ಗದಗ:ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನಿಗೆ ಹೃದಯಾಘಾತ ಆಗಿರಬಹುದೆಂದು ಆತನ ಬಾಯಿಗೆ ಬಾಯಿ ಇಟ್ಟು ಉಸಿರು ನೀಡಿದ್ದಲ್ಲದೇ, ಆತನ ಕಿರುನಾಲಿಗೆಯನ್ನು ತಿಕ್ಕಿದ ಜನರಿಗೆ ಇದೀಗ ಭಾರೀ ಆತಂಕ ಎದುರಾಗಿದೆ.
ಇದನ್ನೂ ಓದಿ:ಸೆಕ್ಸ್​ ರಾಕೆಟ್​ನಲ್ಲಿ ಸಿಕ್ಕಿಬಿದ್ದ ಕಾಶ್ಮೀರ ಯುವತಿಯರು: ಈ ಸುದ್ದಿ ನಂಬುವ ಮುನ್ನ ಒಮ್ಮೆ ಓದಿ ಬಿಡಿ!
ಗದಗ ತಾಲೂಕಿನ ಸೀತಾಲಹರಿ ಗ್ರಾಮದಲ್ಲಿ ಆತಂಕಕಾರಿ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಹಾಗೂ ಸರ್ಕಾರಿ ಸಾರಿಗೆ ಸಂಸ್ಥೆಯ ಬಸ್​ ಚಾಲಕರೊಬ್ಬರು ತೀವ್ರ ಜ್ವರದಿಂದ ಬಳಲಿ ಜುಲೈ 9ರಂದು ಚಾಲಕ ಸಾವಿಗೀಡಾಗಿದ್ದಾರೆ. ಸಾವಿಗೂ ಮುನ್ನ ಚಾಲಕನಿಗೆ ಉಸಿರಾಟದ ತೊಂದರೆ ಎದುರಾಗಿತ್ತು. ಆತನಿಗೆ ಹೃದಯಾಘಾತ ಆಗಿರಬಹುದೆಂದು ತಿಳಿದ ಜನರು ಬಾಯಿಗೆ ಬಾಯಿ ಹಾಕಿ ಉಸಿರು ನೀಡಿದ್ದಾರೆ. ಅಲ್ಲದೆ, ಕಿರು ನಾಲಿಗೆಯನ್ನು ಬರಿಗೈನಿಂದ ತಿಕ್ಕಿ ಸಾವಿಗು ಮುನ್ನ ಆತನನ್ನು ಉಳಿಸಲು ಹರಸಾಹಸಪಟ್ಟಿದ್ದಾರೆ.
ಇನ್ನು ಜ್ವರದಿಂದ ಬಳಲುತ್ತಿದ್ದ ಚಾಲಕ ಗದಗದ ಜಿಮ್ಸ್ ಆಸ್ಪತ್ರೆಗೆ ಹೋಗಿ ಕೊವಿಡ್ ಟೆಸ್ಟ್ ಮಾಡಿಸಿ ಮರಳಿ ಊರಿಗೆ ಬಂದಿದ್ದರು. ಆದರೆ, ವರದಿ ಬರುವ ಮುನ್ನವೇ ಸಾವಿಗೀಡಾಗಿದ್ದಾರೆ. ಇದೀಗ ಬಂದಿರುವ ವರದಿಯಲ್ಲಿ ಪಾಸಿಟಿವ್ ಇರುವುದು ಪ್ರಾಥಮಿಕ ಸಂಪರ್ಕದಲ್ಲಿದ್ದವರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಸುಮಾರು 60 ಜನರನ್ನು ಮೊರಾರ್ಜಿ ವಸತಿಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಇದನ್ನೂ ಓದಿ:ಹಳ್ಳಿಗೆ ಹೋಗಲು ಧಾವಂತ ಅವಮಾನದ ಆತಂಕ: ತಮ್ಮವರನ್ನೇ ಭೀತಿಯಿಂದ ನೋಡುವಂತಾಗಿಸಿದ ಕರೊನಾ
ಅಂದಹಾಗೆ ಬಸ್​ ಚಾಲಕ ಲಾಕ್​ಡೌನ್ ಸಮಯದಲ್ಲಿ ಊರಿಗೆ ಬಂದಿದ್ದ. ಆತನ ಜತೆಗೆ ಕೆಲವರು ಸಮಯ ಕಳೆಯಲು ಇಸ್ಪೀಟು ಆಡುತ್ತಿದ್ದರು. ಸುಮಾರು ಒಂದು ಸಾವಿರ ಜನಸಂಖ್ಯೆ ಇರುವ ಸೀತಾಲಹರಿ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.(ಏಜೆನ್ಸೀಸ್​)
ಕರೊನಾ ಸ್ಪೋಟದ ಬಗ್ಗೆ ಚೀನಾ ಸರ್ಕಾರದ ರಹಸ್ಯ ಬಯಲು ಮಾಡಿದ ಪ್ರಖ್ಯಾತ ವೈರಾಲಜಿಸ್ಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − sixteen =
Remember me
