ಬೆಂಗಳೂರು:ಮಹಾಮಾರಿ ಕರೊನಾ ಇಡೀ ಮಾನವ ಕುಲದ ದೈನಂದಿನ ಚಟುವಟಿಕೆಯನ್ನು ಹ್ಯಾಕ್​ ಮಾಡಿದೆ. ಲಕ್ಷಾಂತರ ಮಂದಿಯನ್ನು ತನ್ನ ಮೃತ್ಯುಕೂಪಕ್ಕೆ ಸೆಳೆದುಕೊಂಡಿರುವ ಡೆಡ್ಲಿ ವೈರಸ್​ಗೆ ಗೇಟ್​ಪಾಸ್​ ನೀಡಲು ಸಾಕಷ್ಟು ಕ್ರಮುಗಳನ್ನು ಅನುಸರಿಸಲಾಗುತ್ತಿದೆ. ಅದರಲ್ಲಿ ಲಾಕ್​ಡೌನ್ ಹಾಗೂ ಸಾಮಾಜಿಕ ಅಂತರ ಬಹುಮುಖ್ಯವಾಗಿದ್ದು, ಈ ಬಗ್ಗೆ ಜನರಿಗೆ ಅರಿವು ಮೂಡಿಸಲು ಸರ್ಕಾರ, ಪೊಲೀಸ್​ ಇಲಾಖೆ ಹಾಗೂ ಮಾಧ್ಯಮಗಳು ಹಗಲಿರುಳು ಶ್ರಮಿಸುತ್ತಿವೆ.
ಜನರನ್ನು ಆಚೆ ಬರದಂತೆ ನೋಡಿಕೊಂಡು ಕರೊನಾ ಹರಡುವಿಕೆಗೆ ಅವಕಾಶ ನೀಡದಂತೆ ಕಟ್ಟೆಚ್ಚರ ವಹಿಸಿರುವ ಪೊಲೀಸ್​ ಇಲಾಖೆಗೆ ಸಲಾಂ ಹೇಳಲೇಬೇಕು. ಜನರ ಕಾಳಜಿಗೆ ಪೊಲೀಸರು ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ನಗರದ ರಾಜರಾಜೇಶ್ವರಿ ನಗರ ಪೊಲೀಸರು ಉದಾಹರಣೆಯಾಗಿ ನಿಂತಿದ್ದಾರೆ. ಲಾಠಿಯನ್ನು ಬದಿಗಿಟ್ಟು ಸಾಮಾಜಿಕ ಅಂತರದ ಅರಿವು ಮೂಡಿಸಲು ಹಾಡೊಂದಕ್ಕೆ ಆರ್​ಆರ್​ ನಗರ ಠಾಣೆಯ ಪೊಲೀಸರು ಹೆಜ್ಜೆ ಹಾಕಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
“ಕರೊನಾ ವಿ ವಿಲ್​​ ಕಿಲ್​ ಯು” ಎಂಬ ಹಾಡಿಗೆ ಠಾಣೆಯ ಸಿಬ್ಬಂದಿಯೆಲ್ಲರೂ ಒಟ್ಟಾಗಿ ನಿಂತು ಸಖತ್​ ಸ್ಟೆಪ್ಸ್​ ಹಾಕುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ವಿನೂತನ ಪ್ರಯತ್ನ ಮಾಡಿದ್ದಾರೆ. ಇಡೀ ಹಾಡಿನಲ್ಲಿ ಕರೊನಾ ಮುಂಜಾಗ್ರತೆ ಕ್ರಮದ ಬಗ್ಗೆ ವಿವರಿಸಲಾಗಿದ್ದು, ಅದನ್ನು ಅಭಿನಯದ ಮೂಲಕ ಪೊಲೀಸ್​ ಸಿಬ್ಬಂದಿ ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ಪೊಲೀಸರೆಂದರೆ ಕೇವಲ ಲಾಠಿ ಹಿಡಿದು ಜನರನ್ನು ಹೆದರಿಸುವುದು ಮಾತ್ರವಲ್ಲ ಅಗತ್ಯವಿದ್ದಾಗ ಜನರ ಕಾಳಜಿಗಾಗಿ ಏನು ಬೇಕಾದರೂ ಮಾಡುತ್ತೇವೆ ಎಂಬುದನ್ನು ನಿರೂಪಿಸಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.
https://www.instagram.com/p/B-1qjZpHz2F/
ರಾಜ್ಯದಲ್ಲಿ ಲಾಕ್​ಡೌನ್​ 2 ವಾರ ವಿಸ್ತರಣೆ; ಮುಂದಿನ ದಿನಗಳಲ್ಲಿ ವಿಭಿನ್ನವಾಗಿರಲಿದೆ: ಸಿಎಂ ಯಡಿಯೂರಪ್ಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
