ಬೆಂಗಳೂರು:ಲಾಕ್​ಡೌನ್ ಸಡಿಲಿಸಿ ಕೇಂದ್ರ ಸರ್ಕಾರ ಅನ್ ಲಾಕ್ 2.0 ಮಾರ್ಗಸೂಚಿ ಪ್ರಕಟಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಕೂಡ ಆದೇಶ ಪ್ರಕಟಿಸಿದೆ. ಶಾಲಾ ಕಾಲೇಜು, ಶೈಕ್ಷಣಿಕ ಕೋಚಿಂಗ್ ಕೇಂದ್ರಗಳನ್ನು ಜುಲೈ 31ರವರೆಗೆ ಆರಂಭಿಸುವಂತಿಲ್ಲ. ದೂರ ಸಂಪರ್ಕ ಅಥವಾ ಆನ್​ಲೈನ್ ಕೋಚಿಂಗ್ ನಡೆಸಲು ಅವಕಾಶವಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರದ ತರಬೇತಿ ಸಂಸ್ಥೆಗಳನ್ನು ಎಸ್​ಒಪಿ ಪ್ರಕಾರ ಜುಲೈ 15ರಿಂದ ತೆರೆಯಬಹುದಾಗಿದೆ. ಅಂತಾರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ಕೇಂದ್ರ ಗೃಹ ಇಲಾಖೆ ಅನುಮತಿ ಹೊರತು ಅವಕಾಶವಿಲ್ಲ. ಇನ್ನೊಂದು ತಿಂಗಳು ಬೆಂಗಳೂರಲ್ಲಿ ಮೆಟ್ರೋ ರೈಲು ಓಡಾಟಕ್ಕೂ ಅವಕಾಶ ನಿರಾಕರಿಸಲಾಗಿದೆ. ಸಿನಿಮಾ ಮಂದಿರ, ಜಿಮ್ , ಸ್ವಿಮ್ಮಿಂಗ್​ಪೂಲ್, ಮನರಂಜನಾ ಕೇಂದ್ರಗಳು, ರಂಗಮಂದಿರ, ಬಾರ್, ಆಡಿಟೋರಿಯಂ, ಸಭಾಂಗಣ, ಸೆಮಿನಾರ್ ಸ್ಥಳಗಳು ತೆರೆಯುವಂತಿಲ್ಲ. ದೊಡ್ಡ ಮಟ್ಟದಲ್ಲಿ ಯಾವುದೇ ಕಾರ್ಯುಕ್ರಮ ನಡೆಸಲು ಅವಕಾಶವಿಲ್ಲ. ಮುಂದಿನ ನಾಲ್ಕು ಭಾನುವಾರುಗಳು ಸಂಪೂರ್ಣ ಕರ್ಫ್ಯೂ ಜಾರಿಯಲ್ಲಿರಲಿದೆ. ಹೊರ ರಾಜ್ಯದಿಂದ ರಾಜ್ಯಕ್ಕೆ ಆಗಮಿಸುವವರು ನಿರ್ದಾಕ್ಷಿಣ್ಯವಾಗಿ ಎಸ್​ಒಪಿ ಪ್ರಕಾರ ನಡೆದುಕೊಳ್ಳಲೇ ಬೇಕಾಗುತ್ತದೆ.
ವಿವಾಹಕ್ಕೆ ಅಡ್ಡಿ ಇಲ್ಲ:ಭಾನುವಾರ ವಿವಾಹ ನಡೆಸಲು ಅಡ್ಡಿ ಇಲ್ಲ. ಮುಂಚಿತವಾಗಿ ದಿನಾಂಕ ನಿಗದಿಯಾಗಿದ್ದರೆ ಆ ದಿನಗಳಂದು ವಿವಾಹಗಳನ್ನು ನಡೆಸಲು ಅಡ್ಡಿ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆಗಸ್ಟ್ 2ನೇ ವಾರದ ವರೆಗಿನ ಎಲ್ಲ ಶನಿವಾರಗಳಂದು ಅಗತ್ಯ ಸೇವೆಯಲ್ಲಿರದ ಸರ್ಕಾರಿ ನೌಕರರಿಗೆ ರಜೆ ನೀಡಲಾಗಿದೆ. 65 ವರ್ಷ ಮೇಲ್ಪಟ್ಟವರು ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯೊಳಗೇ ಇರಬೇಕು. ಆರೋಗ್ಯದ ಕಾರಣಕ್ಕಷ್ಟೆ ಹೊರಬರಬೇಕು.
ಬಫರ್ ಝೋನ್ ಬಗ್ಗೆ ಎಚ್ಚರಿಕೆ
ಕಂಟೈನ್ಮೆಂಟ್ ಝೋನ್​ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಹಾಗೆಯೇ ಜಿಲ್ಲಾಡಳಿತಗಳು ಬಫರ್ ಝೋನ್​ಗಳನ್ನು ಗುರುತಿಸಿ ಅಲ್ಲಿ ನಿಗಾವಹಿಸುವಂತೆ ಸೂಚಿಸ ಲಾಗಿದೆ. ಲಾಕ್ ಮಾಡಲ್ಲ ಅನಗತ್ಯ ಓಡಾಟಕ್ಕೂ ಅವಕಾಶವಿಲ್ಲ!
ಇನ್ನಷ್ಟು ಬಿಗಿ ಕ್ರಮ ಜಾರಿ
ರಾಜ್ಯದಲ್ಲಿ ಮತ್ತೆ ಲಾಕ್​ಡೌನ್ ಜಾರಿಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸರ್ಕಾರ , ಸೀಲ್​ಡೌನ್ ಪ್ರದೇಶಗಳಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳಲಿದೆ. ಹಿರಿಯ ಸಚಿವರ ಜತೆ ಚರ್ಚೆ ನಡೆಸಿರುವ ಸಿಎಂ ಯಡಿಯೂರಪ್ಪ, ಕಂಟೇನ್ಮೆಂಟ್ ವಲಯಗಳಲ್ಲಿ ಇನ್ನಷ್ಟು ಬಿಗಿ ಕ್ರಮಗಳ ಮೂಲಕ ಕರೊನಾ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳಲು ಬಿಬಿಎಂಪಿ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳಿಗೆ ಸೂಚನೆ ನೀಡಿದ್ದಾರೆ. ಸೀಲ್​ಡೌನ್ ನಿಯಮಗಳನ್ನು ಯಾರೇ ಉಲ್ಲಂಘನೆ ಮಾಡಿದರೂ ಅಂತಹವರ ವಿರುದ್ಧ ಮೊಕದ್ದಮೆ ದಾಖಲಿಸುವುದು, ಅಗತ್ಯ ವಸ್ತುಗಳನ್ನು ಪೂರೈಸುವ ಕಡೆ ಗಮನ ಹರಿಸಲಾಗುತ್ತದೆ ಎಂದು ಹಿರಿಯ ಸಚಿವರೊಬ್ಬರು ವಿಜಯವಾಣಿಗೆ ತಿಳಿಸಿದರು.
ಅಶೋಕ್ ಬಗ್ಗೆ ಆಕ್ಷೇಪ:ಸೋಂಕಿತರಿರುವ ಆಸ್ಪತ್ರೆಗೆ ಪಿಪಿಇ ಕಿಟ್ ಸೇರಿ ಯಾವುದೇ ಮುನ್ನೆಚ್ಚರಿಕೆ ಇಲ್ಲದೇ ಹೋದ ಸಚಿವ ಆರ್. ಅಶೋಕ್, ಸಂಸದ ತೇಜಸ್ವಿ ಸೂರ್ಯ ಅವರ ಬಗ್ಗೆ ಅನೇಕ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 3 =
Remember me
