ಬೆಂಗಳೂರು:ದಿನಕಳೆದಂತೆ ರಾಜ್ಯದಲ್ಲಿ ಕರೊನಾ ಮಹಾಮಾರಿಯ ಆತಂಕ ಹೆಚ್ಚುತ್ತಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 150ರ ಗಡಿದಾಟಿದೆ. ಭಾನುವಾರ ಒಂದೇ ದಿನ ಹೊಸದಾಗಿ 7 ಜನರಲ್ಲಿ ಸೋಂಕು ದೃಢಪಟ್ಟ ಬಳಿಕ ಸೋಂಕಿತರ ಸಂಖ್ಯೆ 151ಕ್ಕೆ ಏರಿಕೆಯಾಗಿದೆ. ಇದರಲ್ಲಿ ನಾಲ್ವರು ಮೃತಪಟ್ಟಿದ್ದು, 12 ಮಂದಿ ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ. ಉಳಿದಿರುವ 135 ಸೋಂಕಿತರಲ್ಲಿ ಓರ್ವ ಗರ್ಭಿಣಿ ಸಹ ಸೇರಿದ್ದು, ಎಲ್ಲರನ್ನು ಪ್ರತ್ಯೇಕ ವಾರ್ಡ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೂವರನ್ನು ತುರ್ತು ನಿಗಾ ಘಟಕದಲ್ಲಿರಿಸಲಾಗಿದೆ. ರೋಗಿ-43, ರೋಗಿ-101 ಮತ್ತು ರೋಗಿ-102 ಅವರನ್ನು ವೆಂಟಿಲೇಟರ್​ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ
ಹೊಸ ಪ್ರಕರಣಗಳು
ರೋಗಿ-145, 146
ಬೆಂಗಳೂರಿನ 68 ವರ್ಷದ ವೃದ್ಧ ಹಾಗೂ ಇವರ 62 ವರ್ಷದ ಪತ್ನಿಗೆ ಸೋಂಕು ತಗುಲಿದೆ. ದುಬೈಗೆ ಪ್ರಯಾಣ ಬೆಳೆಸಿ ಇವರು ಮಾ.22ರಂದು ಬೆಂಗಳೂರಿಗೆ ಹಿಂದಿರುಗಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಆಕಾಶ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ
ರೋಗಿ-147, 148, 149
36 ವರ್ಷದ ಮಹಿಳೆ, 40 ವರ್ಷದ ವ್ಯಕ್ತಿ ಹಾಗೂ 67 ವರ್ಷದ ವೃದ್ಧೆ.. ಈ ಮೂವರೂ ಬೆಳಗಾವಿಯ ರಾಯಬಾಗ್​ನವರಾಗಿದ್ದು, ದೆಹಲಿಯ ತಬ್ಲಿಘಿ ಜಮಾತ್ ಧರ್ಮಸಭೆಯಲ್ಲಿ ಭಾಗವಹಿಸಿದ್ದರು.
ರೋಗಿ-150
ಬೆಳಗಾವಿಯ 41 ವರ್ಷದ ಮಹಿಳೆ ಕೂಡ ದೆಹಲಿಯ ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದರು
ರೋಗಿ-151
ಬಳ್ಳಾರಿ 41 ವರ್ಷ ವ್ಯಕಿ ಸಹ ದೆಹಲಿಯ ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗವಹಿಸಿ ವಾಪಸ್ಸಾಗಿದ್ದರು.
ದೇಶಾದ್ಯಂತ 4 ಸಾವಿರಕ್ಕೇರಿಕೆ
ಒಟ್ಟಾರೆ ದೇಶದಲ್ಲಿ ಕರೊನಾ ಸೋಂಕು ಪೀಡಿತರ ಸಂಖ್ಯೆ 4,182ಕ್ಕೆ ಏರಿಕೆ ಯಾಗಿದೆ. ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 500ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. 19 ಜನರು ಸಾವನ್ನಪ್ಪಿದ್ದು ಮೃತರ ಸಂಖ್ಯೆ 118ಕ್ಕೆ ಏರಿಕೆಯಾಗಿದೆ.
ಲಾಕ್​ಡೌನ್ ವಿಸ್ತರಣೆ?
ರಾಜ್ಯದಲ್ಲಿ ಕರೊನಾಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಲಾಕ್​ಡೌನ್ ಉಲ್ಲಂಘಿಸುವವರ ಸಂಖ್ಯೆಯೂ ಮಿತಿಮೀರುತ್ತಿದೆ. ಲಾಕ್​ಡೌನ್ ಪರಿಣಾಮಕಾರಿಯಾಗಿ ಅನುಷ್ಠಾನ ಆಗದಿದ್ದರೆ ದಿಗ್ಬಂಧನ ಇನ್ನಷ್ಟು ವಿಸ್ತರಣೆ ಆಗುವ ಸಾಧ್ಯತೆ ಇದೆ.
| ಯಡಿಯೂರಪ್ಪ ಮುಖ್ಯಮಂತ್ರಿ

https://www.vijayavani.net/pm-narendra-modi-lighting-lamps-coronavirus-covid-19-pandemic-infection-lights-pm-modi/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
