ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗ ಮಟ್ಟದ ಮೇಲ್ವಿಚಾರಕ ಹುದ್ದೆಗಳಾದ ತಾಂತ್ರಿಕ ಸಹಾಯಕ ದರ್ಜೆ ಹಾಗೂ ಭದ್ರತಾ ರಕ್ಷಕ ಹುದ್ದೆಗಳ ನೇರ ನೇಮಕಾತಿಗೆ 3 ವರ್ಷಗಳಾದರೂ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿಲ್ಲ. ಕರೊನಾ ನೆಪವೊಡ್ಡಿರುವುದು ಉದ್ಯೋಗಾಂಕ್ಷಿಗಳ ‘ಕನಸಿಗೆ ಬ್ರೇಕ್’ ಬಿದ್ದಂತಾಗಿದೆ.
2018ರ ಮಾರ್ಚ್ 17 ರಂದು ತಾಂತ್ರಿಕ ಸಹಾಯಕ ದರ್ಜೆ 726 ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಅದಾದ ಬಳಿಕ ಜೂನ್​ನಲ್ಲಿ ಭದ್ರತಾ ರಕ್ಷಕ 200 ಹುದ್ದೆಗಳಿಗೆ ಆನ್​ಲೈನ್​ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಒಟ್ಟು 926 ಹುದ್ದೆಗಳಿಗೆ ಒಟ್ಟಿಗೆ ಲಿಖಿತ ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಯಿತು. ಅದರಂತೆ 2020 ಫೆ.2ರಂದು ಪರೀಕ್ಷೆ ನಡೆಸಿ ಹದಿನೈದು ದಿನದಲ್ಲೇ ವೆಬ್​ಸೈಟ್​ನಲ್ಲಿ ಸ್ಕೋರ್ ಕಾರ್ಡ್ ಪ್ರಕಟಿಸಿತು. ಅಷ್ಟರಲ್ಲಿ ಬಂದೆರಗಿದ ಕರೊನಾ ಕಾರಣದಿಂದ ಮಾರ್ಚ್​ನಲ್ಲಿ ಪ್ರಕಟಿಸಬೇಕಿದ್ದ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಿಲ್ಲ. ಈವರೆಗೆ 1:5 ರ ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆ ಪ್ರಕಟಿಸದೇ ಇರುವುದು ಉದ್ಯೋಗದ ಆಸೆಯನ್ನೇ ಕಮರಿಸಿದೆ ಎನ್ನುತ್ತಾರೆ ಉದ್ಯೋಗಾಕಾಂಕ್ಷಿಗಳು.
ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ ಬಳಿಕ ಮೂಲ ದಾಖಲೆಗಳು ಹಾಗೂ ದೈಹಿಕ ಅರ್ಹತೆಗೆ ಅಭ್ಯರ್ಥಿಗಳನ್ನು ಕರೆಯಬೇಕು. ದೈಹಿಕ ಅರ್ಹತೆ ಹಾಗೂ ಮೂಲ ದಾಖಲೆ ಪರಿಶೀಲನೆಯಲ್ಲಿ ಅರ್ಹರಾದವರನ್ನು ಅರ್ಹತೆ ಆಧಾರದ ಮೇಲೆ ಹಾಗೂ ಮೀಸಲಾತಿ ಅನುಸಾರ ಆಯ್ಕೆಗೆ ಪರಿಗಣಿಸಲಾಗುವುದು. ಕರೊನಾ ಹಿನ್ನೆಲೆಯಲ್ಲಿ ಯಾವುದೇ ಕೆಲಸ ಸಿಗದೆ ಕಂಗಾಲಾಗಿರುವ ಅಭ್ಯರ್ಥಿಗಳು ಇಷ್ಟೆಲ್ಲಾ ಪ್ರಕ್ರಿಯೆ ಮುಗಿಯುವವರೆಗೆ ಕಾಯುವಂತಾಗಿದೆ.
Web Exclusive| ರನ್ ವೇ ಮೇಲೆ ತೋಳ ಬಂತು ತೋಳ: ವಿಮಾನ ನಿಲ್ದಾಣಕ್ಕೆ ನಾಯಿ, ನರಿ ಕಾಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
