ಕಲಬುರಗಿ:ಕರೊನಾ ಭೀತಿಯಿಂದ 18 ದಿನ ಚೀನಾದಲ್ಲಿ ಗೃಹ ಬಂಧನದಲ್ಲಿದ್ದು ಸೋಂಕು ತಗುಲದಿರುವ ಬಗ್ಗೆ ಖಾತ್ರಿಯಾದ ನಂತರ ಕನ್ನಡಿಗ ರಾಜಕುಮಾರ್ ತಾಯ್ನಾಡಿಗೆ ಮರಳಿ ನಿಟ್ಟುಸಿರುಬಿಟ್ಟಿದ್ದಾರೆ.
ಆಳಂದ ತಾಲೂಕಿನ ಮದಗುಣಕಿ ಗ್ರಾಮದ ರಾಜಕುಮಾರ್, ಚೀನಾದ ಖಾಸಗಿ ಕಂಪನಿಯಲ್ಲಿ ರಿಸರ್ಚ್ ಡೆವಲಪಮೆಂಟ್ ನಿರ್ದೇಶಕರಾಗಿದ್ದರು. ಆ ಹುದ್ದೆಗೆ ರಾಜೀನಾಮೆ ನೀಡಿ ಮರಳಿದ ಅವರು, ಶುಕ್ರವಾರ ವಿಜಯವಾಣಿ-ದಿಗ್ವಿಜಯ ಜತೆ ನೇರ ಸಂದರ್ಶನದಲ್ಲಿ ಚೀನಾದ ಅಸಲಿ ಸತ್ಯವನ್ನು ಅನಾವರಣಗೊಳಿಸಿದ್ದಾರೆ.
# ಕೊರೊನಾ ವೈರಸ್​ನಿಂದ ಬಳಲುತ್ತಿರುವ ಚೀನಾದಲ್ಲಿ ಸ್ಥಿತಿ ಹೇಗಿದೆ?
ಸಾಕಷ್ಟು ಸಾವುಗಳನ್ನು ಕಣ್ಣಾರೆ ಕಂಡಿದ್ದೇನೆ. ಈ ವೈರಸ್​ನಿಂದ ಬಳಲುತ್ತಿದ್ದವರ ಮುಖಕ್ಕೆ ಮಾಸ್ಕ್ ಸೇರಿ ಕೆಲ ಮೂಲಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ. ಜನರಿಗೆ ಬೇಕಾದ ದಿನಬಳಕೆ ವಸ್ತು ಖರೀದಿಗೆ ಒಂದು ಗಂಟೆಯ ಅವಕಾಶ ನೀಡಲಾಗುತ್ತಿತ್ತು.
# ಕೊರೊನಾ ನಿಯಂತ್ರಣ ಹೇಗೆ?
ನಿಯಂತ್ರಣವೇ ದೊಡ್ಡ ಸಮಸ್ಯೆ. ಹೀಗಾಗಿ ಸೋಂಕಿನಿಂದ ಬಳಲುತ್ತಿರುವವರಿಗೆ ಸಾವಿರ ಬೆಡ್ ಆಸ್ಪತ್ರೆ ನಿರ್ವಿುಸಿ ಚಿಕಿತ್ಸೆ ಕೊಡೊಕೆ ಅಲ್ಲಿನ ಸರ್ಕಾರ ಮುಂದಾಗಿದೆ.
# ಚೀನಾದಲ್ಲಿದ್ದಾಗ ನಿಮಗೇನು ಅನಿಸಿತ್ತು?
ನನಗೂ ಭಯ ಕಾಡಿತ್ತು. ಸಾವಿರಾರು ಜನ ಸಾಯುತ್ತಿರುವುದನ್ನು ಕಂಡು ದುಃಖವಾಗುತ್ತಿತ್ತು. ಆದರೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರಿಂದ ಬಚಾವಾದೆ.
# ನಿಮ್ಮ ಪ್ರಯಾಣ ಹೇಗಿತ್ತು?
ಚೀನಾದಲ್ಲಿ ಕರೊನಾ ವೈರಸ್ ಸುದ್ದಿ ಕೇಳಿ ಕಂಗಾಲಾದ ತಾಯಿ, ವಾಪಸ್ ಬಂದುಬಿಡು ಎಂದು ಹಠ ಹಿಡಿದರು. ಸಹೋದರಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಳು. ಹೀಗಾಗಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ವಾಪಸು ಬರಲು ತೀರ್ವನಿಸಿದೆ. ವಿಚಿತ್ರವೆಂದರೆ, ಭಾರತಕ್ಕೆ ಬರಬೇಕಾದ ವಿಮಾನಗಳು ಸಹ ರದ್ದಾಗಿದ್ದವು. ಇದನ್ನರಿತು ನಾನು ಕೇಂದ್ರ ಸರ್ಕಾರದ ಮೊರೆ ಹೋದೆ. ತಕ್ಷಣವೇ ನಮ್ಮ ಸರ್ಕಾರ ವಿಮಾನದ ವ್ಯವಸ್ಥೆ ಮಾಡಿತು. ಮರಳುವಾಗ ನನ್ನ ಆರೋಗ್ಯವನ್ನು ಎಲ್ಲ ರೀತಿಯಿಂದ ಪರೀಕ್ಷಿಸಿ ಕರೊನಾ ವೈರಸ್ ಇಲ್ಲದಿರುವುದನ್ನು ಖಾತ್ರಿ ಮಾಡಿಕೊಳ್ಳಲಾಯಿತು.
ನಮ್ಮ ಕುಟುಂಬಕ್ಕೆ ರಾಜಕುಮಾರನೇ ಆಧಾರಸ್ತಂಭ. ಕರೊನಾ ವೈರಸ್ ಇವನ ಸಮೀಪ ಬರದಿರಲಿ ಎಂಬ ಪ್ರಾರ್ಥನೆಯನ್ನು ಶರಣಬಸವೇಶ್ವರ ಕೇಳಿಸಿಕೊಂಡಿದ್ದಾನೆ. ನಮ್ಮಣ್ಣ ಮರಳಿ ದೇಶಕ್ಕೆ ಬಂದಿದ್ದಾನೆ.
| ಮುಕ್ತಾಬಾಯಿ ರಾಜಕುಮಾರ್ ಸಹೋದರಿ
| ವಾದಿರಾಜ ವ್ಯಾಸಮುದ್ರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + sixteen =
Remember me
