|ಹರೀಶ್ ಬೇಲೂರುಬೆಂಗಳೂರು
ಇದು ಬೇಲಿಯೇ ಹೊಲ ಮೇಯ್ದ ಕಥೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಪ ನೋಂದಣಿ ಕಚೇರಿಗಳಲ್ಲಿ ಆಸ್ತಿ, ಸ್ಥಿರಾಸ್ತಿ, ಕರಾರುಪತ್ರ, ಸಾಲ ತೀರುವಳಿ, ಋಣಬಾಧ್ಯತಾ ಪತ್ರ ಹಾಗೂ ಸಾಗುವಳಿ ಜಮೀನು ಒಪ್ಪಂದ ನೋಂದಣಿಗೆ ಜನಸಾಮಾನ್ಯರು ಪಾವತಿಸುವ ನೂರಾರು ಕೋಟಿ ರೂಪಾಯಿ ಮುದ್ರಾಂಕ ಶುಲ್ಕ ಸರ್ಕಾರದ ಖಜಾನೆ ಬದಲಾಗಿ ಅಧಿಕಾರಿಗಳು ಮತ್ತು ನೌಕರರ ವೈಯಕ್ತಿಕ ಬ್ಯಾಂಕ್ ಖಾತೆ ಸೇರುತ್ತಿರುವ ವಿಚಾರ ಬಹಿರಂಗವಾಗಿದೆ.
ರಾಜ್ಯದಲ್ಲಿರುವ 252 ಉಪ ನೋಂದಣಿ ಕಚೇರಿಗಳಲ್ಲಿ ಜನರಿಂದ ಸ್ವೀಕೃತವಾಗುವ ಮುದ್ರಾಂಕ ಶುಲ್ಕವನ್ನು ಸರ್ಕಾರಕ್ಕೆ ಜಮೆ ಮಾಡದ ಅಧಿಕಾರಿಗಳು, ಕಾನೂನುಬಾಹಿರವಾಗಿ ತಮ್ಮ ವೈಯಕ್ತಿಕ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಅಲ್ಲದೆ ಹವಾಲದಂತಹ ವ್ಯವಹಾರಗಳಿಗೂ ಸರ್ಕಾರಿ ಹಣ ಬಳಸಿಕೊಳ್ಳುತ್ತಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇನ್ಮುಂದೆ ನಗದು ಹಾಗೂ ಡಿಮಾಂಡ್ ಡ್ರಾಫ್ಟ್ ಸ್ವೀಕರಿಸುವುದನ್ನು ನಿಷೇಧಿಸಿ, ಎಲ್ಲ ಹಣಕಾಸು ವ್ಯವಹಾರ ಬ್ಯಾಂಕ್ ಅಥವಾ ಡಿಜಿಟಲ್ ಪೇಮೆಂಟ್ ಮುಖಾಂತರವೇ ಆಗಬೇಕೆಂದು ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಹೆಚ್ಚು ಆದಾಯ ಬರುವ ಇಲಾಖೆಗಳಿಗೆ ಸರ್ಕಾರ ಪ್ರತಿ ವರ್ಷ ರಾಜಸ್ವ ಗುರಿ ನಿಗದಿಪಡಿಸುತ್ತದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 2019-20ರಲ್ಲಿ 11,828 ಕೋಟಿ ರೂ. ಹಾಗೂ 2020-21ನೇ ಸಾಲಿನಲ್ಲಿ 12,655 ಕೋಟಿ ರೂ. ಆದಾಯ ಸಂಗ್ರಹಣೆ ಗುರಿ ನೀಡಲಾಗಿತ್ತು. ಆದರೆ, ಇಲಾಖೆ ಈ ಗುರಿ ಮುಟ್ಟಿರಲಿಲ್ಲ. ಕರೊನಾ ಕಾರಣಕ್ಕೆ ನೋಂದಣಿ ಪ್ರಮಾಣ ಕಡಿಮೆಯಾಗುವ ಜತೆಗೆ ಮುದ್ರಾಂಕ ಶುಲ್ಕವನ್ನು ಸರ್ಕಾರಕ್ಕೆ ಜಮೆ ಮಾಡದೆ ಅಧಿಕಾರಿಗಳು ತಮ್ಮ ವೈಯಕ್ತಿಕ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುವುದರಿಂದ ವಾರ್ಷಿಕವಾಗಿ ನೂರಾರು ಕೋಟಿ ರೂ. ಆದಾಯ ಸೋರಿಕೆಯಾಗುತ್ತಿದೆ ಎಂದು ಅಂದಾಜಿಸಲಾಗಿದೆ.
ಇಲ್ಲ ಕಠಿಣ ಕ್ರಮ:ಕೆಲ ಉಪನೋಂದಣಿ ಕಚೇರಿಗಳಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿಕೊಂಡಿರುವುದು ಸಾಬೀತಾದರೂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿಲ್ಲ. ಸರ್ಕಾರಕ್ಕೆ ನಷ್ಟವಾಗಿರುವ ರಾಜಸ್ವವನ್ನು ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕು. ಅಲ್ಲದೆ, ವೈಯಕ್ತಿಕ ಖಾತೆಗಳಿಗೆ ಜಮಾವಣೆ ಮಾಡಿಕೊಂಡಿರುವ ಹಣವನ್ನು ವಾಪಸ್ ಪಡೆಯಬೇಕು. ಆದರೆ, ಈವರೆಗೆ ಸರಿಯಾಗಿ ವಸೂಲಿಯನ್ನೂ ಮಾಡಿಲ್ಲ. ಕೆಲ ಪ್ರಕರಣಗಳಲ್ಲಿ ಮಾತ್ರವೇ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಲೆಕ್ಕ ಪರಿಶೋಧನೆ ನಡೆಸಿಲ್ಲ:ಸರ್ಕಾರಕ್ಕೆ ಜಮೆ ಆಗಬೇಕಾದ ಆದಾಯ ಎಲ್ಲೆಲ್ಲಿ ನಷ್ಟವಾಗಿದೆ ಎಂಬುದರ ಬಗ್ಗೆ ಪ್ರತಿ ವರ್ಷ ಇಲಾಖೆ ಲೆಕ್ಕಪರಿಶೋಧನೆ ನಡೆಸಬೇಕು. ಆದರೆ ಮಾಡುತ್ತಿಲ್ಲ.
ಡಿಜಿಟಲ್ ಪೇಮೆಂಟ್​ಗೆ ಆದೇಶ:ಎಲ್ಲ ಉಪ ನೋಂದಣಿ ಕಚೇರಿಗಳಲ್ಲಿ ನಗದು ಮತ್ತು ಡಿಮಾಂಡ್ ಡ್ರಾಪ್ಟ್ ಸ್ವೀಕರಿಸುವುದನ್ನು ನಿಷೇಧಿಸಿರುವುದಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸುತ್ತೋಲೆ ಹೊರಡಿಸಿದೆ. ಎಲ್ಲ ಹಣಕಾಸು ವ್ಯವಹಾರಗಳನ್ನು ಬ್ಯಾಂಕ್​ನಲ್ಲಿ ಡಿಜಿಟಲ್ ಪೇಮೆಂಟ್ ಮೂಲಕ ನಡೆಸಬೇಕು. ಖಜಾನೆ ತಂತ್ರಾಂಶ ಮತ್ತು ಕಾವೇರಿ ತಂತ್ರಾಂಶವನ್ನು ಲಿಂಕ್ ಮಾಡುವವರೆಗೆ ಹಣ ಪಾವತಿಸಿರುವ ಬಗ್ಗೆ ಖಚಿತಪಡಿಸಿಕೊಂಡು ಉಪನೋಂದಣಾಧಿಕಾರಿಗಳು ಪ್ರಮಾಣೀಕರಿಸಿದ ನಂತರವೇ ನೋಂದಣಿ ಮಾಡಬೇಕು ಎಂದು ಇಲಾಖೆ ಆದೇಶಿಸಿದೆ.
ಅಧಿಕಾರಿಗಳಿಂದಲೇ ನಡೆಯುತ್ತೆ ಹ್ಯಾಕ್:ಕೆಲ ಅಧಿಕಾರಿಗಳು, ಆಪರೇಟರ್​ಗಳು, ಟೆಕ್ನಿಷಿಯನ್​ಗಳು ಸರ್ಕಾರಕ್ಕೆ ಜಮೆ ಮಾಡಿದ ಹಣವನ್ನು ಹ್ಯಾಕ್ ಮಾಡಿ ಲೂಟಿ ಮಾಡುತ್ತಾರೆ. ಸರ್ಕಾರದ ಕಂಪ್ಯೂಟರ್, ಸಾಫ್ಟ್​ವೇರ್, ಲಾಗಿನ್ ಐಡಿ ಹಾಗೂ ಇ-ಮೇಲ್​ಗಳನ್ನು ಯಾರೂ ಓಪನ್ ಮಾಡುವಂತಿಲ್ಲ. ಸಂಬಂಧಿತ ಅಧಿಕಾರಿಗಳಷ್ಟೇ ತೆರೆಯಬೇಕು. ಆದರೆ, ಈ ದಂಧೆಯಲ್ಲಿ ಭಾಗಿಯಾಗುವ ಅಧಿಕಾರಿಗಳು ವ್ಯವಸ್ಥಿತ ತಂಡ ರಚಿಸಿಕೊಂಡು ಸೈಬರ್ ಹ್ಯಾಕ್ ಮಾಡಿ ಕೋಟ್ಯಂತರ ರೂ. ಹಣ ಲಪಟಾಯಿಸಿದ್ದಾರೆ.
ಹಣಕ್ಕೆ ಭದ್ರತೆ ಇಲ್ಲ:ಸರ್ಕಾರಕ್ಕೆ ಜಮೆ ಮಾಡಿದ ಕೋಟ್ಯಂತರ ರೂ.ಗಳಿಗೆ ಭದ್ರತೆ ಇಲ್ಲದಂತಾಗಿದೆ. ಇದರಿಂದ ಪ್ರತಿ ವರ್ಷ ಉಪನೋಂದಣಿ ಕಚೇರಿಗಳಲ್ಲಿ ಸಾವಿರಾರು ದುರ್ಬಳಕೆ ಪ್ರಕರಣಗಳು ನಡೆಯುತ್ತವೆ. ಕೆಲವೊಂದು ನೋಂದಣಿ ಕಚೇರಿಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ದುರ್ಬಳಕೆ ಪ್ರಕರಣಗಳು ನಡೆದಿವೆ. ಆದರೆ. ಬೆರಳಣಿಕೆಯಷ್ಟು ಪ್ರಕರಣ ಮಾತ್ರ ಬೆಳಕಿಗೆ ಬರುತ್ತಿವೆ.
ನೋಂದಣಿಗೆ ಜನ ಪಾವತಿಸುವ ಕೋಟ್ಯಂತರ ರೂಪಾಯಿ ಮುದ್ರಾಂಕ ಶುಲ್ಕವನ್ನು ಸರ್ಕಾರಕ್ಕೆ ಜಮೆ ಮಾಡದೆ ಅನಧಿಕೃತ ವಾಗಿ ವೈಯಕ್ತಿಕ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.
|ಆರ್.ಅಶೋಕ್ಕಂದಾಯ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − seven =
Remember me
