ಬೆಂಗಳೂರು:ಕರ್ನಾಟಕದಲ್ಲಿ ಸೋಮವಾರ ಮೊದಲ ಕರೊನಾ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಮಂಗಳವಾರ ಮತ್ತೆ ಮೂರು ಪ್ರಕರಣಗಳು ಬೆಳಕಿಗೆ ಬಂದಿರುವುದು ರಾಜ್ಯವನ್ನು ಆತಂಕಕ್ಕೆ ತಳ್ಳಿದೆ. 24 ಗಂಟೆಯಲ್ಲಿ ನಾಲ್ವರಿಗೆ ಸೋಂಕು ಕಾಣಿಸಿಕೊಂಡ ಬಳಿಕ ಸಮರೋಪಾದಿಯಲ್ಲಿ ಕಾರ್ಯಾಚರಣೆಗಿಳಿದಿರುವ ಆರೋಗ್ಯ ಇಲಾಖೆ ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದಲ್ಲಿ ವೈರಸ್ ಹರಡದಂತೆ ಮತ್ತಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದು ರಾಜ್ಯದ ಜನತೆಗೆ ಭರವಸೆ ತುಂಬಿದ್ದಾರೆ. ಅಮೆರಿಕದಿಂದ ವಾಪಸಾಗಿದ್ದ ವೈಟ್​ಫೀಲ್ಡ್ ಸಮೀಪದ 46 ವರ್ಷದ ಟೆಕ್ಕಿಯಲ್ಲಿ ಕರೊನಾ ಸೋಂಕು ದೃಢಪಟ್ಟಿತ್ತು. ಇದೀಗ 47 ವರ್ಷದ ಆತನ ಪತ್ನಿ ಮತ್ತು 13 ವರ್ಷದ ಮಗಳಿಗೂ ಸೋಂಕು ದೃಢಪಟ್ಟಿದೆ. ಮತ್ತೊಂದು ಪ್ರಕರಣದಲ್ಲಿ ಅಮೆರಿಕದಿಂದಲೇ ವಾಪಸಾಗಿರುವ 50 ವರ್ಷದ ಟೆಕ್ಕಿಯಲ್ಲೂ ಕರೊನಾ ತಗುಲಿರುವುದು ದೃಢಪಟ್ಟಿದೆ.
ನಾಲ್ವರನ್ನೂ ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ವೈಟ್​ಫೀಲ್ಡ್ ಟೆಕ್ಕಿಯ ಪತ್ನಿ, ಮಗಳು ಹಾಗೂ ಸಹೋದ್ಯೋಗಿ ಸೇರಿದಂತೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದ 60 ಮಂದಿಯ ಸ್ವಾ್ಯಬ್ ಮತ್ತು ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ ಪತ್ನಿ ಮತ್ತು ಮಗಳಿಗೆ ಮಾತ್ರ ಸೋಂಕು ಇರುವುದು ಮಂಗಳವಾರ ಸಿಕ್ಕಿರುವ ವರದಿಯಿಂದ ತಿಳಿದು ಬಂದಿದೆ.
ಟೆಕ್ಕಿಯಲ್ಲಿ ಸೋಂಕು ದೃಢಪಡುತ್ತಲೇ ಆತನ ಸಂಪರ್ಕ ಹೊಂದಿದ್ದ 2,666 ಮಂದಿಯ ಮಾಹಿತಿ ಕಲೆಹಾಕಿರುವ ಆರೋಗ್ಯ ಇಲಾಖೆ, ಎಲ್ಲರ ತಪಾಸಣೆ ಕಾರ್ಯ ಕೈಗೊಂಡಿದೆ. ಇವರಲ್ಲಿ ಟೆಕ್ಕಿ ಮಗಳು ಕಲಿಯುತ್ತಿದ್ದ ಶಾಲೆಯ ವಿದ್ಯಾರ್ಥಿಗಳೂ ಸೇರಿದ್ದಾರೆ. ಈವರೆಗೂ ತಪಾಸಣೆಗೆ ಒಳಗಾದವರಲ್ಲಿ ಇಬ್ಬರಿಗೆ ಮಾತ್ರ ರೋಗ ಲಕ್ಷಣ ಕಾಣಿಸಿಕೊಂಡಿದ್ದು, ಅವರನ್ನು ನಿಗಾದಲ್ಲಿ ಇರಿಸಲಾಗಿದೆ.
ಮತ್ತೊಬ್ಬ ಟೆಕ್ಕಿಗೂ ಸೋಂಕು
ಬೆಂಗಳೂರಿನ ಬಿಟಿಎಂ ಲೇಔಟ್​ನ 50 ವರ್ಷದ ಟೆಕ್ಕಿಯಲ್ಲೂ ಸೋಂಕು ದೃಢಪಟ್ಟಿದೆ. ಅಮೆರಿಕ ಹಾಗೂ ಲಂಡನ್ ಪ್ರವಾಸ ಮುಗಿಸಿ ಭಾನುವಾರ (ಮಾ.8ಕ್ಕೆ) ಸಂಜೆ 6 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ತಪಾಸಣೆ ಬಳಿಕ ಆರೋಗ್ಯ ಕಾರ್ಯಕರ್ತರ ಸೂಚನೆಯಂತೆ ಮನೆಯಲ್ಲೇ ಪ್ರತ್ಯೇಕವಾಗಿದ್ದರು. ಸೋಮವಾರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಸಂಜೆ 6 ಗಂಟೆಗೆ ರಾಜೀವ್​ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ ದಾಖಲಾಗಿ ತಪಾಸಣೆಗೆ ಒಳಗಾಗಿದ್ದರು. ಮಂಗಳವಾರ ಬಂದ ಪ್ರಯೋಗಾಲಯದ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಹೀಗಾಗಿ ಇವರ ಪತ್ನಿ, ಇಬ್ಬರು ಮಕ್ಕಳು, ತಾಯಿ ಹಾಗೂ ಇವರ ಸಂಪರ್ಕ ಹೊಂದಿದ್ದ 9 ಮಂದಿಯ ಸ್ವಾ್ಯಬ್ ಮತ್ತು ರಕ್ತದ ಮಾದರಿಯನ್ನು ಸಂಗ್ರಹಿಸಿ ತಪಾಸಣೆಗೆ ಕಳುಹಿಸಲಾಗಿದ್ದು, ಎಲ್ಲರನ್ನೂ ಮನೆಯಲ್ಲೇ ಪತ್ಯೇಕವಾಗಿ ನಿಗಾದಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ.
ಟೆಕ್ಕಿ ಮಗಳಿಗೆ ಪಿಯು ಪರೀಕ್ಷೆ?
ಸೋಂಕು ದೃಢಪಟ್ಟಿರುವ ಟೆಕ್ಕಿಯ ಮಗಳು ದ್ವಿತೀಯ ಪಿಯುಸಿ ಓದುತ್ತಿದ್ದು, ಆಕೆಗೆ ಬುಧವಾರ ಪರೀಕ್ಷೆ ಇದೆ. ಆದರೆ ತಂದೆಯಲ್ಲಿ ಸೋಂಕು ದೃಢಪಟ್ಟಿರುವುದರಿಂದ ಆಕೆಯನ್ನೂ ನಿಗಾದಲ್ಲಿ ಇರಿಸಲಾಗಿದೆ. ಹೀಗಾಗಿ ಆಕೆ ಪರೀಕ್ಷೆ ಬರೆಯಬೇಕೆ? ಬೇಡವೇ? ಎಂಬ ಬಗ್ಗೆ ಸಚಿವರೊಂದಿಗೆ ರ್ಚಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಒಪ್ಪಿಗೆ ಸಿಕ್ಕರೆ ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುವುದು. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ಪಿಯು ಮಂಡಳಿ ನಿರ್ದೇಶಕರು ತಿಳಿಸಿದ್ದಾರೆ.
ರಾಜ್ಯದಲ್ಲಿ ಕರೊನಾ ಸೋಂಕಿರುವ ನಾಲ್ಕು ಪ್ರಕರಣಗಳು ದೃಢಪಟ್ಟಿದೆ. ಆದರೆ, ಹೊರಗಿನಿಂದ ಬಂದವರಲ್ಲಿ ಸೋಂಕು ಪತ್ತೆಯಾಗಿದ್ದು, ರಾಜ್ಯದಲ್ಲಿ ಅಂತಹವರು ಯಾರೂ ಇಲ್ಲ.
| ಯಡಿಯೂರಪ್ಪ, ಮುಖ್ಯಮಂತ್ರಿ
ಯಾವುದೇ ರೋಗಗಳಿಗೂ ಆತಂಕ ಪಡುವ ಅಗತ್ಯವಿಲ್ಲ. ಬದಲಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಯಾವುದೇ ಕಾಲ ಇರಲಿ ವೈಯಕ್ತಿಕ ಸ್ವಚ್ಛತೆಗೆ ಒತ್ತು ನೀಡಬೇಕು. ದುಬೈ, ಸಿಂಗಾಪುರ ಸೇರಿ ಬಹುತೇಕ ರಾಷ್ಟ್ರಗಳಲ್ಲಿ ಹೆಚ್ಚಿನ ಬಿಸಿಲಿದೆ. ಹೀಗಾಗಿ ಬಿಸಿಲಿಗೆ ಸೋಂಕು ಹರಡುವುದಿಲ್ಲ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ.
– ಡಾ. ಸುದರ್ಶನ್ ಬಲ್ಲಾಳ್, ಮುಖ್ಯಸ್ಥರು, ಮಣಿಪಾಲ ಆಸ್ಪತ್ರೆ.
ಉಷ್ಣಾಂಶ ಹೆಚ್ಚಿರುವ ಪ್ರದೇಶ, ಆಹಾರ ಪದ್ಧತಿ ವಿಭಿನ್ನವಾದ್ದರಿಂದ ಕರೊನಾ ವೈರಸ್ ಹರಡುವುದಿಲ್ಲವೆಂಬ ಮಾಹಿತಿಯಿದ್ದು, ದಿಗಿಲುಗೊಳ್ಳುವುದು ಬೇಡ.
| ಬಿ.ಶ್ರೀರಾಮುಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ
ಹೀಗೆ ಮಾಡಿ…
VIDEO| ಕೊರೊನಾ ಹರಡಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ: ಶೇಕ್​ ಹ್ಯಾಂಡ್​ ಬದಲು ಕೈ ಮುಗಿಯಲು ಸಿಎಂ ಬಿಎಸ್​ವೈ ಮನವಿ

ಬೆಂಗಳೂರಿನಲ್ಲಿ ನಾಲ್ವರಿಗೆ ಕೊರೊನಾ ವೈರಸ್​ ಸೋಂಕು: ಟ್ವೀಟ್​ ಮಾಡಿ ದೃಢಪಡಿಸಿದ ಆರೋಗ್ಯ ಸಚಿವ ಶ್ರೀರಾಮುಲು

VIDEO| ಕೊರೊನಾ ವೈರಸ್​ ಪೀಡಿತ ಟೆಕ್ಕಿ ಸಂಪರ್ಕಕ್ಕೆ ಬಂದವರ ತಪಾಸಣೆ: ರಾಜೀವ್​ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 11 =
Remember me
