ಬೆಂಗಳೂರು:ಮಹಾನಗರದಲ್ಲಿ ಕಳೆದೆರಡು ವಾರಗಳಿಂದ ಕೋವಿಡ್ ಪ್ರಕರಣಗಳಲ್ಲಿ ಏರಿಳಿತವಾಗುತ್ತಿದ್ದು, ಮಂಗಳವಾರ ವರದಿಯಾದ ಮೂರು ಪ್ರಕರಣ ರಾಜಧಾನಿಗೆ ಕಂಟಕವಾಗಲಿದೆಯೇ ಎಂಬ ಆತಂಕ ಸೃಷ್ಟಿಯಾಗಿದೆ. ಲಾಕ್​ಡೌನ್ ಸಡಿಲಿಕೆ ಮುಳುವಾಯಿತೇ ಎಂಬ ಪ್ರಶ್ನೆ ಮೂಡಿದೆ.
ಪೂರ್ಣ ಹಸಿರು ವಲಯದಲ್ಲಿದ್ದ ಬಿಟಿಎಂ ಲೇಔಟ್​ನಲ್ಲಿ ಗರ್ಭಿಣಿಗೆ ಸೋಂಕು ತಗುಲಿರುವುದು ಭೀತಿಗೆ ಕಾರಣವಾಗಿದೆ. ಬಿಟಿಎಂ ಲೇಔಟ್ ವಾರ್ಡ್​ನ ಇಕೋಬಾನಗರ ನಿವಾಸಿ, 30 ವರ್ಷದ ಗರ್ಭಿಣಿಯ ಮಾಸಿಕ ತಪಾಸಣೆ ವೇಳೆ ಕರೊನಾ ಸೋಂಕು ದೃಢವಾಗಿದೆ. ತಪಾಸಣೆ ವೇಳೆ ಮಹಿಳೆಗೆ ಶೀತ, ಜ್ವರ ಹಾಗೂ ಕೆಮ್ಮು ಇರುವುದನ್ನು ತಿಳಿದ ಆಸ್ಪತ್ರೆ ಸಿಬ್ಬಂದಿ ಗಂಟಲದ್ರವ ಪರೀಕ್ಷೆ ಮಾಡಿಸಿದಾಗ ವಿಚಾರ ಬಯಲಾಗಿದೆ. ಲಾಕ್​ಡೌನ್ ಜಾರಿಯಾದಾಗಿನಿಂದ ಮನೆಯಿಂದ ಹೊರಗೆ ಬಾರದ ಮಹಿಳೆಯಲ್ಲಿ ಸೋಂಕು ಕಂಡುಬಂದಿರುವುದು ಆತಂಕ್ಕೀಡುಮಾಡಿದೆ. ಆಕೆಯ ಸಂಪರ್ಕದಲ್ಲಿದ್ದವರನ್ನೂ ಕ್ವಾರಂಟೈನ್ ಮಾಡಲಾಗಿದೆ.
ನಾಲ್ವರು ಗರ್ಭಿಣಿಯರಿಗೆ ಸೋಂಕು:ಗರ್ಭಿಣಿಯಲ್ಲಿ ಸೋಂಕು ದೃಢಪಟ್ಟಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಮತ್ತೊಮ್ಮೆ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಆಕೆಯೂ ಸೇರಿ ಈವರೆಗೂ ನಗರದ ಮೂವರು ಹಾಗೂ ಹೊರ ಜಿಲ್ಲೆಯ ಓರ್ವ ಗರ್ಭಿಣಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಚಾಂದಿನಿ ಚೌಕ್ ಸೀಲ್​ಡೌನ್:ಶಿವಾಜಿನಗರದ ರಿಜೆಂಟಾ ಹೋಟೆಲ್​ನ ಸ್ವಚ್ಛತಾ ಸಿಬ್ಬಂದಿಗೆ ಸೋಂಕು ದೃಢಪಟ್ಟಿದ್ದು, ಆತ ಹಾಗೂ ಹೋಟೆಲ್​ನ ಇತರ 18 ಸಿಬ್ಬಂದಿ ಸೇರಿ ಹೋಟೆಲ್​ನಲ್ಲಿದ್ದ 72 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಆತ ವಾಸಿಸುತ್ತಿದ್ದ ಚಾಂದಿನಿ ಚೌಕ್ ಪ್ರದೇಶವನ್ನು ಸೀಲ್ ಮಾಡಲಾಗಿದೆ. ಶಿವಾಜಿನಗರದ ಶಿಫಾ ಆಸ್ಪತ್ರೆಯಲ್ಲಿ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ಆಸ್ಪತ್ರೆ ಸಿಬ್ಬಂದಿಯನ್ನು ರಿಜೆಂಟಾ ಹೋಟೆಲ್​ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಅವರಿಂದ ಸೋಂಕು ಹರಡಿರುವ ಅನುಮಾನವಿದೆ.
ನಗರದಲ್ಲಿ ಸೋಂಕಿತರ ಸಂಖ್ಯೆ 153ಕ್ಕೆ ಏರಿಕೆಯಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ. 75 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದು, 71 ಮಂದಿ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆ ಸೀಲ್​ಡೌನ್ ಮಾಡಲ್ಲ
ಗರ್ಭಿಣಿಯಲ್ಲಿ ಮಂಗಳವಾರ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆಕೆ ಚಿಕಿತ್ಸೆ ಪಡೆಯುತ್ತಿದ್ದ ಜಯನಗರದ ಖಾಸಗಿ ಆಸ್ಪತ್ರೆಯನ್ನು ಸೀಲ್​ಡೌನ್ ಮಾಡುವುದಿಲ್ಲ. ಬದಲಿಕೆ ಆಕೆಗೆ ಚಿಕಿತ್ಸೆ ನೀಡಿದ್ದ ವೈದ್ಯರು ಹಾಗೂ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಕಂಟೇನ್ಮೆಂಟ್ ವಲಯ
ರಿಜೆಂಟಾ ಹೋಟೆಲ್​ನ ಸಿಬ್ಬಂದಿ ಹೆಚ್ಚಾಗಿ ಹೊರಗೆ ಸಂಚಾರ ಮಾಡಿಲ್ಲ. ಹೀಗಾಗಿ ಸೋಂಕಿತನ ಸಂಪರ್ಕದಲ್ಲಿದ್ದ ಹೋಟೆಲ್ ನಿವಾಸಿಗಳನ್ನು ಕ್ವಾರಂಟೇನ್ ಮಾಡಲಾಗಿದೆ. ಆತ ವಾಸವಿದ್ದ ಮನೆಯ 100 ಮೀ. ಪ್ರದೇಶದಲ್ಲಿ ಮಾತ್ರ ಕಂಟೇನ್ಮೆಂಟ್ ಮಾಡಲಾಗುತ್ತಿದೆ.ಆದರೆ, ಇಡೀ ಶಿವಾಜಿನಗರವನ್ನು ಸೀಲ್​ಡೌನ್ ಮಾಡುವ ಚಿಂತನೆಯಿಲ್ಲ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್​ಕುಮಾರ್ ತಿಳಿಸಿದ್ದಾರೆ.
ಹೊಂಗಸಂದ್ರದಲ್ಲಿ ಮತ್ತೆ ಸೋಂಕು
ಹೊಂಗಸಂದ್ರದಲ್ಲಿ ಬಿಹಾರಿ ಕಾರ್ವಿುಕನಿಂದ 30 ಜನರಿಗೆ ಸೋಂಕು ದೃಢಪಟ್ಟಿದ್ದು, ಆತನ ಸಂಪರ್ಕದಲ್ಲಿದ್ದವರು ಇನ್ನು ಮೂರು ದಿನಗಳಲ್ಲಿ ಕ್ವಾರಂಟೇನ್ ಮುಗಿಸಿ ಹೊರಬರಲಿದ್ದಾರೆ. ಈಗ ಅದೇ ವಾರ್ಡ್​ನಲ್ಲಿ ಮತ್ತೊಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. 45 ವರ್ಷದ ಈ ಸೋಂಕಿತ ವ್ಯಕ್ತಿ ಗುಜರಿ ಅಂಗಡಿಯಲ್ಲಿ ಲೋಡಿಂಗ್ ಕೆಲಸ ಮಾಡುತ್ತಿದ್ದ. ಆತನ ಪ್ರ್ರಾಥಮಿಕ ಸಂಪರ್ಕದಲ್ಲಿದ್ದವರು ಹಾಗೂ ಮನೆಯವರನ್ನು ಕ್ವಾರಂಟೈನ್ ಮಾಡಲಾಗಿದೆ.
2 ಲಕ್ಷ ಜನರ ಏರ್​ಲಿಫ್ಟ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
