ಬೆಂಗಳೂರು:ಇಡೀ ನಗರದ ಬಹುತೇಕ ಜನ ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿ ಕುಳಿತಿದ್ದರೆ, ಅಲ್ಲಿಇಲ್ಲಿ ಓಡಾಡುವ ಒಂದಷ್ಟು ಜನರನ್ನೇ ದೋಚುವ ಉದ್ದೇಶದಿಂದ ಸಂಚು ರೂಪಿಸಿದ್ದ ತಂಡ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ.
ಶ್ಯಾಂಪುರ ಗೇಟ್ ಸಮೀಪದಲ್ಲಿ ದರೋಡೆಗೆ ಸಂಚು ರೂಪಿಸಿದ್ದ 6 ಮಂದಿ ಆರೋಪಿಗಳನ್ನು ಡಿ.ಜೆ. ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರ್.ಟಿ. ನಗರದ ಸೈಯದ್ ಸುಬಾನ್ (25), ಸೈಯದ್ ಸಮ್ರೋಜ್ (25), ಶಿವಾಜಿನಗರದ ಅಜರ್ ಪಾಷಾ (27), ನದೀಮ್ ಅಹ್ಮದ್ (25) ಡಿ.ಜೆ. ಹಳ್ಳಿಯ ರ್ಇಾನ್ (22) ಮತ್ತು ಗೋವಾ ಗಾರ್ಡನ್ ನಿವಾಸಿ ಜಲ್ ಖಾನ್ (25) ಬಂಧಿತರು. ಆರೋಪಿಗಳಿಂದ ಮಾರಕಾಸ್ತ್ರ, ಖಾರದ ಪುಡಿ ಹಾಗೂ ದೊಣ್ಣೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏ.16ರಂದು ಮುಖ್ಯಪೇದೆಗಳಾದ ಮಂಜುನಾಥ್, ಯೋಗಾನಂದ, ರವಿಕುಮಾರ್, ಪೇದೆಗಳಾದ ಉಮ್ರಾನ್ ಮತ್ತು ಬಸವರಾಜ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾತ್ರಿ ಪಾಳಿಯ ಬಂದೋಬಸ್ತ್‌ಗೆ ನಿಯೋಜನೆಗೊಂಡಿದ್ದರು. ಶ್ಯಾಂಪುರ ಗೇಟ್ ಸಮೀಪದ ರಸ್ತೆಯಲ್ಲಿ ರಾತ್ರಿ 9 ಗಂಟೆಯಲ್ಲಿ 5-6 ಮಂದಿ ಅನುಮಾನಾಸ್ಪದವಾಗಿ ನಿಂತಿರುವುದು ಗಮನಕ್ಕೆ ಬಂದಿದೆ.
ಎಎಸ್‌ಐ ರವೀಂದ್ರ ನೇತೃತ್ವದಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಕೈಯಲ್ಲಿ ಮಾರಕಾಸಗಳನ್ನು ಹಿಡಿದು ನಿಂತಿರುವುದು ಖಚಿತವಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಸಿಬ್ಬಂದಿ, ಆರೋಪಿಗಳನ್ನು ಹಿಡಿದಿದ್ದಾರೆ. ಈ ವೇಳೆ ಚಾಕು, ಖಾರದ ಪುಡಿಯಿದ್ದ ಪ್ಯಾಕೆಟ್ ಹಾಗೂ ದೊಣ್ಣೆಗಳು ಪತ್ತೆಯಾಗಿವೆ.
ಠಾಣೆಗೆ ತಂದು ವಿಚಾರಣೆಗೆ ಒಳಪಡಿಸಿದಾಗ, ಒಂಟಿ ಸವಾರರನ್ನು ಅಡ್ಡಗಟ್ಟಿ ಮಾರಕಾಸಗಳಿಂದ ಬೆದರಿಸಿ ಹಣ, ಚಿನ್ನಾಭರಣ ಸುಲಿಗೆ ಮಾಡಲು ಸಂಚು ರೂಪಿಸಿರುವುದಾಗಿ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಊರಿಗೆ ಬಿಡುತ್ತೇನೆ ಎಂದು ವೃದ್ಧೆಯನ್ನು ತಿರುಪತಿಯಿಂದ ಲಾರಿಯಲ್ಲಿ ಕರೆತಂದ ಚಾಲಕ ಮಾಡಿದ್ದೇನು…?

ರಸ್ತೆಯಲ್ಲಿದ್ದ ಹಣ ತಗೊಂಡವರಿಗೂ ಕ್ವಾರಂಟೈನ್! ಮಾರ್ಗ ಮಧ್ಯೆ ಕಂಡು ಬಂದಿದ್ದ ಸಾವಿರಾರು ರೂ. ನಗದು ಹಣ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × 2 =
Remember me
