ಬೆಂಗಳೂರು:ರಾಜ್ಯದಲ್ಲಿ ಇಲ್ಲಿಯವರೆಗೆ ಹರಡಿರುವ ಕರೊನಾ ಸೋಂಕಿನಲ್ಲಿ ಶೇ.40 ಕೇವಲ 8 ಜನರಿಂದ ಹರಡಿದೆ. ಭಾನುವಾರದವರೆಗೆ ರಾಜ್ಯದಲ್ಲಿ 635 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 293 ಸೋಂಕಿತರು ಗುಣಮುಖ ಆಗಿದ್ದಾರೆ.
ನಂಜನಗೂಡಿನ ಔಷಧ ಕಂಪನಿ ಉದ್ಯೋಗಿಯೊಬ್ಬರಿಂದಲೇ 76 ಜನರಿಗೆ ಸೋಂಕು ಹರಡಿದ್ದು, ರಾಜ್ಯದಲ್ಲಿ ಅತಿಹೆಚ್ಚು ಜನರಿಗೆ ಹರಡಿದವರಾಗಿದ್ದಾರೆ. ತಬ್ಲಿಘಿ ಜಮಾತ್​ಗೆ ಹೋಗಿ ಬಂದ ವ್ಯಕ್ತಿ, ಬೆಂಗಳೂರಿನಲ್ಲಿ ನೆಲೆಸಿದ್ದ ಬಿಹಾರ ಮೂಲದ ಕಾರ್ವಿುಕ ಸೇರಿ 8 ಜನರಿಂದ 226 ಜನರಲ್ಲಿ ಸೋಂಕು ಹರಡಿದೆ ಎಂಬುದು ರಾಜ್ಯ ಸರ್ಕಾರದ ಅಂಕಿ-ಅಂಶಗಳಲ್ಲಿ ದೃಢಪಟ್ಟಿದೆ. ಆಯಾ ಪ್ರದೇಶದಲ್ಲಿ ವೈದ್ಯಕೀಯ ವ್ಯವಸ್ಥೆ ಮೇಲೆ ಇವರಿಂದ ಆದ ತೀವ್ರ ಪರಿಣಾಮ ಗಮನಿಸಿರುವ ಅಧಿಕಾರಿಗಳು, ಅಂತಹ ಸೂಪರ್ ಸ್ಪ್ರೆಡರ್​ಗಳು ಮತ್ತೆ ಕಾಣಿಸಿಕೊಳ್ಳದಿರಲಿ ಎಂದು ಇನ್ನಿಲ್ಲದ ಹರಸಾಹಸ ಮಾಡುತ್ತಿದ್ದಾರೆ.
ಇದನ್ನೂ ಓದಿ:ಕರೊನಾ ಶಂಕಿತೆಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಹೈಡ್ರಾಮ ಸೃಷ್ಟಿಸಿ ಪೇದೆಗಳಿಬ್ಬರು ಪರಾರಿ
ಮೂರು ವಿಭಾಗಗಳಾಗಿ ವಿಂಗಡಣೆ
ಒಬ್ಬರಿಂದ 5ಕ್ಕಿಂತ ಕಡಿಮೆ ಜನರಿಗೆ ಸೋಂಕು ಹರಡಿದ್ದರೆ, ಲೈಟ್ ಸ್ಪ್ರೆಡರ್, 5-10 ಜನರಿಗೆ ಹರಡಿದ್ದರೆ ಸ್ಪ್ರೆಡರ್, 10ಕ್ಕಿಂತ ಹೆಚ್ಚು ಜನರಿಗೆ ಹರಡಿದ್ದರೆ ಸೂಪರ್ ಸ್ಪ್ರೆಡರ್ ಎಂದು ವಿಂಗಡಣೆ ಮಾಡಲಾಗಿದೆ. ಅದರಂತೆ ಸೂಪರ್ ಸ್ಪ್ರೆಡರ್ ವಿಭಾಗದಲ್ಲಿ ಪಿ-52, 221, 419, 128, 205, 134, 125 ಹಾಗೂ 247 ಇದ್ದಾರೆ. ಯಾವುದೇ ಸೋಂಕಿತರೊಂದಿಗೆ ಸಂಪರ್ಕಕ್ಕೆ ಬಾರದ, ಪ್ರವಾಸ ಇತಿಹಾಸವೂ ಇಲ್ಲದ ಸೋಂಕಿತರೂ ಇದ್ದಾರೆ.
ಇದನ್ನೂ ಓದಿ:VIDEO| ಲಾಕ್​ಡೌನ್​ ಉಲ್ಲಂಘಿಸಿದವನಿಗೆ ಡ್ಯಾನ್ಸ್​ ಮಾಡಲು ಹೇಳಿ ಎಡವಟ್ಟು ಮಾಡ್ಕೊಂಡ ಪೊಲೀಸರು!
ಆದರೆ ಇಲ್ಲಿವರೆಗೆ ರಾಜ್ಯದಲ್ಲಿ ಶೇ.69 ಸೋಂಕಿತರು ನಿರ್ದಿಷ್ಟ ರೋಗಿಯ ಸಂಪರ್ಕದಿಂದಲೇ ಕರೊನಾಗೆ ಒಳಗಾಗಿದ್ದಾರೆ. ಉಳಿದ ಶೇ.31 ಎಲ್ಲಿಂದ ಬಂದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ರಾಜ್ಯದಲ್ಲಿ ಸೋಂಕಿತರ ಪೈಕಿ ಶೇ.12 ವಿದೇಶಕ್ಕೆ ತೆರಳಿದ್ದವರು, ಶೇ.13 ಅನ್ಯ ರಾಜ್ಯದ ಪ್ರವಾಸ ಇತಿಹಾಸ ಹೊಂದಿದ್ದರು, ಶೇ.7 ತೀವ್ರ ಉಸಿರಾಟದ ತೊಂದರೆಯಿಂದ ಸೋಂಕು ಪತ್ತೆಯಾಗಿದೆ.
| ರಮೇಶ ದೊಡ್ಡಪುರ

ಶ್ರಮಿಕ್​ ಸ್ಪೆಶಲ್​ ತೊಂದರೆಯಲ್ಲಿ ಇರುವವರಿಗೆ, ಊರಿಗೆ ಹೋಗಿ ಬರುವವರಿಗಲ್ಲ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 1 =
Remember me
