ತುಮಕೂರು:ಎಷ್ಟೇ ಕಾದರೂ ಬಾರ್​ಗಳು ಓಪನ್ ಆಗುತ್ತಿಲ್ಲ. ಮದ್ಯಪ್ರಿಯರಿಗೆ ಇದು ತೀವ್ರ ಬೇಸರ ಮೂಡಿಸಿದೆ. ಕುಡಿಯುವ ಆಸೆಯನ್ನು ತಡೆಯಲಾಗದ ಕೆಲವರು ಬಾರ್​ಗಳಿಗೆ ಕನ್ನಹಾಕುತ್ತಿದ್ದಾರೆ.
ಈಗಾಗಲೇ ಅನೇಕ ಕಡೆಗಳಿಂದ ಬಾರ್​ ಬಾಗಿಲು ಒಡೆದು, ಮದ್ಯ ಕಳವು ಮಾಡಿದ್ದರ ವರದಿಯಾಗಿದೆ. ಇದೀಗ ತುಮಕೂರು ಮತ್ತು ದಾವಣಗೆರೆಯಲ್ಲೂ ಭರ್ಜರಿ ಮೌಲ್ಯದ ಮದ್ಯ ಕಳವಾಗಿದೆ.
ತುಮಕೂರಿನ ಮಧುಗಿರಿ ತಾಲೂಕಿನ ಬೆಡತ್ತೂರು ಗ್ರಾಮದಲ್ಲಿ ಎಂಎಸ್​​ಐಎಲ್​ ಬಾರ್​​ನಲ್ಲಿ ಕಳ್ಳತನವಾಗಿದೆ. ಶೆಟರ್​ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಮಧ್ಯವನ್ನು ಎಗರಿಸಿದ್ದಾರೆ. ಮಿಡಿಗೇಶಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಗೇ ದಾವಣಗೆರೆಯಲ್ಲೂ ಕೂಡ ಸುಮಾರು 70 ಸಾವಿರ ರೂ.ಮೌಲ್ಯದ ಮದ್ಯ ಕಳವಾಗಿದೆ. ಹೊಸಕೆರೆ ಗ್ರಾಮದ ಸತ್ಯಮ್ಮ ಬಾರ್​ ಆ್ಯಂಡ್​ ರೆಸ್ಟೋರೆಂಟ್​ನಲ್ಲಿದ್ದ 180 ಎಂಎಲ್‌‌ನ 48 ಬಾಟಲ್‌ಗಳ 29 ಬಾಕ್ಸ್, 12 ಬಾಕ್ಸ್ ಬೀಯರ್​​​ನ್ನು ಕುಡುಕರು ಎಗರಿಸಿದ್ದಾರೆ.ಬಾರ್​ ಕಟ್ಟಡದ ಗೋಡೆ ಕೊರೆದು ಮದ್ಯವನ್ನು ಕಳವು ಮಾಡಲಾಗಿದೆ. ಈ ಬಾರ್​ ಆ್ಯಂಡ್​ ರೆಸ್ಟೋರೆಮಟ್ ಮಹದವೇಪ್ಪ ಎಂಬುವರಿಗೆ ಸೇರಿದ್ದು. ಕರೊನಾ ಹಿನ್ನೆಲೆಯಲ್ಲಿ 15 ದಿನಗಳಿಂದ ಲಾಕ್​ಡೌನ್​ ಆಗಿತ್ತು. ಆದರೆ ಮಂಗಳವಾರ ರಾತ್ರಿ ಕಳವು ಆಗಿದೆ.
ಘಟನಾ ಸ್ಥಳಕ್ಕೆ ಪಿಎಸ್​ಐ ಉಮೇಶ್​ ಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)
ಬಾವಲಿಯಲ್ಲಿ ಕರೊನಾ: ಸಂಶೋಧನೆಯಿಂದ ಹೊರಬಿತ್ತು ಸ್ಪೋಟಕ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
