ಮೈಸೂರು:ಚೀನಾ ದೇಶದಿಂದ ವಾಪಸ್ ಬಂದ ವಿದ್ಯಾರ್ಥಿಗೆ ಕರೊನ ಇದೆ ಎಂದು ವದಂತಿ ಹಬ್ಬಿಸಿದ ಗ್ರಾಮಸ್ಥರ ನಡೆಗೆ ವಿದ್ಯಾರ್ಥಿ ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿ ಪವನ್ ಚೀನಾಗೆ ಎಂಬಿಬಿಎಸ್ ಮಾಡಲು ತೆರಳಿದ್ದ. ಮನೆಗೆ ವಾಪಸ್ ಬಂದಿದ್ದ ವಿದ್ಯಾರ್ಥಿಯನ್ನು 14 ದಿನ ಮನೆಯಿಂದ ಹೊರಗೆ ಹಾಗೂ 14 ದಿನ ಮನೆಯಲ್ಲೇ ಪ್ರತ್ಯೇಕವಾಗಿ ಪಾಲಕರು ಇರಿಸಿದ್ದರು. ಪವನ್​ ಕೂಡ ಮನೆಯ ಒಬ್ಬರನ್ನೂ ಮುಟ್ಟದೆಯೇ 28 ದಿನ ಕಳೆದಿದ್ದ. ಮನೆಯ ಹೊರಗಡೆಯೇ ಮಗನನ್ನು ಇರಿಸಿ ಊಟ-ತಿಂಡಿಕೊಟ್ಟು ಪಾಲಕರು ಸಲಹಿದ್ದರು.
ನಾನು ಒಬ್ಬ ವೈದ್ಯಕೀಯ ವಿದ್ಯಾರ್ಥಿಯಾಗಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೇನೆ. ನಾನು ಬಂದು ಒಂದೂವರೆ ತಿಂಗಳು ಕಳೆದಿದೆ. ನನಗೆ ಯಾವುದೇ ತೊಂದರೆ ಆಗಿಲ್ಲ. ನಾಲ್ಕೂವರೆ ವರ್ಷ ನಾನು ಚೀನಾದಲ್ಲೇ ವ್ಯಾಸಂಗ ಮಾಡಿದ್ದೇನೆ. ನಾನಿದ್ದ ಸ್ಥಳಕ್ಕೆ ವುಹಾನ್ ನಗರ ಬಹಳ‌ ದೂರದಲ್ಲಿ ಇತ್ತು. ನಾನು ವಾಪಸ್ ಬರುವಾಗ ನಾನಿದ್ದ ನಗರದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಪವನ್​ ತಿಳಿಸಿದ್ದಾರೆ.
ಜನರೇಕೆ ಈ ರೀತಿ ವದಂತಿ ಹಬ್ಬಿಸುತ್ತಿದ್ದಾರೋ ಗೊತ್ತಿಲ್ಲ. ಆದರೆ ಅಧಿಕಾರಿಗಳ ಮುಂದೆ ಎಲ್ಲವನ್ನು ಹೇಳಿದ್ದೇವೆ. ಯಾವುದೇ ಸಮಸ್ಯೆ ಇಲ್ಲ ಎಂದು ಪವನ್​, ತಾಯಿ ಲಕ್ಷ್ಮಿ ಹಾಗೂ ತಂದೆ ಚನ್ನನಾಯಕ ದಿಗ್ವಿಜಯ ನ್ಯೂಸ್​ಗೆ ಹೇಳಿಕೆ ನೀಡಿದ್ದಾರೆ.
ಕೆಲವೇ ದಿನಗಳಲ್ಲಿ ಮದುವೆ ಆಗಲಿರುವ ವಧುವಿನ ಫೇಸ್​ಬುಕ್​ ಪೋಸ್ಟ್​ ನೋಡಿ ರೊಚ್ಚಿಗೆದ್ದ ನೆಟ್ಟಿಗರು!

ನಾನು ಕರೊನಾ ಸೋಂಕಿತರನ್ನು ಗುಣಪಡಿಸುತ್ತೇನೆ ಎನ್ನುತ್ತಿದ್ದ ಕರೊನಾ ಬಾಬ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
