ರಾಯಚೂರು:ಮಾರ್ಚ್ 24ರಿಂದ ಲಾಕ್​ಡೌನ್​ ಘೋಷಣೆಯಾಗಿದ್ದರೂ ಜನರು ಓಡಾಟವನ್ನು ಬಿಟ್ಟಿಲ್ಲ. ಅಗತ್ಯ ಕೆಲಸವಿದೆ ಎಂದು ಹೋಗುವವರು ಒಂದೆಡೆಯಾದರೆ, ಇನ್ನೊಂದಷ್ಟು ಮಂದಿ ಸುಮ್ಮನೆ ಬೈಕ್​ನಲ್ಲಿ ತಿರುಗಾಡುತ್ತಿದ್ದಾರೆ. ಅಂಥವರ ಮೇಲೆ ಪೊಲೀಸರು ಲಾಠಿಚಾರ್ಜ್​ ಕೂಡ ಮಾಡುತ್ತಿದ್ದಾರೆ.
ಇಂದು ರಾಯಚೂರಿನ ಮಾನ್ವಿ ಪಟ್ಟಣದಲ್ಲಿ ಕೂಡ ಹಲವರು ರಸ್ತೆಗಿಳಿದಿದ್ದರು. ಅವರಿಗೆಲ್ಲ ಕರ್ತವ್ಯ ನಿರತ ಪೊಲೀಸರು ಲಾಠಿ ಬೀಸಿ, ವಾರ್ನ್​ ಮಾಡಿ ಮನೆಗೆ ಕಳಿಸಿದ್ದಾರೆ. ಅವರೂ ಕೂಡ ವಿವಿಧ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.
ಆದರೆ ಬೈಕ್​ನಲ್ಲಿ ಬಂದ ಯುವಕನೋರ್ವನನ್ನು ಅಡ್ಡಗಟ್ಟಿ, ಎಲ್ಲಿಗೆ ಹೋಗಿದ್ದೆ, ಯಾಕೆ ತಿರುಗುತ್ತಿದ್ದೀಯಾ ಎಂದು ಕೇಳಿದ್ದಕ್ಕೆ ಆತ ಖಾಲಿ ಚೊಂಬು ತೋರಿಸಿ, ಬಯಲು ಬಹಿರ್ದೆಸೆಗೆ ಹೋಗಿದ್ದೆ ಎಂದು ಉತ್ತರಿಸಿದ್ದಾನೆ. ಆದರೂ ಬಿಡದೆ, ಆತನಿಗೂ ಲಾಠಿ ರುಚಿ ತೋರಿಸಿ ಕಳಿಸಿದ್ದಾರೆ.(ಏಜೆನ್ಸೀಸ್​)
ಭಾರತದಲ್ಲಿ 724 ಜನರಿಗೆ ಕರೊನಾ ಸೋಂಕು; ಸಾವಿನ ಸಂಖ್ಯೆ 17ಕ್ಕೆ ಏರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 2 =
Remember me
