ಅಥಣಿ(ಬೆಳಗಾವಿ): ಕರೊನಾವೈರಸ್ ಹರಡದಂತೆ ನಿಯಂತ್ರಿಸಲು ನಮ್ಮ ದೇಶದಲ್ಲೇ ಚುಚುಮದ್ದು ಇದ್ದು, ಅದನ್ನು ಸಮರ್ಪಕವಾಗಿ ಬಳಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ಪಟ್ಟಣದ ಖಾಸಗಿ ವೈದ್ಯ, ಕಾನ್ಸರ್ ತಜ್ಞ ಡಾ.ರಮೇಶ ಗುಳ್ಳ ತಿಳಿಸಿದ್ದಾರೆ. ತಮ್ಮ ಆಸ್ಪತ್ರೆಯಲ್ಲಿ ಮಾಧ್ಯಮದವರ ಎದುರು ಕುಟುಂಬದವರೆಲ್ಲರಿಗೂ ಎಂಆರ್ ಅಥವಾ ಎಂಎಂಆರ್ (ಮಿಜಲ್ಸ್ ಮಮ್ಸ್​ ರುಬೊಲಾ) ಚುಚ್ಚುಮದ್ದು ನೀಡುವ ಮೂಲಕ ಮಾಹಿತಿ ನೀಡಿದರು.
ಕರೊನಾ ವೈರಾಣುವಿನಂತೆಯೇ ಇರುವ ರುಬೊಲಾ ಎಂಬ ಇನ್ನೊಂದು ಹಳೇ ವೈರಾಣುವಿಗೆ ಇದರ ಶೇ.30 ಹೋಲಿಕೆ ಇರುವುದು ಗೊತ್ತಾಗಿದೆ. ಹೀಗಾಗಿ ರುಬೊಲಾ ರೋಗ ಬಾರದಂತೆ ತಡೆಯಲು 1971ರಿಂದಲೇ ಭಾರತದಲ್ಲಿ ಲಭ್ಯವಿರುವ ಎಂಆರ್ ಅಥವಾ ಎಂಎಂಆರ್ ಲಸಿಕೆ ನೀಡಿದರೆ ಸೋಂಕು ತಗಲುವುದನ್ನು ಮೊದಲೇ ತಡೆಯಬಹುದು. ಅಲ್ಲದೆ, ಈ ಚುಚ್ಚುಮದ್ದಿನಿಂದ ಕರೊನಾ ರೋಗಿ ಮರಣ ಹೊಂದುವುದನ್ನು ತಪ್ಪಿಸಬಹುದಾಗಿದೆ ಎಂದರು. ಈ ಚುಚುಮದ್ದು ದೇಶದ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಯಾರೂ ಇದನ್ನು ಸದುಪಯೋಗ ಪಡಿಸಿಕೊಂಡಿಲ್ಲ ಎಂದರು.
ಇದನ್ನೂ ಓದಿಕರೊನಾದಿಂದ ತತ್ತರಿಸಿಹೋಗಿವೆ ಭಯೋತ್ಪಾದಕ ಶಿಬಿರಗಳು
150 ರೂ. ವೆಚ್ಚ:ಸರ್ಕಾರ ಕರೊನಾ ಸಲುವಾಗಿ ದುಂದುವೆಚ್ಚ ಮಾಡುವ ಬದಲು ಕೇವಲ 150 ರೂ.ಗೆ ಲಭ್ಯವಿರುವ ಈ ಲಸಿಕೆಯನ್ನು ಸಮರ್ಪಕವಾಗಿ ಎಲ್ಲರಿಗೂ ನೀಡಿದರೆ ದೇಶವನ್ನು ಕರೊನಾಮುಕ್ತಗೊಳಿಸಬಹುದು. ಈ ಚುಚ್ಚುಮದ್ದಿನಿಂದ ಯಾವುದೇ ಅಡ್ಡಪರಿಣಾಮ ಇಲ್ಲ. ಈಗಾಗಲೆ ರಾಜ್ಯ ಸರ್ಕಾರದ ಗಮನಕ್ಕೂ ತಂದಿರುವುದಾಗಿ ತಿಳಿಸಿದರು.
ಐಸಿಸಿಯಲ್ಲೂ ಶುರುವಾಗುತ್ತಾ ‘ದಾದಾ’ಗಿರಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 4 =
Remember me
