ಬೆಂಗಳೂರು:ಸರ್ಕಾರದ ಸಮರೋಪಾದಿ ಕ್ರಮ, ವೈದ್ಯರ ಶ್ರಮದ ಹೊರತಾಗಿಯೂ ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 11ಕ್ಕೆ ಏರಿದೆ. ಇನ್ನೊಂದೆಡೆ, ಕರೊನಾ ದುಷ್ಪರಿಣಾಮ ನಾನಾ ವಲಯಗಳ ಮೇಲೆ ಆಗಿರುವುದರಿಂದಾಗಿ ಕಾರ್ವಿುಕರಿಗೆ ಕೆಲಸವಿಲ್ಲದ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಹೀಗಾಗಿ, ಹೊರ ರಾಜ್ಯಗಳು ಹಾಗೂ ಹಲವು ಜಿಲ್ಲೆಗಳಿಂದ ವಿವಿಧ ಕಾರಣಗಳಿಗಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದ ಶೇ.30ಕ್ಕೂ ಹೆಚ್ಚು ಜನತೆ ಸ್ವಗ್ರಾಮಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.
ರಾಜ್ಯ ರಾಜಧಾನಿಯಲ್ಲಿ 35 ಲಕ್ಷಕ್ಕೂ ಅಧಿಕ ವಲಸಿಗರು ತಾತ್ಕಾಲಿಕ ನೆಲೆಯೂರಿದ್ದಾರೆ. ಕರೊನಾ ಕಾರಣದಿಂದಾಗಿ ಹಲವರು ಈಗಾಗಲೇ ನಗರ ತೊರೆದಿದ್ದಾರೆ; ಇನ್ನೂ ಕೆಲವರು ತೆರಳಲು ಅಣಿಯಾಗಿದ್ದಾರೆ. ಹೊಟ್ಟೆ ತುಂಬಿಸಿ ಕೊಳ್ಳಲು ಕೆಲಸ ವಿಲ್ಲ, ಕೂಲಿ ಸಿಗುತ್ತಿಲ್ಲ. ದುಡಿಮೆಯಿಲ್ಲದೆ ಆರ್ಥಿಕ ಸಂಕಷ್ಟ ಅನುಭವಿಸಲಾರದೆ ಗೂಡಿಗೆ ಮರಳುತ್ತಿದ್ದಾರೆ. ಕಳೆದ ಒಂದು ವಾರದಿಂದ ನಗರದಿಂದ ಹೊರ ಹೋಗುವ ಬಸ್​ಗಳು, ರೈಲುಗಳು ತುಂಬಿ ತುಳುಕುತ್ತಿದ್ದರೆ ನಗರಕ್ಕೆ ಬರುವ ವಾಹನಗಳು ಖಾಲಿ ಹೊಡೆಯುತ್ತಿವೆ.
ಶೇ.50 ವಲಸಿಗರು: ರಾಜ್ಯ ರಾಜಧಾನಿ ವಲಸಿಗರ ಆಶ್ರಯತಾಣವಾಗಿದೆ. 2011ರ ಜನಗಣತಿ ಪ್ರಕಾರ ನಗರದ ಜನಸಂಖ್ಯೆ 92 ಲಕ್ಷವಿದ್ದರೆ ಅದರಲ್ಲಿ ಶೇ.45 ವಲಸಿಗರೇ ಇದ್ದಾರೆಂಬ ಮಾಹಿತಿ ಬಹಿರಂಗವಾಗಿತ್ತು. 2020ಕ್ಕೆ ಜನಸಂಖ್ಯೆ 1.30 ಕೋಟಿ ಮೀರಲಿದ್ದು, ವಲಸಿಗರ ಪ್ರಮಾಣ ಶೇ.50 ದಾಟಲಿದೆ ಎಂದು ತಜ್ಞರು ಅಂದಾಜಿಸಿದ್ದರು. ಅದರಂತೆ ಈಗ ನಗರದ ಸುಮಾರು 1.20 ಕೋಟಿ ಜನಸಂಖ್ಯೆಯಲ್ಲಿ 50 ಲಕ್ಷಕ್ಕೂ ಅಧಿಕ ವಲಸಿಗರಿದ್ದಾರೆ. ಇದರಲ್ಲಿ 15 ಲಕ್ಷ ಜನರು ಶಾಶ್ವತವಾಗಿ ನೆಲೆಸಿದ್ದರೆ, ಉಳಿದ 35 ಲಕ್ಷಕ್ಕೂ ಅಧಿಕ ಜನರು ತಾತ್ಕಾಲಿಕವಾಗಿ ನೆಲೆಸಿದ್ದಾರೆ.
ಬೇರೆ ದಾರಿ ಗೊತ್ತಿಲ್ಲ:ನಗರದಲ್ಲಿ ಕಾರ್ಖಾನೆ, ಕಂಪನಿಗಳು, ವ್ಯಾಪಾರ, ಕೂಲಿ, ಶಿಕ್ಷಣ, ವ್ಯವಹಾರ ಇತರ ಕಾರಣಗಳಿಂದ ಬಂದು ತಾತ್ಕಾಲಿಕವಾಗಿ ನೆಲೆಸಿದವರ ಸಂಖ್ಯೆಅಧಿಕ.
ಬೆಂಗಳೂರಿನಲ್ಲಿ ಬಹುತೇಕ ಹೊರಗಿನಿಂದ ಬಂದವರ ವ್ಯವಹಾರವೇ ಹೆಚ್ಚಾಗಿ ರುತ್ತದೆ. ಹಾಗಾಗಿ ಬಸ್, ಮೆಟ್ರೋ, ರೈಲು, ಆಟೋ, ಕ್ಯಾಬ್​ಗಳು ತುಂಬಿ ತುಳುಕುತ್ತಿದ್ದವು. ನಿತ್ಯ ಸಂಚಾರ ಮಾಡುವ ವಲಸಿಗರು ಊರಿನತ್ತ ಹೊರಟಿರುವುದರಿಂದಾಗಿ ಜನಸಂದಣಿ ಕಡಿಮೆಯಾಗಿದೆ. ಕರೊನಾ ಆತಂಕ ಹೆಚ್ಚುತ್ತಲೇ ಇರುವುದರಿಂದ ಹೆಚ್ಚಿನ ಸಂಖ್ಯೆಯ ವಲಸಿಗರು ಸ್ವಗ್ರಾಮಗಳಿಗೆ ತೆರಳುತ್ತಿದ್ದಾರೆ. ಮೂಲ ನಿವಾಸಿಗಳೇ ಸೋಂಕಿನ ಭೀತಿಗೆ ನೆಂಟರ ಮನೆಗಳತ್ತ ಹೊರಟಿದ್ದಾರೆ.
ನಗರದಲ್ಲಿ ಒಟ್ಟು 10 ಸಾವಿರಕ್ಕೂ ಹೆಚ್ಚು ಪೇಯಿಂಗ್ ಗೆಸ್ಟ್(ಪಿಜಿ)ಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಒಂದು ಪಿಜಿಯಲ್ಲಿ ಕನಿಷ್ಠ 50 ಜನರಿದ್ದರೂ ಅವರ ಸಂಖ್ಯೆ 5 ಲಕ್ಷ ಮೀರುತ್ತದೆ. ವಿವಿಧ ಕಂಪನಿ ಉದ್ಯೋಗಿಗಳು, ಕಾರ್ಖಾನೆ ಕಾರ್ವಿುಕರು, ಶಾಪಿಂಗ್ ಮಾಲ್​ಗಳ ಕೆಲಸಗಾರರು, ಚಿತ್ರಮಂದಿರಗಳ ಕಾರ್ವಿುಕರು, ಕೂಲಿ ಕಾರ್ವಿುಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ವ್ಯಾಪಾರಿಗಳು ಊರಿನತ್ತ ಮುಖ ಮಾಡಿದ್ದಾರೆ.
ಒಂದು ವಾರದ ಹಿಂದೆ ಕರೊನಾ ಸೋಂಕು ಹರಡುತ್ತಿದ್ದಂತೆ, ರಾಜಧಾನಿ ಭಾಗಶಃ ಸ್ತಬ್ಧವಾಗುತ್ತಿದೆ. ಇದರಿಂದ ಶಾಲೆ, ಕಾಲೇಜು, ಚಿತ್ರಮಂದಿರ, ಮಾಲ್​ಗಳು ಮುಚ್ಚಿದ್ದರೆ, ಕಾರ್ಖಾನೆಗಳು, ಬೀದಿ ಬದಿ ವ್ಯಾಪಾರಕ್ಕೆ ತೊಂದರೆಯಾಗಿದೆ. ಆಟೋ ಹಾಗೂ ಕಾರುಗಳ ಚಾಲಕರು, ಲಾರಿ ಚಾಲಕರಿಗೆ ಕೆಲಸವಿಲ್ಲದಂತಾಗಿದೆ. ದುಡಿಮೆಯಿಲ್ಲದೆ ಬೆಂಗಳೂರಲ್ಲಿ ಜೀವನ ನಡೆಸುವುದು ಅಸಾಧ್ಯವಾದ್ದರಿಂದ ಸ್ವಂತ ಊರಿನತ್ತ ಹೋಗುತ್ತಿದ್ದಾರೆ.
ಕರೊನಾ ವೈರಸ್ ಸೋಂಕು ತಗುಲಿದವರು ಚೇತರಿಸಿಕೊಳ್ಳುತ್ತಾರೆ. ಆದರೆ ಸೋಂಕಿಗೆ ಯಾವುದೇ ಚಿಕಿತ್ಸೆ ಅಥವಾ ಲಸಿಕೆಯಿಲ್ಲ. ಹಾಗಾಗಿ ಪಿಜಿ ನಿವಾಸಿಗಳು ಹಾಗೂ ಹಾಸ್ಟೆಲ್​ನಲ್ಲಿರುವ ವಿದ್ಯಾರ್ಥಿಗಳು ಆರೋಗ್ಯ ದೃಷ್ಟಿಯಿಂದ ಊರಿಗೆ ಹೋಗುವುದು ಉತ್ತಮ.
| ಬಿ.ಎಚ್. ಅನಿಲ್​ಕುಮಾರ್ಪಾಲಿಕೆ ಆಯುಕ್ತ
VEDIO | ಮುಂಗುಸಿ ಹಾಗೂ ನಾಗರಹಾವು ಸೆಣೆಸಾಡುವ ಈ ವಿಡಿಯೋ ನೋಡಿದರೆ ಜೀವ ಝಲ್​ ಅನ್ನುತ್ತದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
