ಬೆಂಗಳೂರು:ಬೆಂಗಳೂರು ದಕ್ಷಿಣ ತಾಲೂಕಿನ ಕೋಣನಕುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ರ‍್ಯಾಪಿಡ್​ ಪರೀಕ್ಷೆ ಮಾಡಲು 200 ರೂ. ಬಿಲ್ ಮಾಡುವ ಮೂಲಕ ವೈದ್ಯಾಧಿಕಾರಿ ಹಣ ಲೂಟಿಗೆ ಮುಂದಾಗಿದ್ದಾರೆ. ಕೋಣನಕುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ವಯಂ ಆಸಕ್ತಿಯಿಂದ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಬರುವ ಸಾರ್ವಜನಿಕರಿಗೆ ಯಾವ ಕಾರಣಕ್ಕೆ ಪರೀಕ್ಷೆ ಮಾಡಿಕೊಳ್ಳುತ್ತಿದ್ದೀರಿ ಎಂದು ಕೇಳುತ್ತಾರೆ. ಈ ವೇಳೆ ಸಾರ್ವಜನಿಕರು ನಮ್ಮ ಕಚೇರಿಯಲ್ಲಿ ನೆಗೆಟಿವ್ ವರದಿ ಕೇಳಿದ್ದಾರೆ, ಊರಿಗೆ ಹೋಗಿ ಬಂದಿದ್ದೇವೆ, ಸೋಂಕು ಲಕ್ಷಣಗಳಿವೆ, ಬೇರೆ ಊರಿಗೆ ಹೋಗಲು ನೆಗೆಟಿವ್ ವರದಿ ಬೇಕು ಎಂದಾಕ್ಷಣ 200 ರೂ. ಶುಲ್ಕ ಪಾವತಿಸಿ ಎಂದು ಕೇಳುತ್ತಾರೆ. ಹಣ ಪಾವತಿಸುವುದಾಗಿ ಹೇಳಿದ ಕೂಡಲೇ ರಶೀದಿ ಹರಿದು ಕೊಡುತ್ತಾರೆ.
ರ‍್ಯಾಪಿಡ್​ ಪರೀಕ್ಷೆಗೆ ಹಣ ಕೊಡಲೇಬೇಕು:ಕರೊನಾ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಲು ಹೋದವರು ಹಣ ಕೇಳಿದ ಕುರಿತು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಆಸ್ಪತ್ರೆ ಸಿಬ್ಬಂದಿ, 48 ಗಂಟೆಗಳ ನಂತರ ವರದಿ ಬರುವ ಆರ್‌ಟಿಪಿಸಿಆರ್ ಕೋವಿಡ್ ಪರೀಕ್ಷೆಯನ್ನು ಮಾತ್ರ ಉಚಿತವಾಗಿ ಮಾಡಲಾಗುತ್ತದೆ. ತುರ್ತು ಸಂದರ್ಭದಲ್ಲಿ ವರದಿ ನೀಡಲು ರ‍್ಯಾಪಿಡ್​ ಪರೀಕ್ಷೆ ಮಾಡಲಾಗುತ್ತಿದ್ದು, ಇದಕ್ಕೆ 200 ರೂ. ಹಣ ಪಾವತಿಸಬೇಕು ಎನ್ನುತ್ತಾರೆ. ಕೊನೆಗೂ ಸಾರ್ವಜನಿಕರೊಬ್ಬರು ಹಣ ಪಾವತಿಸಿ ರ‍್ಯಾಪಿಡ್​ ಪರೀಕ್ಷೆ ಮಾಡಿಸಿಕೊಳ್ಳಬೇಕಾಯಿತು.ಸರ್ಕಾರದ ಆದೇಶ ಉಲ್ಲಂಘನೆ: ಪ್ರತಿನಿತ್ಯ ಬೆಂಗಳೂರು ನಗರ ಜಿಲ್ಲೆಯಲ್ಲಿ 8 ಸಾವಿರ ಕೋವಿಡ್ ಪರೀಕ್ಷೆ ಗುರಿ ಇಟ್ಟುಕೊಳ್ಳಲಾಗಿದೆ. ಹೆಚ್ಚು ಜನರನ್ನು ಕೋವಿಡ್ ಪರೀಕ್ಷೆ ಮಾಡುವ ಗುರಿ ಹೊಂದಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಉಚಿತ ಕೋವಿಡ್ ಪರೀಕ್ಷೆ ಮಾಡಲಾಗುವುದು. ಸೋಂಕು ಲಕ್ಷಣ ಕಂಡುಬಂದವರು ಹಾಗೂ ಅಗತ್ಯವಿದ್ದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಿಳಿಸಿದ್ದಾರೆ. ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಭ್ರಷ್ಟಾಚಾರಕ್ಕೆ ಇಳಿದಿದ್ದಾರೆ.
ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲರಿಗೂ ಉಚಿತ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಆದರೆ, ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿ ಖಾತೆಗೆ ಜಮೆ ಮಾಡುವುದಾಗಿ ಹಣ ಪಡೆಯುವುದು ಅನಧಿಕೃತ ಕಾರ್ಯವಾಗಿದೆ. ಈ ಬಗ್ಗೆ ಪರಿಶೀಲಿಸಿ ಹಣ ಪಡೆದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು.|ಡಾ. ಶ್ರೀನಿವಾಸ್ಬೆಂಗಳೂರು ನಗರ ಜಿಲ್ಲೆ ಆರೋಗ್ಯಾಧಿಕಾರಿ
ರಾಜ್ಯದ ಹಲವೆಡೆ ಹತ್ತು ದಿನ ನೈಟ್ ಕರ್ಫ್ಯೂ; ನಿಯಮ ಪಾಲಿಸದಿದ್ದರೆ ಮುಂದಿದೆ ಲಾಕ್​ಡೌನ್​!?

ಹೆಚ್ಚುತ್ತಿದೆ ಕೋವಿಡ್ ಸೋಂಕಿತರ ಸಂಖ್ಯೆ, ಸಕ್ರಿಯ ಪ್ರಕರಣಗಳು 50 ಸಾವಿರಕ್ಕೂ ಅಧಿಕ, ಮರಣ ಪ್ರಮಾಣದಲ್ಲೂ ಹೆಚ್ಚಳ!

ಕರೊನಾ ಎರಡನೇ ಅಲೆ ಯಾವಾಗ ಮುಗಿಯುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ..

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 − 5 =
Remember me
