|ಶ್ರೀಕಾಂತ್ ಶೇಷಾದ್ರಿಬೆಂಗಳೂರು
ಕರ್ನಾಟಕ ವಿಧಾನಸಭಾ ಚುನಾವಣೆಗೆ ಒಂದು ವರ್ಷಕ್ಕಿಂತ ಕಡಿಮೆ ಕಾಲಾವಧಿ ಇದೆ. ಈ ನಡುವೆ, ರಾಜಕೀಯ ಪಕ್ಷಗಳಿಗಿಂತ ಮುನ್ನ ಕಾರ್ಪೆರೇಟ್ ಕಂಪನಿ ಪ್ರತಿನಿಧಿಗಳು ಚುನಾವಣಾ ಕಾರ್ಯಾಚರಣೆ ಆರಂಭಿಸಿಬಿಟ್ಟಿದ್ದಾರೆ. ಸದ್ಯದ ಮಾಹಿತಿ ಪ್ರಕಾರ 27 ಕಂಪನಿಗಳು ರಾಜಕೀಯ ಪಕ್ಷ, ನಾಯಕರು, ಪಕ್ಷಗಳ ವಿವಿಧ ಘಟಕಗಳಲ್ಲಿ ಕೆಲಸ ಆರಂಭಿಸಿವೆ. ಎಬಿಎಂ, ಮೈಂಡ್​ಶೇರ್, ರಾಜಧರ್ಮ, ವೈರಲ್ ಬಾಕ್ಸ್, ಡಿಸೈನ್ ಬಾಕ್ಸ್, ಡೇಟಾ, ಐ ಪ್ಯಾಕ್, ಸ್ಮಾರ್ಟ್ ನೇತಾ, ವರಾಹಿ ಸದ್ಯ ಚಲಾವಣೆಯಲ್ಲಿರುವ ಹೆಸರುಗಳಾಗಿವೆ. ಈ ಕಂಪನಿಗಳು ಚುನಾವಣಾಪೂರ್ವ ಸಮೀಕ್ಷೆ ಮಾಡುವ ಹೊರತಾಗಿ, ನಿರಂತರವಾಗಿ ಕ್ಷೇತ್ರಗಳ ಪರಿಸ್ಥಿತಿ ಬಗ್ಗೆ ಮಾಹಿತಿಗಳನ್ನು ಅಪ್​ಡೇಟ್ ಮಾಡುವ, ತಂತ್ರಗಾರಿಕೆಯಲ್ಲಿ ಸಲಹೆ ನೀಡುವ ಜತೆಗೆ ಇಮೇಜ್ ವರ್ಧನೆ ಕಾರ್ಯದಲ್ಲೂ ತೊಡಗಿಕೊಂಡಿವೆ.
ಸದ್ಯಕ್ಕೆ ಚಲಾವಣೆಯಲ್ಲಿರುವ ಹೆಸರು ಪ್ರಶಾಂತ್ ಕಿಶೋರ್ ಅವರದ್ದು. ರಾಜ್ಯ ಪ್ರವಾಸ ನಡೆಸಿರುವ ಅವರು ಬಿಜೆಪಿ ನಾಯಕರೊಬ್ಬರ ಪುತ್ರನನ್ನು ಭೇಟಿ ಮಾಡಿದ್ದಾರೆ. ಪಕ್ಷದ ಹೈಪ್ರೊಫೈಲ್ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ. ಅವರು ಚಟುವಟಿಕೆಯನ್ನು ಅಷ್ಟೇ ಸೀಮಿತಗೊಳಿಸದೆ ಮಾಜಿ ಮುಖ್ಯಮಂತ್ರಿಯನ್ನೂ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಎರಡ್ಮೂರು ರೀತಿಯಲ್ಲಿ ಕಾರ್ಪೆರೇಟ್ ಚುನಾವಣಾ ಕೌಶಲ ಪ್ರಯೋಗವಾಗುತ್ತಿದೆ. ಕೆಲವು ಕಂಪನಿಗಳು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು 700 ಕೋಟಿ ರೂ.ನಿಂದ 1200 ಕೋಟಿ ರೂ.ಗೂ ಬೇಡಿಕೆ ಇಡುತ್ತಿವೆ ಎನ್ನಲಾಗಿದೆ. ಸರ್ವೆ ಮಾಡಿಕೊಡುವ ಕಾರ್ಯಕ್ಕೆ, ಇಮೇಜ್ ಬಿಲ್ಡಿಂಗ್​ಗೆ ಸಲಹೆ ನೀಡುವುದು ಹಾಗೂ ಕಾರ್ಯಾಚರಣೆಗೆ ಪ್ರತ್ಯೇಕ ಪ್ಯಾಕೇಜ್ ನಿಗದಿ ಮಾಡುತ್ತಿವೆ.
ಕಾಂಗ್ರೆಸ್ ಬಹಳ ಮುಂಚಿತವಾಗಿಯೇ ಡಿಸೈನ್ ಬಾಕ್ಸ್ ಎಂಬ ಕಂಪನಿಯನ್ನು ಇಮೇಜ್ ವರ್ಧನೆಗಾಗಿ ನೇಮಿಸಿಕೊಂಡಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗಾಗಿ ಈ ಕಂಪನಿ ದುಡಿಯುತ್ತಿದೆ. ಇದರ ಹೊರತಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪರವಾಗಿ ಒಂದು ಕಂಪನಿ ಕಾರ್ಯಾಚರಣೆ ಆರಂಭಿಸಿದೆ. ಈ ಕಂಪನಿ ಮಾಹಿತಿ ಬಹಿರಂಗಪಡಿಸಲು ಸಿದ್ದರಾಮಯ್ಯ ಆಪ್ತರು ಸಿದ್ಧರಿಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷ ಎಂ.ಬಿ. ಪಾಟೀಲ್ ಪರವಾಗಿ ಇತ್ತೀಚೆಗಷ್ಟೇ ಒಂದು ಕಂಪನಿ ಜವಾಬ್ದಾರಿ ತೆಗೆದುಕೊಂಡು ಕೆಲಸ ಆರಂಭಿಸಿದೆ. ತಮಿಳುನಾಡಿನಲ್ಲಿ ಸ್ಟಾಲಿನ್ ಪರವಾಗಿ ಕೆಲಸ ಮಾಡಿದ ಕಂಪನಿ ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾಗಿ ಚಟುವಟಿಕೆ ಶುರುಮಾಡಿದ್ದು, ಕೋರಮಂಗಲದಲ್ಲಿ ಕಚೇರಿ ತೆರೆದಿದೆ.
ಬಿಜೆಪಿ ವಿಚಾರಕ್ಕೆ ಬಂದರೆ, ಕೆಲವು ತಿಂಗಳ ಹಿಂದೆ ದೆಹಲಿ ಮೂಲದ ಕಂಪನಿ ಚಟುವಟಿಕೆ ಆರಂಭಿಸಿದೆ. ದೆಹಲಿಯಿಂದಲೇ ಬಂದಿರುವ ದೊಡ್ಡ ತಂಡ ಕ್ಷೇತ್ರವಾರು ಮಾಹಿತಿ ಸಂಗ್ರಹಿಸಿ ನೇರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ನೀಡಲಿದೆ ಎಂಬ ಮಾಹಿತಿ ಇದೆ. ಈ ಮಾಹಿತಿ ಆಧರಿಸಿಯೇ ಅವರು ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇನ್ನೆರಡು ಕಂಪನಿಗಳು ಪಕ್ಷದ ರಾಜ್ಯಘಟಕಕ್ಕಾಗಿ ಕೆಲಸ ಮಾಡುತ್ತಿವೆ.
ನಮ್ಮದು ಗೌಪ್ಯ ಕಾರ್ಯಾಚರಣೆ. ಕ್ಷೇತ್ರಗಳಲ್ಲಿ ಹಂತಹಂತವಾಗಿ ಡೇಟ ಸಂಗ್ರಹಿಸಿ, ವಿಶ್ಲೇಷಣೆ ಮಾಡಿ, ನಮ್ಮ ಕ್ಲೈಂಟ್​ಗೆ ವರದಿ ನೀಡುತ್ತೇವೆ. ಜತೆಗೆ ಶಿಫಾರಸು ಮಾಡುತ್ತೇವೆ. ಅನುಷ್ಠಾನ ಮಾಡುವುದು ಅವರಿಗೆ ಬಿಟ್ಟ ವಿಚಾರ.
|ಅಜೇಯಚುನಾವಣಾ ತಂತ್ರಗಾರಿಕಾ ತಂಡದ ಸದಸ್ಯ
ಹೇಗೆ ನಡೆಯುತ್ತೆ ಕೆಲಸ?:ತಳಮಟ್ಟದ ಮಾಹಿತಿ ಸ್ಯಾಂಪಲ್ ಸಂಗ್ರಹ, ಡೇಟಾ ಆಧಾರದಲ್ಲಿ ವಿಶ್ಲೇಷಣೆ, ಬಳಿಕ ಪ್ಲಾನಿಂಗ್-ಇವು ಕಂಪನಿಗಳ ಸಾಮಾನ್ಯ ಚಟುವಟಿಕೆಗಳು. ಇದನ್ನು ಹೊರತಾಗಿ ಥರ್ಡ್ ಪಾರ್ಟಿ ಕ್ಯಾಂಪೇನ್, ವೋಟ್ ಬ್ಯಾಂಕ್ ಗಟ್ಟಿಗೊಳಿಸಲು ಸಲಹೆ, ಎದುರಾಳಿಯ ಪ್ರಭಾವ ತಗ್ಗಿಸಲು ಇರುವ ಹುಳುಕುಗಳ ಮೇಲೆ ಬೆಳಕು ಚೆಲ್ಲುವುದು ಮುಂತಾದವು ಈ ಕಾರ್ಪೆರೇಟ್ ರಾಜಕಿಯ ತಂತ್ರಗಾರಿಕೆ ಭಾಗವಾಗಿದೆ. ಈ ಹಿಂದೆಲ್ಲ ರಾಜಕೀಯ ನಾಯಕರು ಪಕ್ಷನಿಷ್ಠರಿಂದ ಸಂಗ್ರಹಿಸಿದ ಅಭಿಪ್ರಾಯವನ್ನು ನಂಬಿಕೊಳ್ಳುತ್ತಿದ್ದರು. ಈ ಅಭಿಪ್ರಾಯ ಉಲ್ಟಾ ಆಗುವ ಸಾಧ್ಯತೆ ಹೆಚ್ಚು. ನಿಷ್ಠೆ ತೋರಿಸಲು ಹಾಗೂ ಓಲೈಕೆಗಾಗಿ ತಮಗೆ ತೋಚಿದ್ದನ್ನು ಹೇಳುವುದರಿಂದ ಗ್ರೌಂಡ್ ರಿಪೋರ್ಟ್ ಸಿಗುವುದು ಕಷ್ಟ. ಈ ಕಾರಣಕ್ಕೆ ವಾಸ್ತವ ತಿಳಿದುಕೊಳ್ಳಲು ಕಾರ್ಪೆರೇಟ್ ಕಂಪನಿಗಳ ನೆರವು ಪಡೆಯುವುದು ರಾಜಕೀಯ ನಾಯಕರಿಗೂ ಅನಿವಾರ್ಯವಾಗಿದೆ.
ನಾಯಕರ ನಡುವೆ ಸಮೀಕ್ಷೆ ಸಮರ:ಕರ್ನಾಟಕದ ಸದ್ಯದ ಪರಿಸ್ಥಿತಿ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಖಾಸಗಿ ಕಂಪನಿಯಿಂದ ಸರ್ವೆ ಮಾಡಿಸಿ ರಾಹುಲ್ ಗಾಂಧಿ ಅವರಿಗೆ ವರದಿ ಒಪ್ಪಿಸಿದ್ದಾರೆ. ಆದರೆ, ರಾಹುಲ್ ಈ ವರದಿಯನ್ನು ಒಪ್ಪದೇ ತಿರಸ್ಕರಿಸಿದ್ದಾರೆಂದು ಸಿದ್ದರಾಮಯ್ಯ ಆಪ್ತರು ತಿಳಿಸಿದ್ದಾರೆ. ಡಿಕೆಶಿ ನೀಡಿದ ವರದಿ ಅವರಿಗೆ ಬೇಕಾದಂತೆ ಮಾಡಿಸಿಕೊಟ್ಟಿದ್ದಾರೆ. ಈ ಕಾರಣಕ್ಕೆ ರಾಹುಲ್ ಗಾಂಧಿ ಪ್ರತ್ಯೇಕ ಸಂಸ್ಥೆಗೆ ಸರ್ವೆ ಮಾಡಲು ಸೂಚಿಸಿದ್ದಾರೆ. ಬಳ್ಳಾರಿ ಮೂಲದ ವ್ಯಕ್ತಿಗೆ ಸೇರಿದ ಸಂಸ್ಥೆ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಕಚೇರಿ ಸ್ಥಾಪಿಸಿದ್ದು, 300 ಜನ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ಕಾರಿನ ಗಾಜನ್ನು ಒರೆಸುತ್ತ ಫಾಸ್ಟ್ಯಾಗ್ ಹಣ ಕಬಳಿಸುವವರ ಹಾವಳಿ?; ಹೊರಬಿತ್ತು ಅಸಲಿಯತ್ತು…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − sixteen =
Remember me
