ಕಲಬುರಗಿ:ಜಿಲ್ಲೆಯಲ್ಲಿ ಕರೊನಾದಿಂದ ಇಬ್ಬರು ಮೃತಪಟ್ಟಿದ್ದರೂ ಅಲ್ಲಿನ ಜನ ಮಾತ್ರ ಎಚ್ಚೆತ್ತುಕೊಂಡಿಲ್ಲ ಎನಿಸುತ್ತದೆ.ಸದ್ಯ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬೇಸಿಗೆ ರಜಾದ ಅಕ್ಕಿ ವಿತರಣೆ ಮಾಡಲಾಗುತ್ತಿದ್ದು, ಪಾಲಕರು ಮಕ್ಕಳನ್ನೂ ಕರೆದುಕೊಂಡು ಗುಂಪಾಗಿ ಅಕ್ಕಿ ಪಡೆಯಲು ಮುನ್ನುಗ್ಗುತ್ತಿದ್ದಾರೆ.
ಕರೊನಾ ವೈರಸ್​ ಹರಡುತ್ತಿರುವ ಹಿನ್ನೆಲೆಯಲ್ಲಿ ಲಾಕ್​ಡೌನ್​ ಇದೆ. ಯಾರೂ ಗುಂಪಾಗಬೇಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸರ್ಕಾರ ಅದೆಷ್ಟೋ ಸಲ ಹೇಳಿದರೂ ಜನರು ಮಾತ್ರ ಕಿವಿಗೊಡುತ್ತಿಲ್ಲ.
ಬೇಸಿಗೆ ರಜೆ ಪ್ರಯುಕ್ತ ಮಕ್ಕಳಿಗೆ ಉಚಿತ ಅಕ್ಕಿ ವಿತರಣೆ ಮಾಡುತ್ತಿರುವ ಅಫ್ಜಲಪುರ ತಾಲೂಕಿನ ಕರ್ಜಗಿ ಗ್ರಾಮದ ಸರ್ಕಾರಿ ಶಾಲೆ, ಎಲ್ಲ ಮಕ್ಕಳನ್ನೂ ಒಟ್ಟಿಗೆ ಕರೆಸಿದೆ. ಅವರ ಜತೆಗೆ ಪಾಲಕರೂ ಆಗಮಿಸಿದ್ದಾರೆ. ಒಂದೆಡೆ ಮಕ್ಕಳ ಗುಂಪು, ಮತ್ತೊಂದೆಡೆ ಪಾಲಕರ ಗುಂಪು. ಒಟ್ಟಾರೆ ಶಾಲೆಯ ಎದುರು ಸಾವಿರಾರು ಜನರ ಸೇರಿದ್ದಾರೆ. ಅಕ್ಕಿಗಾಗಿ ನೂಕಾಟ, ತಳ್ಳಾಟವೂ ನಡೆಯುತ್ತಿದೆ.
ಇವರೆಲ್ಲ ಮಾಸ್ಕ್​ ಧರಿಸಿಲ್ಲ. ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವುದು ಆತಂಕಕ್ಕೆ ಕಾರಣವಾಗಿದೆ. ಜೀವಕ್ಕಿಂತ ಅಕ್ಕಿಯೇ ಜಾಸ್ತಿಯಾಯ್ತಾ ಎಂಬ ಪ್ರಶ್ನೆ ಉದ್ಭವ ಆಗಿದೆ. (ದಿಗ್ವಿಜಯ ನ್ಯೂಸ್​)
ಪುಣಜನೂರು: ತರಕಾರಿ ಹೆಸರಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಸಿಗರೇಟ್ ಸಾಗಾಣಿಕೆ, ಆರೋಪಿಗಳು ವಶಕ್ಕೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 13 =
Remember me
