| ಗೋವಿಂದರಾಜು ಚಿನ್ನಕುರ್ಚಿ, ಬೆಂಗಳೂರುಹೈಕೋರ್ಟ್​ ಆದೇಶದಂತೆ ಭ್ರಷ್ಟಾಚಾರ ನಿಗ್ರಹ ದಳ ರದ್ದು ಮಾಡಿ ಲೋಕಾಯುಕ್ತ ಸಂಸ್ಥೆಗೆ ವಿಲೀನಕ್ಕೆ ಸಜ್ಜಾಗಿರುವ ಕರ್ನಾಟಕ ದೇಶದಲ್ಲಿ ಭ್ರಷ್ಟಾಚಾರದಲ್ಲಿ 4ನೇ ಸ್ಥಾನ ಪಡೆದಿದೆ. ಮೊದಲ ಸ್ಥಾನದಲ್ಲಿ ಮಹಾರಾಷ್ಟ್ರ 2 ಮತ್ತು 3ನೇ ಸ್ಥಾನದಲ್ಲಿ ಪಂಜಾಬ್​ ಮತ್ತು ತಮಿಳುನಾಡುಗಳಿವೆ.
ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋ(ಎನ್​ಸಿಆರ್​ಬಿ) ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿಅಂಶಗಳಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಆಯಾ ರಾಜ್ಯಗಳಲ್ಲಿ ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ, ಲಂಚ ಸ್ವೀಕಾರ, ಸರ್ಕಾರದ ಅಧಿಕಾರ, ಹಣ ದುರುಪಯೋಗವನ್ನು ತಡೆಗಟ್ಟುವ ಸಲುವಾಗಿ ಭ್ರಷ್ಟಾಚಾರ ನಿಗ್ರಹ ದಳ, ವಿಚಕ್ಷಣ ದಳ ಮತ್ತು ಲೋಕಾಯುಕ್ತ ಸಂಸ್ಥೆ ಕರ್ತವ್ಯ ನಿರ್ವಹಿಸುತ್ತಿವೆ. ಈ ಸಂಸ್ಥೆಗಳು 2020ರಲ್ಲಿ 3,123 ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕೇಸ್​ ದಾಖಲಿಸಿದ್ದರೇ 2021ರಲ್ಲಿ 3,745 ಪ್ರಕರಣ ದಾಖಲಿಸಿವೆ. ಇದರಲ್ಲಿ 2,532 ಟ್ರಾಪ್​, 398 ಆದಾಯಕ್ಕಿಂತ ಹೆಚ್ಚಿನ ಗಳಿಕೆ ಪ್ರಕರಣ, 511 ಅಧಿಕಾರ ದುರುಪಯೋಗ ಪ್ರಕರಣಗಳು ಸೇರಿವೆ. ಕರ್ನಾಟಕದಲ್ಲಿ 2021ನೇ ಸಾಲಿನಲ್ಲಿ 360 ಕೇಸುಗಳು ದಾಖಲಾಗಿವೆ. ಮೊದಲ ಮೂರು ಸ್ಥಾನದಲ್ಲಿ ಇರುವ ಮಹಾರಾಷ್ಟ್ರದಲ್ಲಿ 773, ಪಂಜಾಬ್​ 501 ಮತ್ತು ತಮಿಳುನಾಡಿನಲ್ಲಿ 423 ಕೇಸುಗಳು ದಾಖಲಾಗಿವೆ. ಕರ್ನಾಟಕದಲ್ಲಿ 1,022 ಭ್ರಷ್ಟಾಚಾರ ಪ್ರಕರಣಗಳು ತನಿಖೆ ಹಂತದಲ್ಲಿವೆ. 2021ರಲ್ಲಿ 360 ಪ್ರಕರಣಗಳು ತನಿಖೆ ಬಾಕಿ ಉಳಿದಿವೆ. ಇನ್ನೂ 1746 ಪ್ರಕರಣಗಳು ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿವೆ. ಇದರಲ್ಲಿ 39 ಕೇಸು ವಿಚಾರಣೆ ನಡೆಯದೆ ಇತ್ಯರ್ಥವಾಗಿವೆ. 87 ಕೇಸಿಗೆ ತಡೆಯಾಜ್ಞೆ ಲಭ್ಯವಾಗಿದೆ. 38 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಪ್ರಕಟವಾಗಿದೆ. 102 ಕೇಸ್​ಕೋರ್ಟ್​ ವಜಾಗೊಳಿಸಿದೆ. ಒಟ್ಟಾರೆ ರಾಜ್ಯದಲ್ಲಿ ಶಿಕ್ಷೆಪ್ರಮಾಣ ಶೇ.26.2 ಮಾತ್ರ. 363 ಭ್ರಷ್ಟ ಅಧಿಕಾರಿಗಳನ್ನು ಬಂಧಿಸಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಇದರಲ್ಲಿ 45 ಮಂದಿಗೆ ಶಿಕ್ಷೆಪ್ರಕಟವಾಗಿದೆ. 153 ಮಂದಿ ನಿರಪರಾಧಿ ಎಂದು ಘೋಷಣೆ ಮಾಡಲಾಗಿದೆ. 31 ಅಪರಾಧಿಗಳಿಗೆ ಸಣ್ಣ ಪ್ರಮಾಣ ಶಿಕ್ಷೆ ಪ್ರಕಟವಾಗಿದೆ ಎಂದು ಎನ್​ಸಿಆರ್​ಬಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮಕ್ಕಳ ಮೇಲಿನ ಕ್ರೈಂ ಏರಿಕೆ2020ಕ್ಕೆ ಹೋಲಿಸಿದರೆ 2021ರಲ್ಲಿ ಒಟ್ಟಾರೆ ಅಪರಾಧಗಳ ಪ್ರಮಾಣ ಶೇ.11 ಇಳಿದಿದೆ. ಆದರೆ, ಮಕ್ಕಳ ವಿರುದ್ಧದ ಅಪರಾಧ ಚಟುವಟಿಕೆಗಳು ಶೇ. 20 ಹೆಚ್ಚಿದೆ. ಈ ರೀತಿಯ ಪ್ರಕರಣಗಳು ಪಂಜಾಬ್​ನಲ್ಲಿ ಅಧಿಕವಾಗಿದೆ. ಮಕ್ಕಳ ಅಪಹರಣ ಪ್ರಕರಣಗಳಲ್ಲೂ ಗಣನೀಯವಾಗಿ ಏರಿಕೆಯಾಗಿದ್ದು, 2020ರಲ್ಲಿ 1032 ಅಪಹರಣ ಪ್ರಕರಣಗಳಲ್ಲಿ 1080 ಮಕ್ಕಳು ಸಂತ್ರಸ್ತರಾಗಿದ್ದರೆ 2021ರಲ್ಲಿ ಅದು 1450ಕ್ಕೆ ಏರಿದೆ. 1372 ಅಪ್ರಾಪ್ತ ಬಾಲಕಿಯರ ಕೆಂಗೆ ಒಳಗಾಗಿದ್ದಾರೆ. ಈ ಸಂಖ್ಯೆ 2020ರಲ್ಲಿ 984 ಆಗಿತ್ತು. ಬಲವಂತದ ಮದುವೆಗಾಗಿ ಬಾಲಕಿಯರ ಅಪಹರಣ ನಡೆದಿದೆ. ಎಲ್ಲ 28 ರಾಜ್ಯಗಳಲ್ಲಿ ಮಕ್ಕಳ ವಿರುದ್ಧ ನಡೆದಿರುವ ಅಪರಾಧಗಳ ಸಂಖ್ಯೆ 1,40,839 ಆಗಿದೆ. ಅತ್ಯಾಚಾರ ಹಾಗೂ ಕೊಲೆ ಪ್ರಕರಣ ನಾಲ್ಕರಿಂದ ಮೂರಕ್ಕೆ ಇಳಿದಿದೆ. ಭ್ರಾತೃ ಹತ್ಯೆ 11ರಿಂದ 9ಕ್ಕೆ ಇಳಿದಿದೆ ಎಂದು ಕೆಮ್​ ಇನ್​ ಇಂಡಿಯಾ ವರದಿಯಲ್ಲಿ ಎನ್​ಸಿಆರ್​ಬಿ ಕಳವಳಕಾರಿ ಮಾಹಿತಿಗಳನ್ನು ದಾಖಲಿಸಿದೆ.
ಸೈಬರ್​ ಕ್ರೈಂನಲ್ಲಿ ಬೆಂಗಳೂರು ಫಸ್ಟ್​
ಜಾಗತಿಕ ಸಮಸ್ಯೆ ಆಗಿರುವ ಸೈಬರ್​ ಅಪರಾಧ ಪ್ರಕರಣಗಳಲ್ಲಿ ದೇಶದ ಮಹಾನಗರಗಳ ಪೈಕಿ ಬೆಂಗಳೂರು ನಗರ (6423 ಪ್ರಕರಣ) ಮೊದಲ ಸ್ಥಾನ ಎಂಬ ಕುಖ್ಯಾತಿಗೆ ಒಳಗಾಗಿದೆ. ಇನ್ನೂ ರಾಜ್ಯಗಳ ಪೈಕಿ ಕರ್ನಾಟಕ (8136 ಕೇಸು) 3ನೇ ಸ್ಥಾನದಲ್ಲಿದೆ. ಎನ್​ಸಿಆರ್​ಬಿ ಪ್ರಕಾರ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿ ಇದ್ದರೇ 2 ಮತ್ತು 3ನೇ ಸ್ಥಾನದಲ್ಲಿ ಹೈದರಾಬಾದ್​ (3,303 ಕೇಸು) ಮತ್ತು ಮುಂಬೈ (2883 ಕೇಸು) ಮಹಾನಗರಗಳು ಇವೆ. ಅದೇ ರೀತಿ ರಾಜ್ಯಗಳ ಪೈಕಿ ತೆಲಂಗಾಣ (10,303) ಮತ್ತು ಉತ್ತರ ಪ್ರದೇಶ (8829) ಮೊದಲ ಎರಡು ಸ್ಥಾನದಲ್ಲಿವೆ. ಇದು ಸೈಬರ್​ ಪ್ರಕರಣಗಳ ದಾಖಲೆ ಮತ್ತು ತನಿಖೆ ಚುರುಕಿನಲ್ಲಿ ನಡೆಯುತ್ತಿರುವುದನ್ನು ಪ್ರತಿಬಿಂಬಿಸುತ್ತದೆ ಎಂದು ಸೈಬರ್​ ತಜ್ಞರ ವಾದವಾಗಿದೆ. ಕರ್ನಾಟಕದಲ್ಲಿ ದಾಖಲಾಗಿರುವ 8136 ಪ್ರಕರಣಗಳ ಪೈಕಿ ಕ್ರೆಡಿಟ್​, ಡೆಬಿಟ್​ ಕಾರ್ಡ್​ ಬಳಸಿ 1624 ವಂಚನೆ, ಎಟಿಎಂನಲ್ಲಿ 1899, ಆನ್​ಲೈನ್​ ಚೀಟಿಂಗ್​ 4823, ಒಟಿಪಿ 2028 ವಂಚನೆ, ನಕಲಿ ಸ್ವ&ವಿವರ ಹಾಕಿಕೊಂಡು 123 ವಂಚನೆ ಮಾಡಿದ್ದಾರೆ. ಇನ್ನೂ ಬ್ಲ್ಯಾಕ್​ಮೇಲ್​, ಬೆದರಿಕೆ ಮೇಲ್​ನಲ್ಲಿ 689, ಸುಳ್ಳು ಸುದ್ದಿ 179 ಪ್ರಸಾರ ಮತ್ತು 319 ಲೈಂಗಿಕ ದೌರ್ಜನ್ಯ ಪ್ರಕರಣಗಳು, 3 ರಾಜಕೀಯ ವಿಚಾರಕ್ಕೆ ಪ್ರಕರಣಗಳು ದಾಖಲಾಗಿವೆ ಎಂದು ಎನ್​ಸಿಆರ್​ಬಿ ವರದಿಯಲ್ಲಿ ಬೆಳಕಿಗೆ ಬಂದಿದೆ.
ಜಾಲತಾಣದಲ್ಲಿ 224 ಲೈಂಗಿಕ ಕಿರುಕುಳ: ಬೆಂಗಳೂರು ನಗರದಲ್ಲಿ ದಾಖಲಾಗಿರುವ 6423 ಸೈಬರ್​ ಕೆಂಗಳನ್ನು ಹೆಚ್ಚಾಗಿ ಖದೀಮರು ಕಂಪ್ಯೂಟರ್​ ಬಳಸಿ 4,968 ಕೃತ್ಯ ಎಸಗಿದ್ದಾರೆ. ಅಲ್ಲದೆ, 6038 ವಂಚನೆ ಪ್ರಕರಣಗಳು ಆಗಿವೆ. ಉಳಿದಂತೆ 62 ಬೆದರಿಕೆ, 24 ವೈಯಕ್ತಿಕ ದ್ವೇಷ, 224 ಲೈಂಗಿಕ ಕಿರುಕುಳ ನೀಡಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 4 =
Remember me
