ಬೆಂಗಳೂರು:ಕರ್ನಾಟಕದಲ್ಲಿ ಕರೊನಾ ಭೀಕರತೆ ಹೆಚ್ಚಾಗುತ್ತಿದೆ. ಪುಟ್ಟ ಮಗುವಿನಿಂದ ಹಿಡಿದು, ವೃದ್ಧರವರೆಗೆ ಸೋಂಕು ತಗುಲಿತ್ತಿದೆ.
ಸರ್ಕಾರ ವಿದೇಶದಿಂದ ಬಂದವರಿಗೆಲ್ಲ ಕಡ್ಡಾಯವಾಗಿ ಹೋಂ ಕ್ವಾರಂಟೈನ್​ ವಿಧಿಸಿದೆ. 14ದಿನ ಮನೆ ಬಿಟ್ಟು ಹೊರಗೆ ಬರಲೇಬೇಡಿ ಎಂದು ಆದೇಶ ನೀಡಿದೆ. ಹಾಗೇ ಯಾರಲ್ಲಾದರೂ ಕರೊನಾ ದೃಢಪಟ್ಟರೆ, ಅವರ ಸಂಪರ್ಕಕ್ಕೆ ಬಂದವರನ್ನೆಲ್ಲ ಟ್ರ್ಯಾಕ್​ ಮಾಡುತ್ತಿದೆ.
ಸದ್ಯ ರಾಜ್ಯಾದ್ಯಂತ ಯಾವ ಯಾವ ಏರಿಯಾದಲ್ಲಿ ಎಷ್ಟು ಮಂದಿ ಈ ಹೋಂ ಕ್ವಾರಂಟೈನ್​ನಲ್ಲಿ ಇದ್ದಾರೆ ಎಂಬುದನ್ನುhttps://www.quarantime.in/ವೆಬ್​ಸೈಟ್​ ಮೂಲಕ ತಿಳಿದುಕೊಳ್ಳಬಹುದು. ಆದರೆ ಇದಕ್ಕೆ ಆಯಾ ಪ್ರದೇಶದ ಪಿನ್​ಕೋಡ್​ ಗೊತ್ತಿರಬೇಕು. ಉಳಿದ ಪ್ರದೇಶಗಳು ಬಿಡಿ ನಿಮ್ಮ ಏರಿಯಾದ ಪಿನ್​ಕೋಡ್​ ಹಾಕಿ ಪರಿಶೀಲನೆ ಮಾಡಿಕೊಳ್ಳಿ.
https://www.quarantime.in/ಮೇಲೆ ಕ್ಲಿಕ್​ ಮಾಡುತ್ತಿದ್ದಂತೆ, ನಿಮ್ಮ ಏರಿಯಾದ ಪಿನ್​ಕೋಡ್​ ನಮೂದಿಸಿ ಎಂದು ಬಿಳಿಬಣ್ಣದ ಬಾರ್​ ಕಾಣಿಸುತ್ತದೆ. ಅದರ ಮೇಲೆ ಪಿನ್​ಕೋಡ್ ಟೈಪ್​ ಮಾಡಿ. ಹಾಗೇ ಅದರ ಮುಂದೆ ಇರುವ ಹಸಿರು ಮಾರ್ಕ್​ ಮೇಲೆ ಕ್ಲಿಕ್​ ಮಾಡಿ. ಆಗ  ಅಲ್ಲೇ ಕೆಳಗಡೆ ನಿಮ್ಮ ಏರಿಯಾದಲ್ಲಿ ಕ್ವಾರಂಟೈನ್​ನಲ್ಲಿ ಇರುವವರ ಸಂಖ್ಯೆ ಕೆಂಪುಬಣ್ಣದಲ್ಲಿ ಗೋಚರಿಸುತ್ತದೆ.
ಮತ್ತೆ ಹೆಚ್ಚಿನ ಮಾಹಿತಿ (More Details) ಮೇಲೆ ಕ್ಲಿಕ್ ಮಾಡಿದರೆ ಕ್ವಾರಂಟೈನ್​ನಲ್ಲಿ ಇರುವವರ ಪ್ರಯಾಣದ ಹಿಸ್ಟರಿ, ಎಷ್ಟುದಿನದಿಂದ ಇದ್ದಾರೆ ಎಂಬಿತ್ಯಾದಿ ವಿವರವೂ ಗೋಚರಿಸುತ್ತದೆ.
ಕರ್ನಾಟಕದ ಸರ್ಕಾರ ಸರ್ವೇ ಮಾಡಿದಾಗ ದೊರೆತ ಸಂಖ್ಯೆಗಳನ್ನು ಆಧರಿಸಿ ಈ ಟ್ರ್ಯಾಕ್​ ವೆಬ್​ಸೈಟ್​​ ರೂಪಿಸಲಾಗಿದೆ ಎನ್ನಲಾಗಿದೆ.
ನೀವೂ ನಿಮ್ಮ ಏರಿಯಾದ ಪಿನ್​ ಕೋಡ್​ ಹಾಕಿ..ಎಷ್ಟು ಜನರು ಇದ್ದಾರೆ ಎಂಬುದನ್ನು ನೋಡಿ. ಮುಂಜಾಗ್ರತೆ ವಹಿಸಿ. ಹಾಗೇ..ಯುವಕಮಂಡಳ, ಆಶಾಕಾರ್ಯಕರ್ತೆಯರ ಮೂಲಕ ನಿಮ್ಮ ಸುತ್ತಮುತ್ತ ಇರುವ ಜನರಿಗೂ ಜಾಗೃತಿ ಮೂಡಿಸಿ.
ಈ ಮೂರು ರಾಜ್ಯಗಳಿಗೆ ಅಲ್ಲು ಅರ್ಜುನ್ ಕೊಟ್ಟ ದೇಣಿಗೆ ಎಷ್ಟು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
