ಬೆಂಗಳೂರು:ಸದ್ಯದ ಮಟ್ಟಿಗೆ ಸಕಲರಿಗೂ ಕರೋನಾದ್ದೇ ಭೀತಿ. ಇದೇ ಕಾರಣಕ್ಕೆ ಜನರು ಹೊರಹೋಗುವುದನ್ನೂ ಕಡಿಮೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ಗಳು ಬಿಕೋ ಎನ್ನುತ್ತಿವೆ.
ಟ್ರಾಫಿಕ್​ ಪೊಲೀಸರಗಿಂತೂ ಈ ಕರೊನಾ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕರೊನಾ ಹೆಸರು ಹೇಳಿಕೊಂಡು ಕುಡಿದು ಗಾಡಿ ಚಾಲನೆ ಮಾಡುವವರು ಪಾರಾಗುತ್ತಿದ್ದಾರೆ.
ಬೆಂಗಳೂರಿನ ಹಲಸೂರು ರಸ್ತೆಯಲ್ಲಿ ಟ್ರಾಫಿಕ್​ ಪೊಲೀಸರಿಗೆ ಈ ಅನುಭವ ಆಗಿದೆ. ಅಲ್ಲಿ ಸಂಜೆ ಹೊತ್ತು ಡ್ರಿಂಕ್ ಆ್ಯಂಡ್ ಡ್ರೈವ್​ ಪರಿಶೀಲನೆ ನಡೆಸಲಾಗುತ್ತಿತ್ತು. ಆದರೆ ಹಲವರು ಮಷಿನ್​ನ್ನು ಬಾಯಿಯೊಳಗೆ ಇಡಲು ಒಪ್ಪಲೇ ಇಲ್ಲ.
ಅದನ್ನು ಊದುವುದಿಲ್ಲ ಎಂದು ಪಟ್ಟು ಹಿಡಿದ ಘಟನೆ ನಡೆಯಿತು. ಕೆಲವು ಪೊಲಿಸರು ತೋರಿಸಿದ ತಪಾಸಣಾ ಮಷಿನ್​ನ್ನು ಬಾಯಿಯಲ್ಲಿ ಇಟ್ಟು ತಪಾಸಣೆಗೆ ಸಹಕರಿಸಿದರೆ ಒಂದಷ್ಟು ಮಂದಿಯಂತೂ ಖಡಾಖಂಡಿತವಾಗಿ ನಿರಾಕರಿಸುತ್ತಿದ್ದಾರೆ. ಕುಡಿದಿರಬಹುದು ಎಂಬ ಅನುಮಾನವಿದ್ದವರೇ ಮಷಿನ್​ ಬಾಯಿಯಲ್ಲಿ ಇಟ್ಟುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಅಯ್ಯೋ ನಾವಂತೂ ಮಷಿನ್​ ಊದೋದಿಲ್ಲ. ನಮ್ಮನ್ನು ಬಿಟ್ಟುಬಿಡಿ. ನಮಗೂ ಕರೊನಾ ಬಂದರೆ ಕಷ್ಟ ಎಂದು ಬಹುಪಾಲು ವಾಹನ ಚಾಲಕರು ಹೇಳುತ್ತಿದ್ದಾರೆ.
ಅವರಿಗೆ ಧೈರ್ಯ ತುಂಬಿ, ಏನೂ ಆಗೋದಿಲ್ಲ ಎಂದು ಹೇಳಿ ತಪಾಸಣೆ ನಡೆಸುವಷ್ಟರಲ್ಲಿ ಟ್ರಾಫಿಕ್​ ಪೊಲೀಸರು ಹೈರಾಣಾಗುತ್ತಿದ್ದಾರೆ.
ಸಿಂಧಿಯಾ ಪಕ್ಷ ಬಿಟ್ಟು ಹೋದ ಬೆನ್ನಲ್ಲೇ ಆರ್ಥಿಕತೆ ವಿಚಾರವಿಟ್ಟುಕೊಂಡು ಮೋದಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ..

ನಿಮ್ಮ ರಕ್ತನಾಳಗಳು ಉಬ್ಬಿಕೊಂಡಿದೆಯೇ? ಹಾಗಾದರೆ ಇದನ್ನು ಓದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + five =
Remember me
