ಬಳ್ಳಾರಿ/ಬೆಂಗಳೂರು:‘ದೇವರು ಕೊಟ್ಟರೂ ಪೂಜಾರಿ ಕೊಡ’ ಎಂಬ ಮಾತು ರಾಜ್ಯದ ನ್ಯಾಯಬೆಲೆ ಅಂಗಡಿಗಳಿಗೆ ಅನ್ವಯವಾಗುತ್ತದೆ. ಏಕೆಂದರೆ, ಲಾಕ್​ಡೌನ್ ವೇಳೆ ಯಾರೂ ಹಸಿವಿನಿಂದ ಬಳಲಬಾರದು. ಯಾವುದೇ ನಿರ್ಬಂಧಗಳಿಲ್ಲದೆ ಪಡಿತರ ಚೀಟಿದಾ ರರರಿಗೆ 2 ತಿಂಗಳ ಪಡಿತರವನ್ನು ವಿತರಿಸಬೇಕು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ. ಆದರೆ, ರಾಜ್ಯದ ಕೆಲವೆಡೆ ಪಡಿತರದಾರರಿಗೆ ದಾಖಲೆ ಕೊಡಿ, ಒಟಿಪಿ ತೋರಿಸಿ ಎಂದು ಅನಗತ್ಯವಾಗಿ ಕಿರುಕುಳ ನೀಡಲಾಗುತ್ತಿದೆ. ಜತೆಗೆ ಸೋಪು, ಎಣ್ಣೆ, ಅಗರ್​ಬತ್ತಿ ಖರೀದಿಸಿ ಎಂದು ಪೀಡಿಸುತ್ತಿ ರುವುದಲ್ಲದೆ, ಹಣವನ್ನೂ ಪಡೆಯುತ್ತಿರುವ ಬಗ್ಗೆ ದೂರು ಕೇಳಿಬಂದಿವೆ. ಇದರಿಂದಾಗಿ ಕಾರ್ಡ್​ದಾರರು ಕಂಗಾಲಾಗಿದ್ದಾರೆ. ಇನ್ನೊಂದೆಡೆ, ಏ.1ರಿಂದಲೇ ನಗರ ಹಾಗೂ ಗ್ರಾಮೀಣ ಪ್ರದೇಶದ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್ ವಿತರಣೆಗೆ ಸೂಚಿಸಿದ್ದರೂ ಶೆ.30 ಅಂಗಡಿಗಳು ಮುಚ್ಚಿರುವುದು ಆಹಾರ ಪದಾರ್ಥ ವಿತರಣೆಗೆ ಹಿನ್ನಡೆಯಾಗಿದೆ. ರಾಜ್ಯದಲ್ಲಿ ಒಟ್ಟಾರೆ 19867 ನ್ಯಾಯಬೆಲೆ ಅಂಗಡಿಗಳಿದ್ದು, ಈವರೆಗೆ ಶೇ.36.55 ಪಡಿತರ ಹಂಚಿಕೆಯಾಗಿದೆ.
ಜಿಲ್ಲಾವಾರು ಪಡಿತರ ಹಂಚಿಕೆ:ಬಳ್ಳಾರಿ -ಶೇ.56.05, ಕೊಡಗು -51.7, ಮಂಡ್ಯ -50.87, ಉಡುಪಿ -48.07, ದಕ್ಷಿಣ ಕನ್ನಡ -47.82, ಕೋಲಾರ – 47.80, ಕೊಪ್ಪಳ – 47.78, ಗದಗ -47.12, ಬೆಂಗಳೂರು -44, ಹಾವೇರಿ -39.8, ರಾಯಚೂರು -38.47, ದಾವಣಗೆರೆ -36.64, ಚಾಮರಾಜನಗರ -36.47, ಬೆಳಗಾವಿ -35.35, ಬಾಗಲಕೋಟೆ -35.21, ಉತ್ತರ ಕನ್ನಡ -34.28, ತುಮಕೂರು -32.98, ಶಿವಮೊಗ್ಗ -31.82, ಧಾರವಾಡ -31.79, ಚಿಕ್ಕಮಗಳೂರು – 31.69, ಬೀದರ್ -29.91, ಚಿತ್ರದುರ್ಗ -29.66, ಯಾದಗಿರಿ -27.96, ಚಿಕ್ಕಬಳ್ಳಾಪುರ -27.25, ವಿಜಯಪುರ- 24.15, ಬೆಂ.ಗ್ರಾಮಾಂತರ- 23.17, ಕಲಬುರಗಿ -20.73, ಹಾಸನ -ಶೇ. 18.28.
ಪಡಿತರ ಚೀಟಿ ಇಲ್ಲದಿದ್ದರೂ ಸಾರ್ವಜನಿಕರಿಗೆ ಪಡಿತರ ನೀಡುವಂತೆ ಸಿಎಂ ಸೂಚನೆ

ಬಳ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 7 =
Remember me
