ಬಾಗಲಕೋಟೆ:ಕರೊನಾ ಭೀತಿ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಬೆಂಗಳೂರಿನಿಂದ ಬೀದರ್​ಗೆ ಹೊರಟಿದ್ದಾಗ ಮಾರ್ಗಮಧ್ಯೆ ಸಂಭವಿಸಿದ ಕಾರು ಅಪಘಾತದಲ್ಲಿ ಮೂವರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಇಂದು ನಡೆದಿದೆ.
ಸುವರ್ಣ(40), ಬಸವಣ್ಣೆಪ್ಪ(70) ಹಾಗೂ ಸವಿತಾ(20) ಮೃತ ದುರ್ದೈವಿಗಳು. ಟ್ರಾಫಿಕ್​ ಕಾರಣ ಇಳಕಲ್ ಮಾರ್ಗವಾಗಿ ಬೀದರ್​ಗೆ ಹೊರಟಿದ್ದರು. ಹಿರೇಕೊಡಗಲಿ ಗ್ರಾಮದ ಬಳಿಯಿರುವ ರಸ್ತೆ ತಿರುವು ಗೊತ್ತಾಗದೆ ಕಲ್ಲು ಬಂಡೆಗೆ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಇಳಕಲ್ ಆಸ್ಪತ್ರೆಗೆ ಸಾಗಿಸುವ ವೇಳೆ ಇಬ್ಬರು ಸಾವಿಗಿಡಾಗಿದ್ದು, ಮತ್ತೆ ಇಳಕಲ್​​ನಿಂದ ಬಾಗಲಕೋಟೆ ಆಸ್ಪತ್ರೆಗೆ ಹೋಗುವ ವೇಳೆ ಇನ್ನೊಬ್ಬರು ಮೃತರಾಗಿದ್ದಾರೆ. ಒಟ್ಟು ಕಾರಿನಲ್ಲಿ ಆರು ಮಂದಿಯಿದ್ದರು. ಉಳಿದ ಮೂವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಲಾಗಿದೆ. ಎಲ್ಲರೂ ಬೀದರ ಜಿಲ್ಲೆಯ ಬಾಲ್ಕಿ ತಾಲೂಕಿನ ಕಟಕಚಿಂಚೂಳಿ ಗ್ರಾಮದವರು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಇಳಕಲ್ ಗ್ರಾಮೀಣ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.(ಏಜೆನ್ಸೀಸ್​)
ಕರೊನಾ ಕಂಟಕದ ಕಾರಣ ರಾಜ್ಯದ ಜನತೆಗೆ ವಿಶೇಷ ಪ್ಯಾಕೇಜ್​ ಘೋಷಿಸಿದ ಸಿಎಂ ಬಿಎಸ್​ವೈ

ಇದು ಕೊನೆಯ ಎಚ್ಚರಿಕೆ ಮನೆಬಿಟ್ಟು ಹೊರಗಡೆ ಓಡಾಡಿದರೆ ಕ್ರಮ ಕೈಗೊಳ್ಳುವುದು ಗ್ಯಾರಂಟಿ: ಸಿಎಂ ಬಿಎಸ್​ವೈ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
