ಮಂಡ್ಯ:ಭಾರತದಲ್ಲಿ ಕರೊನಾ ವೈರಸ್​ ಸೋಂಕಿತರ ಸಂಖ್ಯೆ 100ರ ಗಡಿ ದಾಟಿದ್ದು ಕರ್ನಾಟಕದಲ್ಲೇ ಎರಡು ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ಓರ್ವ ವೃದ್ಧ ಕರೊನಾ ಸೋಂಕಿನಿಂದಲೇ ಮೃತಪಟ್ಟಿದ್ದಾನೆ. ಹಲವು ಜಿಲ್ಲೆಗಳಲ್ಲಿ ಶಂಕಿತ ಕರೊನಾ ವೈರಸ್ ಸೋಂಕಿತರನ್ನು ಪ್ರತ್ಯೇಕ ವಾರ್ಡ್​ಗಳಲ್ಲಿಟ್ಟು ತಪಾಸಣೆ ಮಾಡಲಾಗುತ್ತಿದೆ.
ಈಗ ಸಕ್ಕರೆ ನಾಡು ಮಂಡ್ಯಕ್ಕೂ ಕರೊನಾ ಭೀತಿ ಎದುರಾಗಿದೆ. 47 ವರ್ಷದ ಮಹಿಳೆಯೋರ್ವರಲ್ಲಿ ಶಂಕಿತ ಸೋಂಕು ಕಾಣಿಸಿಕೊಂಡಿದ್ದು ಅವರನ್ನು ಮಿಮ್ಸ್​ಗೆ ದಾಖಲಿಸಲಾಗಿದೆ.
ಈ ಮಹಿಳೆ ನಾಗಮಂಗಲದವರಾಗಿದ್ದು ಹಜ್​ ಯಾತ್ರೆಗೆ ತೆರಳಿದ್ದರು. ಅಲ್ಲದೆ, ಕಲಬುರಗಿಯಲ್ಲಿ ಕರೊನಾ ಸೋಂಕು ತಗುಲಿ ಮೃತಪಟ್ಟ ವೃದ್ಧ ಪ್ರಯಾಣ ಮಾಡಿದ್ದ ವಿಮಾನದಲ್ಲೇ ಇವರೂ ಪ್ರಯಾಣಿಸಿದ್ದರು. ಹಜ್​ ಯಾತ್ರೆಯಿಂದ ಮಾ.1ರಂದು ವಾಪಸ್​ ಬಂದ ನಂತರ ಅವರಲ್ಲಿ ಸಾಮಾನ್ಯ ಜ್ವರ, ಶೀತ ಕಾಣಿಸಿಕೊಂಡಿತ್ತು. ದಿನ ಕಳೆದಂತೆ ಕಾಯಿಲೆ ಗಂಭೀರವಾಗುತ್ತ ಹೋದ ಪರಿಣಾಮ ಮಿಮ್ಸ್​ಗೆ​  ದಾಖಲು ಮಾಡಲಾಗಿದೆ. ಪ್ರತ್ಯೇಕ ವಾರ್ಡ್​ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಷೇರುಪೇಟೆಯಲ್ಲಿ ಮಹಾಪತನದ ಶಾಕ್​ : ಸೆನ್ಸೆಕ್ಸ್ 2,713 ಅಂಶ ಕುಸಿತ, 9,200ರ ಕೆಳಕ್ಕೆ ಕುಸಿದ ನಿಫ್ಟಿ

ಗ್ರಾಮಸ್ಥರ ಭೀತಿಗೆ ಕಾರಣವಾಗಿದ್ದ ಚಿರತೆ ಕೊನೆಗೂ ಬೋನಿಗೆ ಬಿತ್ತು: ನಾಗರಹೊಳೆ ಅಭಯಾರಣ್ಯಕ್ಕೆ ಚಿರತೆ ರವಾನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
