ಬೆಂಗಳೂರು:ಕರ್ನಾಟಕದಲ್ಲಿ ಕರೊನಾ ದೈನಿಕ ಪ್ರಕರಣಗಳು ಹಾಗೂ ಪಾಸಿಟಿವಿಟಿ ದರ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯದ ಮುಕ್ಕಾಲು ಭಾಗದಲ್ಲಿ ಅನ್​ಲಾಕ್​ ಪ್ರಕ್ರಿಯೆ ಆರಂಭವಾಗಲಿದೆ. ಇನ್ನುಳಿದ ಭಾಗದಲ್ಲಿ ಕಠಿಣ ರ್ನಿಬಂಧ ಮುಂದುವರಿಯಲಿದೆ.
ರಾಜ್ಯದ 20 ಜಿಲ್ಲೆಗಳಲ್ಲಿ ಲಾಕ್​ಡೌನ್​ ಭಾಗಶಃ ಸಡಿಲಿಕೆಯಾಗುತ್ತಿದ್ದು, ಕರೊನಾ ಪ್ರಕರಣ ಹೆಚ್ಚಿರುವ 11 ಜಿಲ್ಲೆಗಳಲ್ಲಿ ಮತ್ತಷ್ಟು ಕಠಿಣ ನಿಯಮ ಜಾರಿಯಾಗಲಿದೆ. ಲಾಕ್​ಡೌನ್​ ನಿಯಮ ಜಾರಿಗೆ ತಂದ 35 ದಿನಗಳ ಬಳಿಕ ಅಲ್ಪ ಪ್ರಮಾಣದ ವಿನಾಯಿತಿ ನೀಡಲಾಗುತ್ತಿದೆ. ಮೇ 10ರಂದು ಲಾಕ್​ಡೌನ್​ ಘೋಷಿಸಿದಾಗ ದೈನಂದಿನ ಸೋಂಕು ಪ್ರಕರಣಗಳು 39,305, ಸೋಂಕು ದರ ಶೇ. 31.66 ಇತ್ತು. ಈಗ ಹೊಸ ಪ್ರಕರಣಗಳ ಸಂಖ್ಯೆ 7,810, ಪಾಸಿಟಿವಿಟಿ ದರ ಶೇ.6.02ಕ್ಕೆ ಇಳಿಮುಖವಾಗಿದೆ. ಮರಣ ಪ್ರಮಾಣ ಶೇ.1.57 ರಿಂದ 1.47ಕ್ಕೆ ಇಳಿದಿದೆ.
ಯಾವುದಕ್ಕೆ ವಿನಾಯಿತಿ?:ಅನ್​ಲಾಕ್​ ಜಾರಿಗೊಳ್ಳುವ ಜಿಲ್ಲೆಗಳಲ್ಲಿ ದಿನಸಿ ಅಂಗಡಿಗಳು, ಹಣ್ಣು-ತರಕಾರಿ, ಬೀದಿಬದಿ ವ್ಯಾಪಾರ, ಮದ್ಯ ಪಾರ್ಸೆಲ್​ ಅವಧಿಯನ್ನು ಮಧ್ಯಾಹ್ನ 2ರವರೆಗೆ ವಿಸ್ತರಿಸಲಾಗಿದೆ. ಉದ್ಯಾನಗಳು ಬೆಳಗ್ಗೆ 5 ರಿಂದ 10ರವರೆಗೆ ತೆರೆದಿರಲಿವೆ. ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಕರು ಓಡಾಡಬಹುದು. ರಾತ್ರಿ 7 ರಿಂದ ಬೆಳಗ್ಗೆ 5ರವರೆಗೆ ರಾತ್ರಿ ಕ್ಯೂರ್ ಇರಲಿದೆ. ಎಲ್ಲ ವಿಧದ ಕೈಗಾರಿಕೆಗಳು ಶೇ. 50, ಸಿದ್ಧ ಉಡುಪು ಕಾರ್ಖಾನೆಗಳು ಶೇ.30 ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.
ಸೋಂಕು ಏರಿಳಿತ:ಆರ್ಥಿಕ ಚಟುವಟಿಕೆಗಳಿಗೆ ಅನುವು ಮಾಡಿಕೊಡುವುದಕ್ಕಾಗಿ ಸರ್ಕಾರ ರ್ನಿಬಂಧ ಸಡಿಲಿಕೆ ಮಾಡಿದೆ. ಆದರೆ ಬೆಂಗಳೂರು ಸೇರಿ ಕೆಲವು ಕಡೆ ಹೊಸ ಸೋಂಕು ಪ್ರಕರಣಗಳಲ್ಲಿ ಏರಿಳಿತವಾಗುತ್ತಿವೆ. ಜೂ.11ರಂದು ಹೊಸ ಪ್ರಕರಣಗಳು 8,249, ಸಾವು 159, ಪಾಸಿಟಿವಿಟಿ ದರ ಶೇ.4.86ರಷ್ಟಿತ್ತು. ಆದರೆ ಜೂ.12ರಂದು ಹೊಸ ಪ್ರಕರಣಗಳು 9,785, ಸಾವು 144, ಪಾಸಿಟಿವಿಟಿ ದರ ಶೇ.6.61ರಷ್ಟು ವರದಿಯಾಗಿದೆ. ಸಡಿಲಿಕೆಯಿಂದ ಜನದಟ್ಟಣೆಯಾಗಿ ಸೋಂಕು ಪ್ರಕರಣಗಳು ಹೆಚ್ಚಿದರೆ ತಾತ್ಕಾಲಿಕ ವಿನಾಯಿತಿ ರದ್ದಾಗುವ ಸಾಧ್ಯತೆಯೂ ಇದೆ.
ದಿನಸಿ ಬಿಟ್ಟು ಬೇರೆ ಅಂಗಡಿ ಬಂದ್​:ರ್ನಿಬಂಧಗಳನ್ನು ಸಡಿಲಿಸಿ ವಿನಾಯಿತಿ ನೀಡಿದ ಪಟ್ಟಿಯಲ್ಲಿ ಉದ್ಯಮ ಸಂಸ್ಥೆಗಳು ಮಾತ್ರ ಸೇರಿವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈಗಾಗಲೇ ಪ್ರಕಟಿಸಿದ್ದ ಪರಿಷತ ಮಾರ್ಗಸೂಚಿಯಲ್ಲಿ ಇಂಡಸ್ಟ್ರಿಯಲ್​/ಎಸ್ಟಾಬ್ಲಿಷ್​ಮೆಂಟ್ಸ್​ ಎಂದು ಉಲ್ಲೇಖಿಸಿದ್ದು, ಎಸ್ಟಾಬ್ಲಿಷ್​ಮೆಂಟ್ಸ್​ ಅಂದರೆ ಕೈಗಾರಿಕೆಗಳಿಗೆ ಸಂಬಂಧಿಸಿದ ಸಂಸ್ಥೆಗಳೇ ಹೊರತು ಬೇರೆ ಸಂಸ್ಥೆಗಳು ಅಥವಾ ಕಚೇರಿಗಳಲ್ಲವೆಂದು ವಿವರಿಸಿದೆ.
ಆತಂಕ ತಂದ ಮರುವಲಸೆಕೈಗಾರಿಕೆಗಳು, ಕಾರ್ಖಾನೆಗಳು, ನಿರ್ಮಾಣ ಚಟುವಟಿಕೆಗಳು ಮತ್ತೆ ಶುರು ವಾಗಲಿವೆ ಎಂದ ಅರಿತ ವಲಸಿಗರು, ಬೆಂಗಳೂರು ಮಹಾನಗರದತ್ತ ಕಳೆದ 3-4 ದಿನಗಳಿಂದ ದೌಡಾಯಿಸುತ್ತಿದ್ದಾರೆ. ನಗರದಲ್ಲಿ ಹೊಸ ಸೋಂಕು ಪ್ರಕರಣಗಳ ಸಂಖ್ಯೆ 1,342, ಪಾಸಿಟಿವಿಟಿ ದರ ಶೇ. 3.23ಕ್ಕೆ ಇಳಿಕೆ ಸಮಾಧಾನ ತಂದಿದೆ. ಆದರೂ ಸೋಂಕು ಪ್ರಕರಣಗಳ ಇಳಿಕೆಯಲ್ಲಿ ಸ್ಥಿರತೆ ಇಲ್ಲದಿರುವುದು ಆತಂಕಕ್ಕೆ ಕಾರಣ. ಲಾಕ್​ಡೌನ್​ ನಿಂದಾಗಿ ಸ್ವಂತ ಊರಿಗೆ ಮರಳಿದ್ದ ಬಹುತೇಕ ವಲಸಿಗರು ಬೆಂಗಳೂರು ಸೇರುತ್ತಿದ್ದಾರೆ. ಉದ್ಯಮ, ನಿರ್ಮಾಣ ಚಟುವಟಿಕೆ ಪುನರಾರಂಭಕ್ಕೆ ಕಾರ್ಮಿಕರು ಬೇಕು. ಅಲ್ಲದೆ, ತೀವ್ರ ಕಷ್ಟದಲ್ಲಿರುವ ದುಡಿಯುವ ವರ್ಗದ ಕೈಗೂ ಕೆಲಸ ಕೊಡಬೇಕು. ಬೆಂಗಳೂರು ಸೇರಿ ವಲಸಿಗರು ಮರಳುವ ನಗರಗಳಲ್ಲಿ ಕರೊನಾ ಪರೀಕ್ಷೆಗೆ ವ್ಯವಸ್ಥೆ ಮಾಡಿಕೊಂಡು ಸಡಿಲಿಕೆ ನಿರ್ಧಾರ ಕೈಗೊಂಡಿದ್ದರೆ, ಸೋಂಕು ಹೆಚ್ಚುವ ಆತಂಕ ಇರುತ್ತಿರಲಿಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ಯಾವ ಜಿಲ್ಲೆಗಳಿಗೆ ಸಡಿಲಿಕೆ?ಕೋಲಾರ, ಬೆಂಗಳೂರು ನಗರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಬಳ್ಳಾರಿ, ವಿಜಯನಗರ, ಉಡುಪಿ, ಉತ್ತರ ಕನ್ನಡ, ಚಿತ್ರದುರ್ಗ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್​.
ಎಲ್ಲೆಲ್ಲಿ ಲಾಕ್​ ಮುಂದುವರಿಕೆ?ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಬೆಂ. ಗ್ರಾಮೀಣ, ಮಂಡ್ಯ, ದಾವಣಗೆರೆ, ಶಿವಮೊಗ್ಗ, ದ.ಕನ್ನಡ, ಬೆಳಗಾವಿ.

| ಬಿ.ಎಸ್​.ಯಡಿಯೂರಪ್ಪ ಮುಖ್ಯಮಂತ್ರಿ
21ರಿಂದ ಅನ್​ಲಾಕ್​-2?ರಾಜ್ಯದಲ್ಲಿ ಮೊದಲ ಅನ್​ಲಾಕ್​ ಅವಧಿ ಮುಗಿದ ಬಳಿಕ ಜೂ. 21ರಿಂದ ಅನ್​ಲಾಕ್-2 ಆರಂಭವಾಗುವ ನಿರೀೆಯಿದೆ. ಈ ವೇಳೆ ಇನ್ನಷ್ಟು ವಿನಾಯಿತಿಗಳನ್ನು ನೀಡಲು ಚಿಂತನೆ ನಡೆಸಲಾಗಿದೆ. ದೊಡ್ಡಬಳ್ಳಾಪುರದಲ್ಲಿ ಗರಿಷ್ಠ ಸರ್ಕಾರದ ಅಧಿಕೃತ ದತ್ತಾಂಶಗಳ ಪ್ರಕಾರ ರಾಜ್ಯದಲ್ಲಿ ಬೆಂಗಳೂರು ಗ್ರಾಮೀಣ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಗರಿಷ್ಠ ಪಾಸಿಟಿವಿಟಿ ದರ (ಶೇ.27.23) ಇದೆ. ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನಲ್ಲಿ ಕನಿಷ್ಠ ಶೇ.0.17ರಷ್ಟಿದೆ. ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಸೇರಿ 70 ತಾಲೂಕುಗಳಲ್ಲಿ ಶೇ.5ರೊಳಗೆ, 67 ತಾಲೂಕುಗಳಲ್ಲಿ ಶೇ.5 ರಿಂದ 10, 26 ತಾಲೂಕುಗಳಲ್ಲಿ ಶೇ.10 ರಿಂದ 15, 4 ತಾಲೂಕುಗಳಲ್ಲಿ ಶೇ.15 ರಿಂದ 20, ನಾಲ್ಕು ತಾಲೂಕುಗಳಲ್ಲಿ ಶೇ. 20 ರಿಂದ 25 ಮತ್ತು 1 ತಾಲೂಕಿನಲ್ಲಿ ಶೇ.25ಕ್ಕಿಂತ ಅಧಿಕ ಪಾಸಿಟಿವಿಟಿ ದರವಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 3 =
Remember me
