ಓದಿ:ಮದುವೆ ಆಗುವುದಾಗಿ ನಂಬಿಸಿ ಧೋಖಾ: ಇಬ್ಬರು ಮಹಿಳೆಯರಿಗೆ 63 ಲಕ್ಷ ರೂ. ವಂಚನೆ
ಮರದ ಕಂಬಗಳನ್ನು ರಸ್ತೆಯಲ್ಲಿ ಕಟ್ಟಿ ಸಂಪೂರ್ಣ ಬ್ಲಾಕ್ ಮಾಡಿ, ಗ್ರಾಮದಿಂದ ಹೊರಗೆ ಹಾಗೂ ಒಳಗಿನ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ನೆಮ್ಮದಿಯಾಗಿದ್ದ ಗ್ರಾಮದಲ್ಲಿ ಬಾಲಕಿಗೆ ಸೊಂಕು ದೃಢಪಡುತ್ತಿದ್ದಂತೆ ಕರೊನಾ ಆತಂಕ ಶುರುವಾಗಿದೆ.(ದಿಗ್ವಿಜಯ ನ್ಯೂಸ್​)
ಅಂಫಾನ್ ಚಂಡಮಾರುತಕ್ಕೆ 84 ಬಲಿ: ಇಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 12 =
Remember me
