ಬಳ್ಳಾರಿ:ಕರೊನಾ ಲಾಕ್​ಡೌನ್​ನಿಂದ ಸುಮಾರು ಒಂದೂವರೆ ತಿಂಗಳಿಂದ ಮದ್ಯವಿಲ್ಲದೇ ಪರದಾಡಿದ್ದ ಕೆಲ ಕುಡುಕರು ಬಾಲ ಮುದುರಿದ ಬೆಕ್ಕಿನಂತಿದ್ದರು. ಇದೀಗ ವೈನ್​ಶಾಪ್​ ಓಪನ್​ ಆಗಿದ್ದೇ ತಡ ತಮ್ಮ ವರಸೆ ಆರಂಭಿಸಿದ್ದಾರೆ.
ಇದನ್ನೂ ಓದಿ:ಕರೊನಾ ನಡುವೆ ಮದ್ಯದ ಅಮಲು ಬೇಕಿತ್ತಾ?: ಕೇಂದ್ರದ ವಿರುದ್ಧ ಸಂಜಯ್​ ರಾವತ್​ ಟೀಕಾಸ್ತ್ರ
ಕುಡುಕರ ಅವಾಂತರ ಒಂದಾ ಎರಡಾ ಎನ್ನುವ ಮಾತಿನಂತೆ ಇಲ್ಲೊಬ್ಬ ಮದ್ಯವ್ಯಸನಿ ಎಣ್ಣೆಯ ಅಮಲಿನಲ್ಲಿ ತನ್ನ ಮನೆಗೆ ತಾನೇ ಬೆಂಕಿ ಹಚ್ಚಿಕೊಂಡಿದ್ದಾನೆ. ಬಳ್ಳಾರಿಯ ಕೊಳಗಲ್ಲೂ ಗ್ರಾಮದಲ್ಲಿ ಘಟನೆ ನಡೆದಿದ್ದು, ಚಿದಾನಂದ ಎಂಬಾತನೇ ಬೆಂಕಿ ಹಚ್ಚಿದ್ದ ಭೂಪ.
ಮದ್ಯದ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಈತ ಕುಡಿದ ಮತ್ತಿನಲ್ಲಿ ತನ್ನ ಮನೆಯೊಳಗೆ ಕಡ್ಡಿ ಗೀರಿದ್ದಾನೆ. ಇದರಿಂದ ಬೆಂಕಿ ಬಟ್ಟೆಗೆ ಬಿದ್ದು, ಮನೆಯಲ್ಲಾ ಹಬ್ಬಿ, ವಸ್ತುಗಳು ಸಂಪೂರ್ಣ ಭಸ್ಮವಾಗಿದೆ. ಪತಿಯ ಅಮಲೇರಿದ ಕೆಲಸದಿಂದಾಗಿ ಅಜ್ಜಿಯು ಕಣ್ಣೀರಿಡುವಂತಾಗಿದ್ದು, ಚಿದಾನಂದ ಯಾರ ಕೈಗೂ ಸಿಗದೆ ಪರಾರಿಯಾಗಿದ್ದಾನೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:ಮನೆಯಲ್ಲಿ ಮಲಗಿದ್ದ 3 ವರ್ಷದ ಮಗುವನ್ನು ಹೊತ್ತೊಯ್ದು ಕೊಂದು ತಿಂದ ಚಿರತೆ
https://www.facebook.com/VVani4U/videos/254834865638085/
ಸಿನಿಮಾ ಮಂದಿಗೆ ಸಿಹಿ ಸುದ್ದಿ; ಇನ್ಮುಂದೆ ನೀವು ಈ ಎಲ್ಲ ಕೆಲಸಗಳನ್ನು ಮಾಡಿಕೊಳ್ಳಬಹುದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + nineteen =
Remember me
