ಕುಣಿಗಲ್:ತಾಲೂಕು, ಜಿಲ್ಲಾಡಳಿತದ ಬೇಜವಾಬ್ದಾರಿಯಿಂದಾಗಿ ಕರೊನಾಕ್ಕೆ ಬಲಿಯಾದ ವೃದ್ಧನ ಅಂತ್ಯಸಂಸ್ಕಾರವನ್ನೂ ಸಂಬಂಧಿಕರೇ ನೆರವೇರಿಸಿದ್ದಾರೆ ಎನ್ನಲಾಗಿದ್ದು ಈ ಸಂದರ್ಭದಲ್ಲಿ ನೂರಾರು ಜನರು ಭಾಗಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಎಡೆಯೂರು ಹೋಬಳಿ ತಿಮ್ಮೇಗೌಡನ ಪಾಳ್ಯದಲ್ಲಿ ಕೋವಿಡ್-19 ಮಾರ್ಗಸೂಚಿ ಅನ್ವಯ ಮೃತ ಸೋಂಕಿತರ ಅಂತ್ಯಸಂಸ್ಕಾರವನ್ನು ‘ಡೆತ್​ಬಾಡಿ ಮ್ಯಾನೇಜ್ಮೆಂಟ್’ ತಂಡದ ಮಾರ್ಗದರ್ಶನದಲ್ಲಿ ಮಾಡಬೇಕಿತ್ತು. ಆದರೆ, ಸಂಬಂಧಿಕರೇ ಬುಧವಾರ ಪಿಪಿಇ ಕಿಟ್ ಧರಿಸಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಸಂಬಂಧಪಟ್ಟವರ ಈ ಎಡವಟ್ಟು, ಆಡಳಿತದ ನಿರ್ಲಕ್ಷ್ಯಂದಾಗಿ ಸೋಂಕು ಹರಡುವ ಭೀತಿ ಆರಂಭವಾಗಿದೆ.
ಮೃತ ಸೋಂಕಿತ ಹಾಗೂ ಆತನ ಪತ್ನಿ ಕಳೆದ ವಾರ ಬೆಂಗಳೂರಿನ ಸಂಬಂಧಿಕರೊಬ್ಬರ ಶವ ಸಂಸ್ಕಾರಕ್ಕೆ ಹೋಗಿದ್ದರು. ಅಲ್ಲಿಂದ ಬಂದ ಬಳಿಕ ಕರೊನಾ ಪರೀಕ್ಷೆಗೆ ಒಳಗಾಗಿದ್ದರು. ಆದರೆ, ವರದಿ ಬರುವ ಮುನ್ನವೇ ಜೂ.30ರ ರಾತ್ರಿ ವೃದ್ಧ ಮೃತಪಟ್ಟಿದ್ದಾನೆ. ಜು.1ರಂದು ಬೆಳಗ್ಗೆ ಆತನಿಗೆ ಸೋಂಕು ದೃಢಪಟ್ಟಿದೆ. ಆದರೆ, ಮುಂಜಾಗ್ರತಾ ಕ್ರಮವಾಗಿ ವರದಿ ಬರುವವರೆಗೆ ಮೃತದೇಹವನ್ನು ವಶಕ್ಕೆ ತೆಗೆದುಕೊಂಡು ಸುರಕ್ಷತಾ ಕ್ರಮಕೈಗೊಳ್ಳಬೇಕಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಬದಲಿಗೆ ಪಿಪಿಇ ಕಿಟ್​ಗಳನ್ನು ಮೃತನ ಸಂಬಂಧಿಕರಿಗೇ ನೀಡಿ ಅವರ ಕೈಯಲ್ಲೇ ಶವಸಂಸ್ಕಾರ ಮಾಡಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಸಚಿನ್ ತೆಂಡುಲ್ಕರ್‌ಗೆ ಬೌಲಿಂಗ್ ಮಾಡಿದ್ದ ಮಹಿಳಾ ಕ್ರಿಕೆಟರ್ ಯಾರು ಗೊತ್ತೇ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
