ಬೆಂಗಳೂರು:ತೀವ್ರ ಟೀಕೆಯ ಬಳಿಕ ದುಪ್ಪಟ್ಟು ಟಿಕೆಟ್​ ದರಕ್ಕೆ ಬ್ರೇಕ್​ ಹಾಕಿರುವ ರಾಜ್ಯ ಸರ್ಕಾರ ನಿಗದಿತ ದರದಲ್ಲೇ ವಲಸೆ ಕಾರ್ಮಿಕರನ್ನು ಕರೆದೊಯ್ಯಲು ನಿರ್ಧರಿಸಿದೆ.
ಕರೊನಾ ವೈರಸ್​ ತಡೆಗಟ್ಟಲು ಹೇರಲಾಗಿರುವ ಲಾಕ್​ಡೌನ್​ನಿಂದ ದುಡಿಮೆಯೇ ಇಲ್ಲದೇ ಜನರು ಕಂಗಾಲಾಗಿರುವ ನಡುವೆಯೇ ರಾಜ್ಯ ಸರ್ಕಾರ ಬೇರೆ ಜಿಲ್ಲೆಯ ಕಾರ್ಮಿಕರನ್ನು ಅವರವರ ಪ್ರದೇಶಗಳಿಗೆ ಕರೆದೊಯ್ಯಲು ಕೆಎಸ್​ಆರ್​ಟಿಸಿ ಟಿಕೆಟ್​ ದರವನ್ನು ದುಪ್ಪಟ್ಟು ಮಾಡಿ ಗಾಯದ ಮೇಲೆ ಬರೆ ಎಳೆದಿತ್ತು.
ಬೆಂಗಳೂರಿನಿಂದ ಬಾಗಲಕೋಟೆಗೆ 1311 ರೂ., ಬಳ್ಳಾರಿ 884 ರೂ., ಬೆಳಗಾವಿ 1478 ರೂ., ಬೀದರ್​ 1984 ರೂ., ಚಾಮರಾಜನಗರ 468 ರೂ., ಉಡುಪಿ 1110 ರೂ, ಧಾರವಾಡ 1239 ರೂ., ಮೈಸೂರು 390 ರೂ. ಹೀಗೆ ಆಯಾ ಜಿಲ್ಲೆಗೆ ಬಸ್​ ಟಿಕೆಟ್​ ದರಗಳನ್ನು ದುಪ್ಪಟ್ಟು ನಿಗದಿ ಮಾಡಿತ್ತು. ಸಾರ್ವಜನಿಕ ವಲಯದಿಂದ ತೀವ್ರ ಟೀಕೆ ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ದುಪ್ಪಟ್ಟು ದರ ಹಿಂಪಡೆದುಕೊಂಡು ನಿಗದಿತ ದರದಲ್ಲಿ ಕಾರ್ಮಿಕರನ್ನು ಕರೆದೊಯ್ಯಲು ತೀರ್ಮಾನಿಸಿದೆ.
ಇದನ್ನೂ ಓದಿ:ತನ್ನ ಕುಟುಂಬವನ್ನೇ ಸರ್ವನಾಶ ಮಾಡಿದ ಪಾಪಿ: ತಂದೆ, ತಾಯಿ, ಅಣ್ಣ, ಅತ್ತಿಗೆ, ಮಕ್ಕಳಿಬ್ಬರನ್ನು ಕೊಂದು ಪೊಲೀಸರಿಗೆ ಶರಣು
ಈ ಬಗ್ಗೆ ಟ್ವೀಟ್​ ಮಾಡಿರುವ ಸಚಿವ ಸುರೇಶ್​ ಕುಮಾರ್​ ಅವರು ಕೆಎಸ್​ಆರ್​ಟಿಸಿ ಬಸ್​ಗಳ‌ ಮೂಲಕ ತಮ್ಮ ತಮ್ಮ ಸ್ಥಳಗಳಿಗೆ ಹೋಗಲು ಬೆಂಗಳೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ‌ ಕಾದಿರುವ ಕಾರ್ಮಿಕರಿಗೆ ನಿಗದಿತ ದರದಲ್ಲಿ ಹೋಗಲು ಅನುವು ಮಾಡಿಕೊಡಲು ಮಾನ್ಯ ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರಿದ್ದಾರೆ ಎಂದಿದ್ದಾರೆ.
ಕೆಎಸ್ಆರ್ ಟಿ ಸಿ ಬಸ್ ಗಳ ಮೂಲಕ ತಮ್ಮ-ತಮ್ಮ ಸ್ಥಳಗಳಿಗೆ ಹೋಗಲು ಬೆಂಗಳೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಕಾದಿರುವ "ಕಾರ್ಮಿಕ" ರಿಗೆ Single Fare ದರದಲ್ಲಿ ಹೋಗಲು ಅನುವು ಮಾಡಿಕೊಡಲು ಮುಖ್ಯಮಂತ್ರಿಗಳು ಹಸಿರು‌ ನಿಶಾನೆ ತೋರಿದ್ದಾರೆ.
— S.Suresh Kumar (@nimmasuresh)May 2, 2020

ದುಪ್ಪಟ್ಟು ದರದಿಂದ ಕಂಗಾಲಾಗಿದ್ದ ಕಾರ್ಮಿಕರಿಗೆ ಸರ್ಕಾರದ ನಿರ್ಧಾರದಿಂದ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡಬಹುದಾಗಿದೆ.
ಇದನ್ನೂ ಓದಿ:ಸುಳ್ಳು ಹೇಳಿ ಬಾಯ್​ಫ್ರೆಂಡ್​ ನೋಡಲು ಹೋದ ಕೇರಳ ಬ್ಯೂಟಿಷಿಯನ್ ದುರಂತ ಅಂತ್ಯವಾಗಿದ್ದು ಹೇಗೆ?​
ಲಾಕ್​ಡೌನ್​ನಿಂದ ಕೆಲಸವಿಲ್ಲದೇ ಕಂಗಾಲಾಗಿರೋ ಕಾರ್ಮಿಕರ ಬಳಿ ಸರ್ಕಾರದಿಂದ ದುಪ್ಪಟ್ಟು ಬಸ್ ದರ ವಸೂಲಿ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
