ಬೆಂಗಳೂರು:ಇಡೀ ವಿಶ್ವವನ್ನೇ ಕಂಗೆಡಿಸಿರುವ ಕರೊನಾ ವೈರಸ್ ಹಾವಳಿಗೆ ರಾಜ್ಯ ವಾರದಿಂದೀಚೆಗೆ ಕೋಟ್ಯಂತರ ರೂ. ನಷ್ಟ ಅನುಭವಿಸಿದೆ. ಹೋಟೆಲ್ ಉದ್ಯಮ, ಕಾರ್ಖಾನೆಗಳು, ಬೀದಿ ಬದಿ ವ್ಯಾಪಾರ, ಕೃಷಿ ಉತ್ಪನ್ನಗಳ ಮಾರಾಟದ ವಹಿವಾಟುಗಳು ಪಾತಳಕ್ಕಿಳಿದಿವೆ.
15 ಸಾವಿರ ಕೋಟಿ ರೂ. ನಷ್ಟ: ರಾಜ್ಯದಲ್ಲಿ ಸುಮಾರು 6 ರಿಂದ 7 ಲಕ್ಷ ಸಣ್ಣ ಪ್ರಮಾಣ ಕೈಗಾರಿಕೆಗಳು, 10 ಸಾವಿರ ಮಧ್ಯಮ ಪ್ರಮಾಣದ ಕೈಗಾರಿಕೆಗಳು ಹಾಗೂ 900 ಬೃಹತ್ ಕೈಗಾರಿಕೆಗಳಿವೆ. ಕರೊನಾ ಭಯದಿಂದ ಕಾರ್ವಿುಕರು ಕೆಲಸ ಮಾಡಲು ಬರುತ್ತಿಲ್ಲ. ಕಾರ್ಖಾನೆಗಳಿಗೆ ಕೃಷಿ, ಪರಿಸರ ಹಾಗೂ ಇತರೆ ಮೂಲಗಳಿಂದ ಬರುವ ಕಚ್ಚಾ ಸರಕುಗಳ ಸರಬರಾಜು ನಿಂತಿದ್ದು, ಉತ್ಪಾದನೆ ಕಡಿಮೆಯಾಗಿದೆ. ಜತೆಗೆ ಕಾರ್ಖಾನೆ ಉತ್ಪನ್ನಗಳನ್ನು ಖರೀದಿಸಲು ಮಾರುಕಟ್ಟೆಗಳಲ್ಲಿ ಗ್ರಾಹಕರೇ ಇಲ್ಲವಾಗಿದೆ. ಶೇ.60 ಬೇಡಿಕೆ ಕುಸಿತವಾಗಿದ್ದು, ಇದರಿಂದ ಒಂದು ವಾರದಲ್ಲಿ ಸುಮಾರು 10 ರಿಂದ 15 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಎಫ್​ಕೆಸಿಸಿಐ ಅಧ್ಯಕ್ಷ ಸಿ.ಆರ್. ಜನಾರ್ದನ ತಿಳಿಸಿದ್ದಾರೆ.
ತರಕಾರಿ, ಹೂವು, ಹಣ್ಣು ಹಾಗೂ ಇತರೆ ದಿನಬಳಕೆ ಸಾಮಾಗ್ರಿಗಳ ಮಾರಾಟವೂ ಕá-ಸಿದಿದ್ದು, ವಾರದಲ್ಲಿ 100 ಕೋಟಿ ರೂ.ಗೂ ಅಧಿಕ ನಷ್ಟವಾಗಿದೆ.
ಹೋಟೆಲ್​ಗಳಲ್ಲಿ ಶೇ.70 ಗ್ರಾಹಕರಿಲ್ಲ: ಕರೊನಾ ಭೀತಿಗೆ ಹೋಟೆಲ್ ಉದ್ಯಮ ತತ್ತರಿಸಿದ್ದು, ಗ್ರಾಹಕರ ಸಂಖ್ಯೆ ಶೇ.70 ಇಳಿಕೆಯಾಗಿದೆ. 200 ಕೋಟಿ ರೂ.ಗೂ ಅಧಿಕ ನಷ್ಟವಾಗಿದೆ. ಜತೆಗೆ ಬೀದಿ ಬದಿಯಲ್ಲಿ ಆಹಾರ, ತಿಂಡಿ, ಕತ್ತರಿಸಿದ ಹಣ್ಣು, ಚಹಾ, ಬಜ್ಜಿ-ಬೋಂಡಾ, ಜ್ಯೂಸ್, ಪಾನಿಪೂರಿ ಹಾಗೂ ಚಾಟ್ಸ್ ಅಂಗಡಿಗಳನ್ನು ಪಾಲಿಕೆ ಬಂದ್ ಮಾಡಿದೆ. ನಗರದಲ್ಲಿ ಒಟ್ಟು 10 ಸಾವಿರಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ಉದ್ಯೋಗ ವಂಚಿತರಾಗಿದ್ದಾರೆ.
ಆದಾಯ ಖೋತಾ: ಶಾಪಿಂಗ್ ಮಾಲ್​ಗಳು, ಚಿತ್ರ ಮಂದಿರಗಳು, ಸಭೆ ಸಮಾರಂಭಗಳನ್ನು ಸಂಪೂರ್ಣ ನಿಷೇಧಿಸಿರುವುದರಿಂದ ಸರ್ಕಾರಕ್ಕೆ ನಿತ್ಯ ನೂರಾರು ಕೋಟಿ ರೂ. ಆದಾಯ ನಷ್ಟವಾಗುತ್ತಿದ್ದು, ದೇವಾಲಯಗಳು ಬಂದ್ ಆಗಿರá-ವುದರಿಂದ ಅಲ್ಲಿನ ಆದಾಯವೂ ಬಹುತೇಕ ಕುಸಿದಿದೆ.
ನಿಖಿಲ್ ಅದ್ದೂರಿ ಮದುವೆಗೆ ತಣ್ಣೀರು
ರಾಜಕೀಯವಾಗಿ ಜನ್ಮ ನೀಡಿದ ಜಿಲ್ಲೆಯ ಜನತೆ ಎದುರು ಮಗನ ಮದುವೆ ಮಾಡಬೇಕೆಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕನಸಿಗೆ ಕರೊನಾ ಅಡ್ಡಿಯಾಗಿದೆ. ದಿನದಿಂದ ದಿನಕ್ಕೆ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಜಾನಪದ ಲೋಕದ ಬಳಿ ಏ.17ರಂದು ನಡೆಯಬೇಕಿದ್ದ ಮದುವೆ ಎರಡೂ ಕುಟುಂಬಗಳ ಸುಮಾರು 100 ಸದಸ್ಯರ ಸಮ್ಮುಖದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಬುಧವಾರದಿಂದಲೇ ಸಿದ್ಧತೆ ಸ್ಥಗಿತಗೊಳಿಸಿರುವ ಸಿಬ್ಬಂದಿ ಸಾಮಗ್ರಿಗಳನ್ನು ಬೇರೆಡೆಗೆ ಶಿಫ್ಟ್ ಮಾಡುತ್ತಿದ್ದಾರೆ. ಮದುವೆ ಅದ್ದೂರಿಯಾಗಿ ಆಗುತ್ತಿಲ್ಲ, ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆಯಲಿದ್ದು, ಹೊರಗಿನವರನ್ನು ಕರೆಯುತ್ತಿಲ್ಲ ಎಂದು ಅನಿತಾ ಕುಮಾರಸ್ವಾಮಿ ತಿಳಿಸಿದ್ದಾರೆ.
ಕರೊನಾ ಸೋಂಕಿತರ ಪತ್ತೆಗಾಗಿ ವಿದೇಶದಿಂದ ಆಗಮಿಸಿದ ಪ್ರಯಾಣಿಕರ ಬಲಗೈ ಮೇಲೆ ಸ್ಟಾಂಪ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
