ಬೆಂಗಳೂರು:ಲಾಕ್​ಡೌನ್ ಜನಸಾಮಾನ್ಯರನ್ನು ಹಿಂಡಿಹಿಪ್ಪೆ ಮಾಡಿದೆ. ಲಾಕ್​ಡೌನ್ ಅನಿವಾರ್ಯ ಎಂಬ ಸ್ಪಷ್ಟ ಅರಿವಿನ ನಡುವೆಯೂ ಪುನಃ ಸಾಮಾನ್ಯ ಸ್ಥಿತಿಗೆ ಮರಳುವುದು ಎಂಬ ಪ್ರಶ್ನೆ ಹಾಕಿಕೊಳ್ಳಲಾರಂಭಿಸಿದ್ದಾರೆ.
ಈ ವಿಚಾರ ನಿರ್ಧರಿಸುವುದು ಸರ್ಕಾರ ರಚಿಸಿರುವ ವಿಶೇಷ ಟಾಸ್ಕ್ ಫೋರ್ಸ್. ಇದರ ಶಿಫಾರಸಿನ ಆಧಾರದಲ್ಲಿ ಸರ್ಕಾರ ತನ್ನ ತೀರ್ವನವನ್ನು ಏ.13 ಅಥವಾ 14ರಂದು ಪ್ರಕಟಿಸಲಿದೆ. ಈ ಹಂತದಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಮುಂದಿನ ಗುರುವಾರದೊಳಗೆ ಚಿತ್ರಣ ಇನ್ನಷ್ಟು ಸ್ಪಷ್ಟವಾಗಲಿದೆ. ಬಳಿಕವಷ್ಟೇ ಟಾಸ್ಕ್ ಫೋರ್ಸ್ ಅಧ್ಯಯನ ನಡೆಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇನ್ನೊಂದೆಡೆ ಲಾಕ್​ಡೌನ್ ಮತ್ತಷ್ಟು ದಿನ ಮುಂದುವರಿದರೆ ಆಗಬಹುದಾದ ಪರಿಣಾಮಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯೂ ಶುರುವಾಗಿದೆ.
ರಾಜ್ಯ ಸರ್ಕಾರದ ಟಾಸ್ಕ್ ಫೋರ್ಸ್ ಸಿದ್ಧಪಡಿಸುವ ವರದಿಯನ್ನು ಕೇಂದ್ರ ಸರ್ಕಾರಕ್ಕೂ ಕಳಿಸಲಾಗುತ್ತದೆ, ಬಳಿಕವಷ್ಟೇ ಇಡೀ ದೇಶದ ಪರಿಸ್ಥಿತಿ ಗಮನಿಸಿ ರಾಜ್ಯಕ್ಕೆ ಒಂದಷ್ಟು ಶಿಫಾರಸು ಮಾಡುವ ಸಾಧ್ಯತೆ ಇದೆೆ. ಈಗಾಗಲೇ ಒಂದು ಸುತ್ತಿನಲ್ಲಿ ಲಾಕ್​ಡೌನ್ ವಿಸ್ತರಿಸುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಎಷ್ಟು ದಿನ ಮಾಡಿದರೆ ಸೂಕ್ತ ಎಂಬ ಬಗ್ಗೆ ಒಂದಷ್ಟು ಗ್ರಾಫ್ ಆಧಾರಿತ ಸಂದೇಶಗಳು ಜಾಲತಾಣದಲ್ಲಿ ಹರಿದಾಡಿವೆ.
ಲಾಕ್​ಡೌನ್- ಪ್ಲಾ್ಯನ್ ಎ ಪ್ರಕಾರ, 21 ದಿನಗಳಲ್ಲೇ ಮುಗಿಸುವುದು. ಮುಂದೆ ಎಷ್ಟೇ ಪ್ರಕರಣ ಬಂದರೂ ಆಯಾಯ ಪ್ರದೇಶಗಳನ್ನಷ್ಟೇ ಪ್ರತಿಬಂಧಿಸುತ್ತ ಹೋಗುವುದು, ಪ್ಲಾ್ಯನ್ ಬಿ- 21 ದಿನದ ಲಾಕ್​ಡೌನ್ ಬಳಿಕ ಕೆಲದಿನ ಬ್ರೇಕ್ ನೀಡಿ ಮತ್ತೆ 28 ದಿನ ಮಾಡುವುದು.ಪ್ಲಾ್ಯನ್ ಸಿ- ಮೂರು ಹಂತದಲ್ಲಿ ಲಾಕ್​ಡೌನ್ ಮಾಡುವುದು. ಪ್ಲಾ್ಯನ್ ಡಿ- ಮೇ 13ರವರೆಗೂ ಮುಂದುವರಿಸುವುದು. ಈ ಪ್ಲಾ್ಯನ್​ಗಳು ಎಲ್ಲಿ ತಯಾರಿಸಿದ್ದು, ಯಾರು ತಯಾರಿಸಿದ್ದೆಂಬ ಬಗ್ಗೆ ಸ್ಪಷ್ಟತೆ ಇಲ್ಲ.
ತುರ್ತು ಅನಿವಾರ್ಯತೆ:ಸರ್ಕಾರದ ಬೊಕ್ಕಸ ಖಾಲಿಯಾಗುತ್ತಿದೆ, ನೌಕರರಿಗೆ ಸಂಬಳ ಕೊಡುವುದಕ್ಕೂ ಪರದಾಡಬೇಕಾಗುತ್ತದೆ. ಜನರಿಗೆ ಉಚಿತ ಸೇವೆಗಳನ್ನು ಮುಂದುವರಿಸಲಾದರೂ ಹಣ ಬೇಕಾಗುತ್ತದೆ. ಹೀಗಾಗಿ ಸರ್ಕಾರ ಆದಾಯ ಗಳಿಕೆಗಾದರೂ ಒಂದಷ್ಟು ರಿಯಾಯಿತಿ ನೀಡುವುದಷ್ಟೇ ಅಲ್ಲದೆ ಮಾರುಕಟ್ಟೆಯಲ್ಲಿ ಚಟುವಟಿಕೆ ಉಂಟಾಗುವಂತೆ ನೋಡಿಕೊಳ್ಳಬೇಕಾಗಿದೆ. ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ಹೆಚ್ಚು ಸಾಮಾಜಿಕ ಅಂತರ ಕಾಯ್ದುಕೊಂಡು, ಮಕ್ಕಳನ್ನು ಆರೋಗ್ಯ ಪರಿಶೀಲನೆಗೊಳಪಡಿಸಿ ಶುಚಿತ್ವದ ವಾತಾವರಣದಲ್ಲಿ ನಡೆಸುವ ಚಿಂತನೆ ಶಿಕ್ಷಣೆ ಇಲಾಖೆಯಲ್ಲಿದೆ. ದ್ವಿತೀಯ ಪಿಯುಸಿಯ ಒಂದು ಪತ್ರಿಕೆಗೂ ಪರೀಕ್ಷೆ ಆಗಬೇಕಾಗಿದ್ದು, ಬಳಿಕ ಮೌಲ್ಯಮಾಪನಕ್ಕೆ ತಯಾರಿ ಮಾಡಿಕೊಳ್ಳಬೇಕು. ಈ ಕೆಲಸ ಜೂನ್ ಒಳಗೆ ಮುಗಿಸದಿದ್ದರೆ ಮುಂದಿನ ಶೈಕ್ಷಣಿಕ ವರ್ಷದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ರಾಜ್ಯದ ರಫ್ತು-ಆಮದು ಕಡೆ ತಕ್ಷಣವೇ ಗಮನ ಕೊಡಬೇಕು, ಕೈಗಾರಿಕೆಗಳು ಪುನಾರಂಭವಾಗುವಂತೆ ನೋಡಿಕೊಂಡು ಜನರು ಮತ್ತೆ ಕೆಲಸಕ್ಕೆ ಹೋಗುವ ವಾತಾವರಣ ಮಾಡುವ ಸವಾಲು ಸರ್ಕಾರದ ಮೇಲಿದೆ.
ಅಧ್ಯಯನ-ಆಲೋಚನೆ
2. ಕರೋನಾ ಪೀಡಿತ ಜಿಲ್ಲೆಗಳಲ್ಲೂ ಸೋಂಕು ಪೀಡಿತರು ಹೆಚ್ಚು ಕಂಡುಬಂದ ವ್ಯಾಪ್ತಿಯನ್ನು ಪ್ರತಿಬಂಧಿಸಿ, ಉಳಿದೆಡೆ ನಿರ್ಬಂಧ ಸಡಿಲ. ಗಂಭೀರತೆ ಇದ್ದರೆ ಆ ಜಿಲ್ಲೆಗಳಲ್ಲೂ ಮುಂದುವರಿಕೆ.
3. ಕೊನೆಯ ವಾರದಲ್ಲಿ ಯಾವುದೇ ಸೋಂಕಿತರು ಸೇರ್ಪಡೆ ಆಗದಿದ್ದರೆ ಪೂರ್ಣ ಪ್ರಮಾಣದಲ್ಲಿ ಲಾಕ್​ಡೌನ್ ಸಡಿಲ ಸಾಧ್ಯತೆ. ಆದರೆ ಸಾರ್ವಜನಿಕವಾಗಿ ಜನ ಸೇರದಂತೆ 144 ಸೆಕ್ಷನ್, ಶಾಲೆ, ಜಾತ್ರೆ ಮೇಲಿನ ನಿಷೇಧ ತಾತ್ಕಾಲಿಕ ಮುಂದುವರಿಕೆ.
4. ಪೂರ್ಣ ಲಾಕ್​ಡೌನ್ ತೆರವು ಬಳಿಕವೂ ಕೆಲದಿನಗಳ ಮಟ್ಟಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಲ್ಲಿ ಅರಿವು. ಕೆಲವು ಚಟುವಟಿಕೆಗೆ ನಿರ್ಬಂಧ ಮುಂದುವರಿಕೆ. ಮೆಟ್ರೋ, ರೈಲು ಸೇವೆ ಸದ್ಯಕ್ಕಿಲ್ಲ.
ಕರೊನಾಗೆ ಕ್ಯಾರೇ ಎನ್ನದ ಜನ
ಬೆಂಗಳೂರು: ಕರೊನಾ ನಿಯಂತ್ರಿಸಲು ಜಾರಿಯಲ್ಲಿರುವ ಲಾಕ್​ಡೌನ್​ನ ಪೂರ್ವಾರ್ಧ ಕಳೆದಿದ್ದು, ನಿರೀಕ್ಷಿತ ಮಟ್ಟ ಮುಟ್ಟಿಲ್ಲ ಎಂಬುದು ಪ್ರತಿ ದಿನವೂ ಸಾಬೀತಾಗಿದೆ. ಇದಕ್ಕೆ ಸರ್ಕಾರ, ರಾಜಕೀಯ ನಾಯಕರು ಮತ್ತು ಜನತೆ ಕೂಡ ಕಾರಣರಾಗಿದ್ದಾರೆ. ಇದೀಗ ಲಾಕ್​ಡೌನ್​ನ ಉತ್ತರಾರ್ಧ ಆರಂಭವಾಗಿದ್ದು, ಹಳೇ ತಪು್ಪ, ದೋಷಗಳನ್ನು ಸರಿಪಡಿಸಿಕೊಳ್ಳುವ ಹೊಣೆ ಸರ್ಕಾರದ ಮೇಲಿದೆ.
ಲಾಕ್​ಡೌನ್ ಇನ್ನಷ್ಟು ಕಠಿಣವಾಗಲೇ ಬೇಕು, ಇಲ್ಲವಾದರೆ ಉದ್ದೇಶ ವಿಫಲವಾಗಬಹುದು ಎಂದು ರಾಜ್ಯ ಸರ್ಕಾರಕ್ಕೆ ಪ್ರಧಾನಿ ಮೂರು ಬಾರಿ ತಿವಿದು ಹೇಳಿದರೂ ಜಾರಿ ಮಾತ್ರ ಈವರೆಗೆ ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರದಿಂದ ಸ್ಪಷ್ಟ ಆದೇಶ ಹೊರ ಬಾರದ ಹಿನ್ನೆಲೆ ಪೊಲೀಸರು ಸಹ ಬಹುತೇಕ ಸಂದರ್ಭ ಮೂಕ ಪ್ರೇಕ್ಷಕರಾಗಿದ್ದಾರೆ. ಪರಿಣಾಮ, ಜನ ಮನೆಯಲ್ಲಿರದೆ ಸುಖಾಸುಮ್ಮನೆ ಬೀದಿಗಿಳಿಯುತ್ತಿದ್ದಾರೆ. ಇಟಲಿಯಲ್ಲಿ ಲಾಕ್​ಡೌನ್ ಹೊರತಾಗಿಯೂ ಅಲ್ಲಿ ಜನರ ನಡೆದುಕೊಂಡು ರೀತಿ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವುದಕ್ಕೆ ದೊಡ್ಡ ಬೆಲೆ ತೆತ್ತಿದೆ. ಭಾರತ ಮತ್ತು ಕರ್ನಾಟಕ ಸರ್ಕಾರ ಕೈಗೊಂಡ ಮುಂಜಾಗ್ರತಾ ಕ್ರಮಗಳಿಂದ ಈವರೆಗೆ ಪರಿಸ್ಥಿತಿ ತಕ್ಕಮಟ್ಟಿಗೆ ಹಿಡಿತದಲ್ಲಿದೆ. ಆದರೂ, ದಿನ ದಿನಕ್ಕೂ ಹೊಸ ಪ್ರಕರಣ ದಾಖಲಾಗುತ್ತಿರುವುದು ಸರ್ಕಾರಕ್ಕೆ ಚಿಂತೆಯಾಗಿದೆ.
ಆರಂಭದಲ್ಲಿ ತರಕಾರಿ ಮಾರುಕಟ್ಟೆ, ಮಾಂಸದಂಗಡಿಗಳಲ್ಲಿ ಜನತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರಲಿಲ್ಲ. ಇದೀಗ ಈ ಎರಡೂ ಕಡೆ ಪರಿಸ್ಥಿತಿ ಸುಧಾರಿಸಿದರೂ ಪರಿಪೂರ್ಣವಾಗಿಲ್ಲ. ಶನಿವಾರ ಬೆಳಗ್ಗೆ ಹಲವು ಕಡೆ ಜನತೆ ಮಾರುಕಟ್ಟೆಯಲ್ಲಿ ಮುಗಿಬಿದ್ದಿರುವ ವರದಿಗಳು ಇವೆ. ಹಣ್ಣು, ತರಕಾರಿಯನ್ನು ಮನೆ ಬಾಗಿಲಲ್ಲೇ ಖರೀದಿಗೆ ಸಿಗುವಂತೆ ಮಾಡಬೇಕೆಂಬ ಚರ್ಚೆಗಳು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಈ ಕಾರಣಕ್ಕೆ ಸಹಜವಾಗಿ ಜನ ರಸ್ತೆಗಿಳಿಯುವಂತಾಗಿದೆ. ಹಸಿದವರಿಗೆ ಊಟ, ಮಾಸ್ಕ್ ಕೊಡುವ ನೆಪದಲ್ಲಿ ಒಂದಷ್ಟು ಮಂದಿ ಓಡಾಟ ನಡೆಸುತ್ತಿದ್ದು, ಕೆಲವು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಗಮನ ಕೊಟ್ಟಿಲ್ಲ. ಒಟ್ಟಾರೆ ಲಾಕ್​ಡೌನ್ ಉಲ್ಲಂಘಿಸಲೇಬೇಕೆಂಬ ಹಠತೊಟ್ಟವರಿಂದ ಮತ್ತು ಸರ್ಕಾರ ಮಾನಿಟರ್ ವ್ಯವಸ್ಥೆಯಲ್ಲಿನ ದೋಷದ ಕಾರಣ ಲಾಕ್​ಡೌನ್ ಈವರೆಗೆ ಪಕ್ವವಾಗಿ ನಡೆದಿಲ್ಲ. ಕಠಿಣ ಕ್ರಮ ಎಂದು ಸರ್ಕಾರ ಹೇಳಿಕೊಂಡು ಬಂದಿದೆಯಾದರೂ, ವಿವಿಧ ಒತ್ತಡಕ್ಕೆ ಮಣಿದು ಕ್ರಮಗಳನ್ನು ಸಡಿಲ ಮಾಡುತ್ತಿರುವುದೇ ಇಷ್ಟಕ್ಕೆಲ್ಲ ಕಾರಣವಾಗಿದೆ.
ಕೃಷಿಕರು ಮತ್ತು ಸ್ವಸಹಾಯ ಗುಂಪಿನ ನೆರವಿಗೆ ವಿಶೇಷ ಸಾಲ ಯೋಜನೆ ಪ್ರಕಟಿಸಿದ ಇಂಡಿಯನ್​ ಬ್ಯಾಂಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
