ಬೆಂಗಳೂರು:ಗಣರಾಜ್ಯ ದಿನದ ಸಂದರ್ಭದಲ್ಲಿ ಆಡಳಿತ ಪಕ್ಷದ ಮೂವತ್ನಾಲ್ಕು ಶಾಸಕರಿಗೆ ನಿಗಮ, ಮಂಡಳಿಯ ಜವಾಬ್ದಾರಿ ದೊರೆತಿದೆ. ಅಳೆದು ತೂಗಿ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿರುವ ಸರ್ಕಾರ, ಇವರೆಲ್ಲರಿಗೂ ಸಂಪುಟ ದರ್ಜೆ ಸ್ಥಾನಮಾನದ ಜತೆಗೆ ಎರಡು ವರ್ಷದ ಕಾಲಾವಧಿಯ ಅವಕಾಶ ನೀಡಿದೆ. ನಾಲ್ಕಾರು ತಿಂಗಳಿನಿಂದಲೂ ನಿಗಮ, ಮಂಡಳಿ ನೇಮಕಕ್ಕೆ ಕಸರತ್ತು ನಡೆದೇ ಇತ್ತು. ಅನೇಕ ಬಾರಿ ಪಟ್ಟಿ ಪರಿಷ್ಕರಣೆ ಗೊಂಡಿತ್ತು. ಶುಕ್ರವಾರವೂ ಕೊನೆಯ ಹಂತದಲ್ಲಿ ಸಣ್ಣಪುಟ್ಟ ಬದಲಾವಣೆಗಳಾದವು.
ಕಾರ್ಯಕರ್ತರ ಪಟ್ಟಿ ಅಂತಿಮ:ಕಾರ್ಯಕರ್ತರಿಗೆ ನಿಗಮ, ಮಂಡಳಿಗಳಲ್ಲಿ ಅವಕಾಶ ನೀಡುವ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಲಾಗಿದೆ. ಕೊನೆ ಹಂತದಲ್ಲಿ ಸೇರ್ಪಡೆಗೊಂಡ ಕಲಬುರಗಿ ಭಾಗದ ಮುಖಂಡರನ್ನು ಸೇರಿಸುವ ವಿಚಾರದಲ್ಲಿ ಸ್ಪಷ್ಟತೆ ತಂದುಕೊಂಡು ಆದೇಶ ಹೊರಡಿಸಲು ಸಿಎಂ ನಿರ್ಧರಿಸಿ ದ್ದಾರೆ. ಖರ್ಗೆಯವರ ಶಿಫಾರಸು ಮಾಡಿದ್ದಾರೆಂದು ಕೆಲವು ಹೆಸರುಗಳು ಸಾರ್ವಜನಿಕ ವಾಗಿತ್ತು, ಹೀಗಾಗಿ ಆ ಹೆಸರನ್ನು ಕೈಬಿಟ್ಟರೆ ಬೇರೆ ಸಂದೇಶ ಹೋಗಲಿದೆ ಎಂಬ ಅಳುಕಿದೆ. ಇದೇ ಕಾರಣಕ್ಕೆ ಇನ್ನು ಎರಡು ಮೂರು ದಿನಗಳಲ್ಲೇ ಅಂತಿಮಗೊಳಿಸಿ ಇನ್ನೊಂದು ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ನೇಮಕದ ಹಿಂದಿನ ಬೆಳವಣಿಗೆ:ಐದಾರು ತಿಂಗಳ ಸರ್ಕಸ್ ಬಳಿಕ ನಿಗಮ, ಮಂಡಳಿ ನೇಮಕ ಪಟ್ಟಿ ಪ್ರಕಟಗೊಂಡಿದೆ. ಶಾಸಕರಿಗೆ ಮೊದಲ ಪಟ್ಟಿಯಲ್ಲಿ ಆದ್ಯತೆ ನೀಡಿದ್ದು, ಕಾರ್ಯಕರ್ತರಿಗೆ ಅವಕಾಶ ನೀಡುವ ಪಟ್ಟಿಯ ಗೊಂದಲ ಇನ್ನೂ ಪರಿಹಾರವಾದಂತಿಲ್ಲ. ಹಾಗೆಯೇ ಶಾಸಕರು ಹಾಗೂ ಕಾರ್ಯಕರ್ತರಿಗೆ ಏಕಕಾಲದಲ್ಲಿ ನಿಗಮ, ಮಂಡಳಿ ಘೋಷಿಸಬೇಕೆಂಬ ಪಕ್ಷದ ನಾಯಕ ರಾಹುಲ್ ಗಾಂಧಿ ಸೂಚನೆಯನ್ನು ಪಾಲಿಸಲಾಗಿಲ್ಲ. ಎಐಸಿಸಿ ಅಧ್ಯಕ್ಷರ ಮಧ್ಯಪ್ರವೇಶದ ಬಳಿಕ ಶಾಸಕರಿಗೆ ಅವಕಾಶ ಕೊಡುವ ಮೂಲಕ ಉಳಿದವರಲ್ಲಿ ಭರವಸೆ ಮೂಡಿಸುವ ಕೆಲಸ ನಡೆದಿದೆ. ಅಷ್ಟೇ ಅಲ್ಲದೇ, ಶಾಸಕರಿಗೆ ಮೊದಲ ಆದ್ಯತೆ ಕೊಡಬೇಕೆಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯತ್ನಕ್ಕೆ ಯಶ ಸಿಕ್ಕಿದೆ. ಕಾರ್ಯಕರ್ತರಿಗೆ ಅವಕಾಶ ಕೊಡಿಸುವ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಯತ್ನಕ್ಕೆ ಅಡೆತಡೆ ಹಾಗೇ ಬಾಕಿಯಾಗಿದೆ.
ವಲಸಿಗರಿಗೂ ಸ್ಥಾನ:ಪಟ್ಟಿ ಮೇಲು ನೋಟಕ್ಕೆ ಸಮತೋಲನ ಕಾಪಾಡುವಂತೆ ಕಂಡು ಬಂದಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಮೇಲಾಗಿರುವುದು ಸ್ಪಷ್ಟವಾಗಿದೆ. ಪಕ್ಷದವರು, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಬೆಂಬಲಿಗರಿಗೆ ಅವಕಾಶ ನೀಡಲಾಗಿದೆ. ಅದರಲ್ಲಿ ಸಿದ್ದರಾಮಯ್ಯ ಬೆಂಬಲಿತ ಶಾಸಕರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಚುನಾವಣೆಯ ಸಂದರ್ಭದಲ್ಲಿ ವಲಸೆ ಬಂದ ಶಿವಲಿಂಗೇಗೌಡ, ಎಸ್.ಆರ್. ಶ್ರೀನಿವಾಸ್ ಅವರಿಗೆ ಅವಕಾಶ ಸಿಕ್ಕಿದೆ.
ಸಚಿವಾಕಾಂಕ್ಷಿಗಳ ಅಸಮಾಧಾನ:ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಮೂರ್ನಾಲ್ಕು ಶಾಸಕರು ನಿಗಮ ಹುದ್ದೆ ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಿರಿತನ ಸಹಿತ ಬೇರೆಬೇರೆ ಕಾರಣಕ್ಕೆ ಸಚಿವ ಸ್ಥಾನವೇ ಬೇಕೆಂದು ಪಟ್ಟು ಹಿಡಿದಿದ್ದ ಕೆಲವು ಶಾಸಕರು ನಿಗಮ ಮಂಡಳಿ ಅಧ್ಯಕ್ಷ ಹುದ್ದೆ ಒಪ್ಪಿಕೊಂಡರೆ ಮುಂದೆ ಸಚಿವ ಸ್ಥಾನ ಸಿಗುವುದು ಅನುಮಾನ ಎಂಬ ಕಾರಣಕ್ಕೆ ಹುದ್ದೆ ಒಪ್ಪಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ. ಒಂದಿಬ್ಬರು ಶಾಸಕರು ಶುಕ್ರವಾರ ಸಂಜೆ ಬಳಿಕ ಫೋನ್  ಸ್ವಿಚ್ಡ್ ಆಫ್ ಮಾಡಿಕೊಂಡಿದ್ದು ಇದಕ್ಕೆ ಪುಷ್ಠಿ ನೀಡುವಂತಿದೆ.
ಸ್ಥಾನಮಾನ:ನಿಗಮ, ಮಂಡಳಿ ಅಧ್ಯಕ್ಷ ಸ್ಥಾನಗಳಿಗೆ ನೇಮಕಗೊಂಡವರಿಗೆ ಸಂಪುಟ ದರ್ಜೆ ಸ್ಥಾನ ದೊರೆತಲ್ಲಿ ಮಾಸಿಕ 60 ಸಾವಿರ ವೇತನ, 1.50 ಲಕ್ಷ ರೂ. ಮನೆ ಬಾಡಿಗೆ ಹಾಗೂ ವಾರ್ಷಿಕ ಆತಿಥ್ಯ ಭತ್ಯೆ 4.50 ಲಕ್ಷ ರೂ. ದೊರೆಯಲಿದೆ. ಅಷ್ಟೇ ಅಲ್ಲದೆ ರಾಜ್ಯದೊಳಗೆ ಪ್ರವಾಸಕ್ಕೆ ಪ್ರತಿ ದಿನಕ್ಕೆ 2,500 ರೂ., ಇಂಧನ ಭತ್ಯೆ ಕಿಮೀಗೆ 40 ರೂ. ಲಭ್ಯವಾಗಲಿದೆ. ಇತರ ಸೌಲಭ್ಯಗಳೆಂದರೆ, 20 ಲಕ್ಷ ರೂ. ಒಳಗಿನ ವಾಹನ, ಆರು ಸಿಬ್ಬಂದಿ ಕೂಡ ಬಳಸಿಕೊಳ್ಳಬಹುದು.
ಜಾತಿ ಲೆಕ್ಕಾಚಾರ:ಲಿಂಗಾಯತ- 9, ಒಕ್ಕಲಿಗ- 7, ಎಸ್ಟಿ- 6, ಎಸ್ಸಿ- 4, ಒಬಿಸಿ 6
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
