ಮಂಡ್ಯ:ಕರೊನಾ ಅಂಟಿರುವ ನಗರ ಪ್ರದೇಶಗಳಿಂದ ಜನತೆ ರಾತ್ರೋರಾತ್ರಿ ತವರೂರಿಗೆ ಬಂದಿದ್ದಾರೆ ಎನ್ನುವ ಮಾಹಿತಿ ಸಿಕ್ಕರೂ ಜಿಲ್ಲೆಯ ಅಧಿಕಾರಿಗಳು ಕ್ಯಾರೆ ಎನ್ನದ ಹಿನ್ನೆಲೆ ಭಾರಿ ದಂಡ ತೆರಬೇಕಾದ ಸನ್ನಿವೇಶ ನಿರ್ವಣವಾಗುತ್ತಿದೆ. ದುಬೈ, ಮುಂಬೈ, ಬೆಂಗಳೂರು ಸೇರಿ ವಿವಿಧೆಡೆಗಳಲ್ಲಿ ನಾಗಮಂಗಲ, ಕೆ.ಆರ್.ಪೇಟೆ, ಮೇಲುಕೋಟೆ ವ್ಯಾಪ್ತಿಯ ಸಾವಿರಾರು ಜನತೆ ಬದುಕು ಕಟ್ಟಿಕೊಂಡಿದ್ದು, ಈ ಪೈಕಿ ಹಲವರು ಸ್ವಗ್ರಾಮಕ್ಕೆ ಹಬ್ಬಗಳು ಹಾಗೂ ಚುನಾವಣೆ ಸಂದರ್ಭದಲ್ಲಿ ಬರುತ್ತಾರೆ. ಯುಗಾದಿಗೆ ಆಗಮಿಸಿದ್ದವರು ವಾಪಸಾಗುವ ವೇಳೆಗೆ ಲಾಕ್​ಡೌನ್ ಆಗಿದ್ದರಿಂದ ಇಲ್ಲೇ ಉಳಿದರು. ನಂತರ ಕೂಡ ಸಾವಿರಾರು ಜನರು ರಾತ್ರಿ ವೇಳೆ, ತರಕಾರಿ ಮತ್ತು ಹಾಲಿನ ವಾಹನಗಳಲ್ಲಿ ಆಗಮಿಸಿ ಮನೆ ಸೇರಿಕೊಂಡಿದ್ದಾರೆ.
ಮನೆ ಮನೆಗೆ ತಿರುಗಿ ವರದಿ ಸಂಗ್ರಹಿಸುತ್ತಿದ್ದ ಆಶಾ ಕಾರ್ಯಕರ್ತರು, ಹೊರಗಿನಿಂದ ಬಂದವರ ಬಗ್ಗೆ ಲೆಕ್ಕ ಬರೆದು ಆರೋಗ್ಯ ಇಲಾಖೆಗೆ ತಲುಪಿಸಿದರು. ಗ್ರಾಪಂ, ಆರೋಗ್ಯ ಇಲಾಖೆ, ತಾಲೂಕು ಆಡಳಿತ ಅಧಿಕಾರಿಗಳು ಅದಕ್ಕೆ ಕ್ಯಾರೆ ಎನ್ನಲಿಲ್ಲ. ಶಿಷ್ಟಾಚಾರಕ್ಕೆ ಮಾಹಿತಿ ಕಲೆ ಹಾಕಿಸಿ, ಕಡತಗಳನ್ನು ಮೂಲೆಗೆ ಎಸೆದಿದ್ದಾರೆ ಎನ್ನಲಾಗುತ್ತಿದೆ. ವರದಿ ಆಧಾರದ ಮೇಲೆ ಹೊರಗಿನಿಂದ ಬಂದವರನ್ನು ಕ್ವಾರಂಟೈನ್ ಮಾಡಿ, ಗಂಟಲು ದ್ರವ ಪರೀಕ್ಷೆ ಮಾಡಿಸಿದ್ದರೆ, ಸಾಕಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿದ್ದವು. ಆದರೀಗ ಕಾಲ ಮಿಂಚಿಹೋಗಿದೆ.
ಇದನ್ನೂ ಓದಿ:ಮುಂಬೈ ಟು ಮಂಡ್ಯ ಶವ ಸಾಗಣೆ ತಂದ ಆಪತ್ತು: ಆಂಬ್ಯುಲೆನ್ಸ್ ಜತೆಗೇ ಬಂತು ಸೋಂಕು, ರಾಜಕೀಯ ಮೇಲಾಟಕ್ಕೂ ಸಾಕ್ಷಿಯಾಯ್ತು!
ತಬ್ಲಿಘಿಗಳು ಸೋಂಕು ಅಂಟಿಸಿರುವ ಮಳವಳ್ಳಿ ಮೇಲೆ ಎಲ್ಲರ ಕಣ್ಣುನೆಟ್ಟಿದೆ. ಅದಕ್ಕೆ ಕಾರಣ, ಜಿಲ್ಲೆಯಲ್ಲಿ ಸೋಂಕು ದೃಢಪಟ್ಟಿರುವ 26 ಪ್ರಕರಣಗಳ ಪೈಕಿ 19 ಅಲ್ಲಿನವು. ನಂತರ ನಂಜನಗೂಡು ಜುಬಿಲೆಂಟ್ ಕಾರ್ಖಾನೆ ನಂಟಿನಿಂದ ಮಂಡ್ಯದಲ್ಲಿ 2 ಪ್ರಕರಣಗಳು ಬಂದವು. ನಾಲ್ವರು ಗುಣಮುಖರಾದರು ಎಂದು ನಿಟ್ಟುಸಿರು ಬಿಡುವ ನಡುವೆಯೇ ಮುಂಬೈ ಮೂಲಕ ನಂಜು ಬಂದು ಬೀಡುಬಿಟ್ಟಿದೆ. ಸೋಂಕಿತರನ್ನು ಪರೀಕ್ಷೆಗೆ ಒಳಪಡಿಸಿದಾಗ ರೋಗ ಲಕ್ಷಣಗಳೇ ಕಂಡಿರಲಿಲ್ಲ. ಆದರೂ ಸೋಂಕು ದೃಢಪಟ್ಟಿದ್ದು, ಆತಂಕ ಮೂಡಿಸಿದೆ. ಇನ್ನು ಎಷ್ಟು ಜನರು ಸೋಂಕು ಹೊತ್ತು ತಂದಿದ್ದಾರೆ. ಅವರು ಯಾರ್ಯಾರಿಗೆ ಹಂಚಿದ್ದಾರೋ ಗೊತ್ತಿಲ್ಲ. ಎಲ್ಲರನ್ನು ಪರೀಕ್ಷೆ ಮಾಡಿಸಿದಲ್ಲಿ ಸಂಖ್ಯೆ ನೂರಾಗಬಹುದು, ಇನ್ನೂರಾಗಬಹುದು.
ಲಾಕ್​ಡೌನ್ ಜಾರಿಯಾದ ನಂತರ ಕೆ.ಆರ್.ಪೇಟೆ ತಾಲೂಕಿಗೆ 16,877 ಜನರು ಆಗಮಿಸಿದ್ದಾರೆ. ಈ ಪೈಕಿ 29 ಜನ ದುಬೈನಿಂದ ಆಗಮಿಸಿದ್ದರೆ, ಮುಂಬೈನಿಂದ 163, ಬೆಂಗಳೂರಿನಿಂದ 13,353 ಜನ ಸೇರಿ ಮೈಸೂರು, ಹಾಸನ, ತುಮಕೂರು ಮೊದಲಾದ ಕಡೆಗಳಿಂದ ಇಷ್ಟು ಜನ ಆಗಮಿಸಿದ್ದಾರೆ.
ಮಂಡ್ಯ ಜಿಲ್ಲೆಗೆ ಹೊರಗಿನಿಂದ ಬಂದವರನ್ನು ಪತ್ತೆ ಹಚ್ಚುವ ಜವಾಬ್ದಾರಿಯನ್ನು ಶಿಕ್ಷಕರಿಗೆ ನೀಡಿ ವರದಿ ತರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸಚಿವ ನಾರಾ ಯಣಗೌಡ ಸೂಚಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − two =
Remember me
