ಕಲಬುರಗಿ:ಈಗ ಸಹಜವಾಗಿ ಕೆಮ್ಮು, ಸೀನು ಬಂದರೂ ಕರೊನಾ ಇರಬಹುದು ಎಂಬ ಶಂಕೆಯೇ ಕಾಡುತ್ತಿದೆ. ಜನ ಅಷ್ಟರಮಟ್ಟಿಗೆ ಕರೊನಾ ಆತಂಕದಲ್ಲಿ ಇದ್ದಾರೆ. ನಮ್ಮ ಬಳಿ ನಿಂತಿದ್ದವರು ಯಾರಾದರೂ ಕೆಮ್ಮಿದರೂ ನಮಗೆ ಭಯವಾಗುತ್ತದೆ.
ಈ ಕರೊನಾ ಶಂಕೆಯಿಂದ ರೈಲಿನಿಂದ ಪ್ರಯಾಣಿಕನೋರ್ವನನ್ನು ಕೆಳಗೆ ಇಳಿಸಿದ ಘಟನೆ ಕಲಬುರಗಿಯ ಸೇಡಂ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಹೈದರಾಬಾದ್​ನಿಂದ ಮುಂಬೈಗೆ ಹೊರಟಿದ್ದ ಹುಸೇನ್​ಸಾಗರ್​ ಎಕ್ಸ್​ಪ್ರೆಸ್​ ರೈಲಿನಲ್ಲಿ ತೆಲಂಗಾಣದ ರಾಜ್ಯದ ಮೆಹಬೂಬ ನಗರ ನಿವಾಸಿ ನಾಗೇಶ ಕೃಷ್ಣಪ್ಪ ಎಂಬುವರು ಪ್ರಯಾಣಿಸುತ್ತಿದ್ದರು. ಪುಣೆಗೆ ತೆರಳುತ್ತಿದ್ದ ಅವರು ಕೆಮ್ಮುತ್ತಿದ್ದರು. ಅಲ್ಲದೆ, ಅಸ್ವಸ್ಥರಾದಂತೆ ಕಾಣುತ್ತಿದ್ದರು.
ನಾಗೇಶ ಕೃಷ್ಣಪ್ಪ ಅವರಿಗೆ ಕರೊನಾ ಇರಬೇಕು ಎಂದು ಭಾವಿಸಿದ ಸಹಪ್ರಯಾಣಿಕರು ಆತಂಕಗೊಂಡು ಸೇಡಂ ರೈಲು ನಿಲ್ದಾಣದಲ್ಲಿ ಕೆಳಗಿಳಿಸಿ, ಸಿಆರ್​ಪಿಎಫ್​ ಸಿಬ್ಬಂದಿ ವಶಕ್ಕೆ ಆತನನ್ನು ಒಪ್ಪಿಸಿದ್ದಾರೆ.
ಬಳಿಕ ಸೇಡಂ ಸರ್ಕಾರಿ ಆಸ್ಪತ್ರೆ ವೈದ್ಯರು ತಪಾಸಣೆ ನಡೆಸಿದ್ದು, ನಾಗೇಶ್​ ಕೃಷ್ಣಪ್ಪಗೆ ಕರೊನಾ ಸೋಂಕು ಇಲ್ಲ ಎಂದು ಹೇಳಿದ್ದಾರೆ. ಸದ್ಯ ಅವರಿಗೆ ಸೇಡಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಷ್ಟ್ರಪತಿ, ಸಂಸತ್​ಗೂ ತಟ್ಟಿದ ಮಹಾಮಾರಿ ಆತಂಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + sixteen =
Remember me
