ಕಲಬುರಗಿ:ಶಂಕಿತ ಕರೊನಾ ಸೋಂಕಿತ 76ರ ವೃದ್ಧ ಮಹಮದ್​ ಹುಸೇನ ಸಿದ್ದಿಕಿ ಅವರು ಕಲಬುರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ವರದಿಯಾದ ಬೆನ್ನಲ್ಲೇ ಆರೋಗ್ಯ ಇಲಾಖೆಯಿಂದ ಸ್ಪಷ್ಟನೆ ಬಂದಿದೆ.
ಮಹಮದ್​ ಸಿದ್ಧಕಿ ಅವರು ಮೃತಪಟ್ಟಿದ್ದು ಕಲಬುರಗಿ ಆಸ್ಪತ್ರೆಯಲ್ಲಿ ಅಲ್ಲ. ಹಾಗೇ ಕರೊನಾದಿಂದಲೇ ಮೃತಪಟ್ಟಿದ್ದು ದೃಢಪಟ್ಟಿಲ್ಲ. ಕೆಮ್ಮಿನಿಂದ ಬಳಲುತ್ತಿದ್ದ ಅವರು ಮೊದಲು ಕಲಬುರಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಲ್ಲಿಂದ ಅವರನ್ನು ಹೈದರಾಬಾದ್​ಗೆ ಕರೆದುಕೊಂಡು ಹೋಗಲಾಗಿತ್ತು. ರಕ್ತದ ಮಾದರಿಯನ್ನು ಪರಿಶೀಲನೆಗೆ ಕಳಿಸಲಾಗಿದೆ ಹೊರತು ಇನ್ನೂ ವರದಿ ಬಂದಿಲ್ಲ. ಅವರು ಸತ್ತಿದ್ದು ಹೈದರಾಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.
ಇನ್ನು ಕರೊನಾ ಶಂಕೆ ವ್ಯಕ್ತವಾಗಿದ್ದರಿಂದ ಅವರ ಅಂತ್ಯಕ್ರಿಯೆವರೆಗೂ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ತಾಲೂಕು ಆರೋಗ್ಯ ಅಧಿಕಾರಿ ಡಾ. ಶರಣಬಸಪ್ಪ ಹಾಗೂ ತಂಡದವರು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ವೃದ್ಧನ ಸಾವಿಗೆ ಕರೊನಾ ಎಂದು ದೃಢಪಟ್ಟಿಲ್ಲದ ಕಾರಣ ಮಾಧ್ಯಮಗಳೂ ಜನರನ್ನು ಗಾಬರಿಬೀಳಿಸಬಾರದು ಎಂದು ಡಿಎಚ್​ಒ ಮನವಿ ಮಾಡಿದ್ದಾರೆ.
ಮೃತನ ಕುಟುಂಬದವರಿಗೂ ಸ್ಕ್ರೀನಿಂಗ್​ ಟೆಸ್ಟ್ ಮಾಡಿಸಲಾಗಿದ್ದು ಯಾರಲ್ಲೂ ಸೋಂಕಿನ ಶಂಕೆ ಕಂಡು ಬಂದಿಲ್ಲ ಎಂದು ಡಿಸಿ ಶರತ್​ ತಿಳಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಅಧಿಕಾರ ‘ಕೈ’ ಜಾರುತ್ತಿದ್ದರೂ ಕಳೆದಿಲ್ಲ ಭರವಸೆ; ಸಿಎಂ ಕಮಲ್​ನಾಥ್​ ಪುತ್ರ ನಕುಲ್​ ಮಾತುಗಳ ಅರ್ಥ ಏನಿರಬಹುದು..?

ಟ್ರಾಫಿಕ್​ ಪೊಲೀಸರಿಗೆ ದೊಡ್ಡ ತಲೆನೋವು ತಂದಿಟ್ಟ ಕರೊನಾ ವೈರಸ್​; ಅಂಥದ್ದೇನಾಗ್ತಿದೆ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
