ಬೆಂಗಳೂರು:ಲಾಕ್​ಡೌನ್ ಅವಧಿಯಲ್ಲಿ ಯಾರನ್ನೂ ಕೆಲಸದಿಂದ ತೆಗೆಯಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ. ದಿಗ್ವಿಜಯ ನ್ಯೂಸ್ 247 ಹಾಗೂ ವಿಜಯವಾಣಿ ಆಯೋಜಿಸಿದ್ದ ಫೋನ್-ಇನ್ ಕಾರ್ಯಕ್ರಮದಲ್ಲಿ ಮಾತನಾಡಿ, ಖಾಸಗಿ ಮತ್ತು ಗಾರ್ವೆಂಟ್ಸ್ ಉದ್ಯಮ ಸೇರಿ ಯಾವುದೇ ಕಾರ್ವಿುಕರು ಸಂಕಷ್ಟಕ್ಕೆ ಸಿಲುಕುವುದಕ್ಕೆ ಬಿಡುವುದಿಲ್ಲ. ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದರು. ಕರೊನಾ ಹರಡುವಿಕೆ ತಡೆಯುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಬಹಳ ಮುಖ್ಯವಾಗಿದೆ. ಏ.20 ತನಕ ಕೇಂದ್ರದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ನೀಡಿರುವ ಸೂಚನೆ, ಆದೇಶಗಳನ್ನು ಜನರು ಕಟ್ಟುನಿಟ್ಟಾಗಿ ಪರಿಪಾಲನೆ ಮಾಡಿದರೆ, ಮುಂದಿನ ದಿನಗಳು ಆಶಾದಾಯಕವಾಗಿ ಇರಲಿವೆ ಎಂದು ಹೇಳಿದರು.
1.32 ಕೋಟಿ ಪಡಿತರ ಕಾರ್ಡ್:ರಾಜ್ಯದಲ್ಲಿ 6.30 ಕೋಟಿ ಜನರಿದ್ದು, 1.32 ಕೋಟಿ ಪಡಿತರ ಕಾರ್ಡ್​ಗಳನ್ನು ನೀಡಿದ್ದೇವೆ. ಒಂದು ಕುಟುಂಬ ಅಂದರೆ 5 ಜನ ಲೆಕ್ಕ. ಅದರಂತೆ ಲೆಕ್ಕ ಹಾಕಿದರೆ ಬಹುತೇಕ ಎಲ್ಲರಿಗೂ ಪಡಿತರ ಸಿಕ್ಕುವ ವ್ಯವಸ್ಥೆ ಇದೆ. ಹೊಸದಾಗಿ ಅರ್ಜಿ ಹಾಕಿದ್ದ 2 ಲಕ್ಷ ಜನರಿಗೂ ಪಡಿತರ ನೀಡಲು ಸೂಚಿಸಲಾಗಿದೆ. ಆದ್ದರಿಂದ ಯಾರೂ ಈ ಬಗ್ಗೆ ಆತಂಕಪಟ್ಟುಕೊಳ್ಳುವ ಅತಗ್ಯವಿಲ್ಲ ಎಂದು ಕಾರಜೋಳ ಹೇಳಿದರು.
ರೈತರಿಗೆ ಬೀಜ ಮತ್ತು ಗೊಬ್ಬರ:ಲಾಕ್​ಡೌನ್ ಸಂದರ್ಭದಲ್ಲಿಯೂ ರೈತರಿಗೆ ತೊಂದರೆ ಆಗದಂತೆ ಸರ್ಕಾರ ಹಲವು ಕ್ರಮ ಕೈಗೊಂಡಿದೆ. ಕೃಷಿ ಚಟುವಟಿಕೆ ಚಾಲನೆಯಲ್ಲಿ ಇರುವಂತೆ ನೋಡಿಕೊಳ್ಳಲು ಅವರಿಗೆ ಬೇಕಾಗಿರುವ ಬೀಜ ಮತ್ತು ರಸಗೊಬ್ಬರ ಪೂರೈಕೆ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಸದ್ಯಕ್ಕಿಲ್ಲ ಕಾಮಗಾರಿ:ಲೋಕೋಪಯೋಗಿ ಇಲಾಖೆ ಸೇರಿ ಹಲವು ಇಲಾಖೆಗಳಿಂದ ನಡೆಯುತ್ತಿದ್ದ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಲಾಕ್​ಡೌನ್ ಮುಗಿದ ಬಳಿಕ ಸಂಪುಟ ಸಭೆ ನಡೆಸಿ, ಮುಂದಿನ ತೀರ್ಮಾನ ತೆಗೆದುಕೊಂಡ ಬಳಿಕ ಕಾಮಗಾರಿ ನಡೆಯಲಿವೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.
ಮಂಗನ ಕಾಯಿಲೆ:ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆಗೆ ಜನರು ಬಲಿಯಾಗುತ್ತಿರುವ ಬಗ್ಗೆ ಸರ್ಕಾರ ಗಮನ ನೀಡಿದ್ದು, ಸೂಕ್ತ ಕ್ರಮ ಜರುಗಿಸಲಾಗಿದೆ. ಅಗತ್ಯವಿರುವ ಔಷಧ ಸೇರಿ ಎಲ್ಲ ಸೌಲಭ್ಯಗಳನ್ನು ನೀಡಲಾಗಿದೆ. ಈ ಬಗ್ಗೆ ಸಚಿವರಾದ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆಯಲ್ಲಿ ಸಭೆಯೂ ನಡೆದಿದೆ ಎಂದರು. ನಂಜನಗೂಡಿನ ಜುಬಿಲೆಂಟ್ ಕಾರ್ಖಾನೆ ಪ್ರಕರಣದಿಂದ ಮೈಸೂರು ಜಿಲ್ಲೆಯಲ್ಲಿ ಪಾಸಿಟಿವ್ ಕೇಸು ಹೆಚ್ಚಾಗಿದ್ದು, ಆ ಕಾರ್ಖಾನೆ ಮುಚ್ಚಿಸಬೇಕೆ? ಬೇಡವೇ? ಎನ್ನುವ ಚರ್ಚೆ ನಡೆದಿಲ್ಲ. ಈ ಬಗ್ಗೆ ಜಿಲ್ಲಾಡಳಿತ ನೀಡುವ ವರದಿ ಪಡೆದು ಸಂಪುಟದಲ್ಲಿ ಚರ್ಚೆ ಮಾಡಿ ನಿರ್ಣಯಿಸಲಾಗುವುದು ಎಂದರು. ನೇಕಾರರು ಆತಂಕಪಟ್ಟುಕೊಳ್ಳುವ ಅಗತ್ಯವೇನಿಲ್ಲ. ಅವರು ನೇಯ್ದಿದ್ದದನ್ನು ಸರ್ಕಾರ ಈ ಹಿಂದೆಯೂ ಖರೀದಿ ಮಾಡಿದೆ. ಈಗಲೂ ಮಾಡಿದೆ. ಮುಂದೆಯೂ ಮಾಡಲಿದೆ ಎಂದು ಕಾರಜೋಳ ಭರವಸೆ ನೀಡಿದರು.
ದೂರು ಕೊಡಿ
ಲಾಕ್​ಡೌನ್ ಸಂದರ್ಭ ಮನೆ ಬಾಡಿಗೆಗೆ ಬಲವಂತ ಮಾಡುವಂತಿಲ್ಲ ಎಂದು ಸರ್ಕಾರ ತಿಳಿಸಿದೆ. ಬಲವಂತ ಮಾಡಿದರೆ ದೂರು ನೀಡಬಹುದು. ಸರ್ಕಾರ ನೀಡಿರುವ ಸೂಚನೆಗಳನ್ನು ಪರಿಪಾಲಿಸದೆ ಹೋದರೆ ಅವರ ಮೇಲೆ ಕ್ರಮ ಜರುಗಿಸಲಾಗುವುದು ಎಂದ ಡಿಸಿಎಂ , ಕಾರ್ವಿುಕರಿಗೆ ಮತ್ತು ವಲಸಿಗರಿಗೆ ಹಾಸ್ಟೆಲ್​ಗಳಲ್ಲಿಯೂ ನೆಲೆ ಕಲ್ಪಿಸಿಕೊಡಲಾಗಿದೆ. ಲಾಕ್​ಡೌನ್ ಮುಗಿಯುವ ತನಕ ಒಂದೇ ಕಡೆ ನೆಲೆಯಾಗಿದ್ದರೆ, ಎಲ್ಲವೂ ಕಂಟ್ರೋಲ್​ಗೆ ಬರಲಿದೆ. ವಸತಿ, ಆಹಾರ ಸೇರಿ ಯಾವುದಕ್ಕೂ ತೊಂದರೆ ಆಗದಂತೆ ನೋಡಿಕೊಳ್ಳುವ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ ಎಂದರು.
ವಿಜಯವಾಣಿ ಡಿಜಿಟಲ್​ ಮಾಧ್ಯಮ ಹೆಸರು, ಲೋಗೋ ದುರ್ಬಳಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
